ಜಾರ್ಜ್ ರಾಜೀನಾಮೆಗೆ ಬಿಎಸ್ ವೈ ಆಗ್ರಹ

ಕೆ.ಜೆ.ಜಾರ್ಜ್ ರಾಜೀನಾಮೆ ನೀಡುವ ವರೆಗೂ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸುವುದಾಗಿ ಬಿಎಸ್ ವೈ ಎಚ್ಚರಿಕೆ. 

Last Updated : Sep 11, 2017, 01:43 PM IST
ಜಾರ್ಜ್ ರಾಜೀನಾಮೆಗೆ ಬಿಎಸ್ ವೈ ಆಗ್ರಹ title=

ಬೆಂಗಳೂರು: ಡಿವೈಎಸ್ಪಿ ಗಣಪತಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಚಿವ ಕೆ.ಜೆ.ಜಾರ್ಜ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. 

ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದ ಕೆ.ಜೆ.ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವರಾಗಿದ್ದಾರೆ. ಸಿಐಡಿ ತನಿಖೆ ಸರಿಯಾಗಿ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಾಕ್ಷಿ ನಾಶ ಪಡೆಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಹೀಗಾಗಿ ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯ ಸ್ಪಷ್ಟಪಡಿಸಿದೆ, ಇಷ್ಟಾದರೂ ಸಚಿವ ಜಾರ್ಜ್ ರಾಜೀನಾಮೆ ನೀಡಿಲ್ಲ ಎಂದು ಯಡಿಯೂರಪ್ಪ ಕಿಡಿಕಾರಿದರು.

ತನಿಖೆ ನಡೆಯುವವರೆಗೆ ಜಾರ್ಜ್ ರಾಜೀನಾಮೆ ನೀಡಲಿ, ತನಿಖೆ ಪೂರ್ಣಗೊಂಡ ನಂತರ ಮತ್ತೆ ಅಧಿಕಾರ ವಹಿಸಿಕೊಳ್ಳಲಿ ಇದಕ್ಕೆ ನಮ್ಮ ಅಭ್ಯಂತರ ಇಲ್ಲ ಬಿಎಸ್ ವೈ ಹೇಳಿದರು. 

ತಕ್ಷಣವೇ ಜಾರ್ಜ್ ರಾಜೀನಾಮೆ ನೀಡಬೇಕು. ಇಲ್ಲವಾದರೆ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ  ಸೆ.16ರಂದು ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು. ಜಾರ್ಜ್ ರಾಜೀನಾಮೆ ಪಡೆಯುವ ವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

Trending News