ಬೆಂಗಳೂರು: ಸಾರ್ವಜನಿಕರಲ್ಲಿ ಪೋಲೀಸರಂದ್ರೆ ಯಾಕಪ್ಪ ಬೇಕು ಸಹವಾಸ ಎಂಬ ಮನಸ್ಥಿತಿ ಇರುತ್ತೆ. ಆದರೆ ಪೊಲೀಸರೂ ಮಾನವೀಯ ಗುಣ ಹೊಂದಿರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಹೌದು, ಮಂಗಳವಾರ(ಜುಲೈ 5) ಮಧ್ಯಾಹ್ನ ಗಸ್ತಿನಲ್ಲಿದ್ದ ಬೆಂಗಳೂರಿನ ಚಂದ್ರಾಲೇಔಟ್ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ವ್ಯಕ್ತಿ ಓರ್ವನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದು ಇತರರಿಗೂ ಮಾದರಿಯಾಗಿದ್ದಾರೆ.
ಇದನ್ನೂ ಓದಿ: PSI Recruitment Scam: ‘ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ’
ಚಂದ್ರಾಲೇಔಟ್‍ನ ಗ್ಯಾರೇಜ್ ಬಳಿ 25 ವರ್ಷದ ಇಮ್ರಾನ್ ಎಂಬ ಯುವಕನೊಬ್ಬ ಏಕಾಏಕಿ ಫಿಡ್ಸ್ ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಸ್ಥಳಕ್ಕೆ ತೆರಳಿ ಅಲ್ಲಿಯೇ ಗ್ಯಾರೇಜ್‍ನಲ್ಲಿ ಇದ್ದ ಕಬ್ಬಿಣವನ್ನು ತಂದು ಆತನ ಕೈಗಿಟ್ಟಿದ್ದಾರೆ. ಬಳಿಕ ಆತನನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರಗೆ ದಾಖಲಿಸಿದ್ದಾರೆ.
ಸೂಕ್ತ ಸಮುಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರಿಂದ ಇಮ್ರಾನ್ ಚೇತರಿಕೆ ಕಂಡಿದ್ದಾನೆ. ಇನ್ನೂ ಈತ ಕೆಲ ತಿಂಗಳಿಂದ ಕುಡಿಯಲು ಕಲಿತಿದ್ದನಂತೆ. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಅವರೇ ಈತನ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು, ಕುಡಿಯುವುದನ್ನು ಮೊದಲು ಬಿಡು ಎಂದು ತಾಕೀತು ಮಾಡಿದ್ದಾರೆ. ಅಲ್ಲದೇ ಮೆಡಿಸನ್ ಕೊಡಿಸಿ ಆರೋಗ್ಯದ ಮೇಲೆ ಗಮನ ಹರಿಸುವಂತೆ ಕಿವಿ ಮಾತು ಹೇಳಿದ್ದಾರೆ. ಇದಲ್ಲವೇ ಮಾನವೀಯತೆ ಅಂದ್ರೆ. ಅನಿತಾಲಕ್ಷ್ಮೀಯವರ ಮೂಲಕ ಪೊಲೀಸರ ಇನ್ನೊಂದು ಮಾನವೀಯ ಮುಖ ಸಮಾಜಕ್ಕೆ ಪರಿಚಯವಾದಂತಿದೆ.
ಇದನ್ನೂ ಓದಿ: ಅಭಿಮಾನಿ ಟೀ ಅಂಗಡಿಯಲ್ಲಿ ಚಹಾ ಕುಡಿದ ಶಿವಣ್ಣ: 5 ವರ್ಷದ ಕನಸು-ನನಸು!!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ