Buffalo Fashion Show: ಎಮ್ಮೆಗಳ ಅಲಂಕಾರಕ್ಕೆ ಕವಡೆ ಸರ, ಕೋಡು ಕೊಂಬುಗಳಿಗೆ ತುರಾಯಿಗಳು, ಹೊಸ ಹಗ್ಗಗಳು, ಕೋಡುಗಳಿಗೆ ಹೊಸ ಬಣ್ಣ ಬಳಿಯುವುದು ಹೀಗೆ ದೀಪಾವಳಿ ಹಬ್ಬವನ್ನ ಗೌಳಿಗ ಸಮಾಜದವರು ಅತ್ಯಂತ ವಿಶೇಷವಾಗಿ ಆಚರಣೆ ಮಾಡಿದರು. ಈ ಕುರಿತು ಒಂದು ವರದಿ..
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೌಳಿಗರ ಉತ್ಸಾಹಕ್ಕೆ ಇಲ್ಲ ಎಲ್ಲೆ:
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ದೀಪಾವಳಿ ಹಬ್ಬದಲ್ಲಿ ತಮ್ಮ ಮಕ್ಕಳಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಜೋಪಾನ ಮಾಡಿರುವ ಎಮ್ಮೆಯನ್ನ ಶೃಂಗಾರ ಮಾಡಿ ಓಡಿಸಿದ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಉತ್ತರ ಭಾರತದಿಂದ ಬಂದ ಯಾದವರು ಹಣಬರ ಸಮುದಾಯದವರು ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದಾರೆ. ಮಲೆನಾಡಿನ ಸೆರಗಿನಂತಿರುವ ಈ ಊರಿನಲ್ಲಿ ಯಾದವರ ಶ್ರಮದಿಂದಲೇ ಧಾರವಾಡ ಪೇಡೆ ಜನಪ್ರಿಯ ವಾಗಲು ಸಾಧ್ಯವಾಗಿದೆ. ವರ್ಷವಿಡೀ ಹಾಲು ಕೊಟ್ಟು ಪೊರೆಯುವ ಎಮ್ಮೆಗಳಿಗೆ ಸಿಂಗಾರ ಮಾಡಿ, ದ್ವಾದಶಿಯಂದು ದೋಸೆ ಮಾಡಿ ನೈವೇದ್ಯ ಹಿಡಿದು ಬಲಿಪಾಡ್ಯಮಿಯ ದಿನ ಎಮ್ಮೆಗಳ ಓಟ ಏರ್ಪಡಿಸಲಾಗುತ್ತದೆ ಎನ್ನುತ್ತಾರೆ ಗೌಳಿದ ಸಮಾಜ ಹಿರಿಯರು.
ಇದನ್ನೂ ಓದಿ- ಕಂಬದಿಂದ ವಿದ್ಯುತ್ ಸಂಪರ್ಕ: ಅಚಾತುರ್ಯಕ್ಕೆ ನನ್ನ ವಿಷಾದವಿದೆ , ದಂಡ ಕಟ್ಟುವೆ ಎಂದ ಕುಮಾರಸ್ವಾಮಿ
ನೆಹರು ಮೈದಾನದಲ್ಲಿ ಸಾಂಪ್ರದಾಯಿಕ ಪೂಜೆ ನಂತರ ಗೌಳಿ ಗಲ್ಲಿ, ಮರಾಠಾ ಗಲ್ಲಿ, ಕೊಪ್ಪೀಕರ್ ರಸ್ತೆ, ಮ್ಯಾದರ ಓಣಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು. ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಹುರಿದುಂಬಿಸುತ್ತಾರೆ. ‘ಎಮ್ಮೆಗಳ ಫ್ಯಾಷನ್ ಷೋ’ ಅನ್ನು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಂಭ್ರಮದಲ್ಲಿ ಮಿಂದೆಂದ್ದರು.
ಎಮ್ಮೆಗಳು ನಮಗೆ ವರ್ಷವಿಡೀ ಅನ್ನ ಹಾಕುತ್ತವೆ. ಪ್ರತಿವರ್ಷ ದೀಪಾವಳಿಯಲ್ಲಿ ಅವುಗಳನ್ನು ಅಲಂಕರಿಸಿ ಕುಟುಂಬಸ್ಥರೆಲ್ಲ ಪೂಜಿಸುತ್ತೇವೆ. ವಿವಿಧ ಬಡಾವಣೆಗಳಲ್ಲಿ ಓಡಿಸಿ ಸಂತಸಪಡುತ್ತೇವೆ. ಹಲವು ದಶಕಗಳಿಂದ ಈ ಆಚರಣೆ ಮುಂದುವರಿಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಅರಣು ಶಿರ್ಕೆ, ವಿಠ್ಠಲ ಗಡೆಪ್ಪ, ನಿಂಗಪ್ಪ ಉಪ್ಪಾರ ಅವರು.
ಇದನ್ನೂ ಓದಿ- ಮಹಿಳೆಯರೇ ಗುಡ್ ನ್ಯೂಸ್..! ಇನ್ಮುಂದೆ ಮೊಬೈಲ್ನಲ್ಲೇ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಿ
ಉತ್ತರ–ದಕ್ಷಿ ಬಹುಭಾಷಾ ಸಂಸ್ಕೃತಿ ಹೊಂದಿರುವ ಹುಬ್ಬಳ್ಳಿಯಲ್ಲಿ ಗುಜರಾತಿಗಳು, ಬಂಗಾಳಿಗಳು, ಬಿಹಾರಿಗಳು ಸೇರಿದಂತೆ ಉತ್ತರ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ದೀಪಾವಳಿಯಲ್ಲಿ ಅವರು ಸ್ಥಳೀಯ ಧಾರ್ಮಿಕ ಪದ್ಧತಿ ಅನುಸರಿಸುವ ಜತೆಗೆ, ತಮ್ಮ ನಾಡಿನ ಸಂಸ್ಕೃತಿಯನ್ನೂ ಅನಾವರಣಗೊಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.