ಹತ್ಯೆಯಾದ ಹರ್ಷ ಮನೆಗೆ ಬಿಎಸ್​ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ

ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹರ್ಷ ಕುಟುಂಬಸ್ಥರಿಗೆ ಬಿಎಸ್ ವೈ ಹಸ್ತಾಂತರ ಮಾಡಿದರು.

Written by - Zee Kannada News Desk | Last Updated : Mar 6, 2022, 02:37 PM IST
  • ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ
  • ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದ ಯಡಿಯೂರಪ್ಪ
  • ರಾಜ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂದ ಬಿಎಸ್​ವೈ
ಹತ್ಯೆಯಾದ ಹರ್ಷ ಮನೆಗೆ ಬಿಎಸ್​ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ title=
ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ವಿತರಣೆ

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆ(Harsha Murder Case)ಯಾದ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa) ಭೇಟಿ ನೀಡಿದರು. ಹರ್ಷ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಿಎಸ್​ವೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: ಅವಧಿಗೂ ಮುನ್ನವೇ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್..?

ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹರ್ಷ(Bajrang Dal Activist) ಕುಟುಂಬಸ್ಥರಿಗೆ ಬಿಎಸ್ ವೈ ಹಸ್ತಾಂತರ ಮಾಡಿದರು. ಬಳಿಕ ಮಾತನಾಡಿದ ಅವರು, ಭಜರಂಗದಳ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ನಡೆದಿರುವುದು ಖಂಡನೀಯ. ಹಿಂದೂ ಸಮಾಜದ ಮುಖಂಡನಾಗಿ ಬೆಳೆಯುತ್ತಿದ್ದ ಹರ್ಷನ ಬೆಳವಣಿಗೆಯನ್ನು ಸಹಿಸಲಾಗದೆ ಕೊಲೆ ಮಾಡಲಾಗಿದೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಸಂಘಟನಾ ಕೆಲಸ ಮಾಡುತ್ತಿದ್ದ ಹರ್ಷರನ್ನು ಕೊಲೆ ಮಾಡಿರುವುದು ದುಃಖದ ವಿಷಯವೆಂದು ಬಿಎಸ್​ವೈ(Former CM BSY) ಬೇಸರ ವ್ಯಕ್ತಪಡಿಸಿದರು.  

ಹರ್ಷನ ಕುಟುಂಬ(Harsha Family) ಸದಸ್ಯರಿಗೆ ಸಾಂತ್ವನ ಹೇಳುವುದುನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ‍್ಯವಿಲ್ಲ. ಪರಿಹಾರವೆಂದು ಎಷ್ಟೇ ಹಣ ಕೊಟ್ಟರೂ ಅದು ನೆಪಮಾತ್ರ. ಹೋದ ಅಮೂಲ್ಯ ಜೀವ ಮತ್ತೆ ಬರುವುದಿಲ್ಲ. ಇಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮರುಕಳಿಸಬಾರದು. ಪ್ರಧಾನಿ ಮೋದಿ ಕೂಡ ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕೆಂಬುದು ನಮ್ಮ ಆಶಯ ಅಂತಾ ಯಡಿಯೂರಪ್ಪ ಇದೇ ವೇಳೆ ಹೇಳಿದರು.  

ಇದನ್ನೂ ಓದಿ: ಅಧಿವೇಶನದ ನಂತರ ಡೆಲ್ಲಿ ಪ್ರವಾಸ: ಡಿಕೆಶಿ ವಿರುದ್ಧ ದೂರು ಕೊಡ್ತಾರಾ ಸಿದ್ದರಾಮಯ್ಯ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News