ಕರ್ನಾಟಕಕ್ಕೆ ಪತ್ಯೇಕ ನಾಡಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಅನಾವರಣಗೊಳಿಸಿದರು. 

Last Updated : Mar 8, 2018, 01:36 PM IST
ಕರ್ನಾಟಕಕ್ಕೆ ಪತ್ಯೇಕ ನಾಡಧ್ವಜ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ title=

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಅನಾವರಣಗೊಳಿಸಿದರು. 

ಹಳದಿ, ಬಿಳಿ, ಕೆಂಪು ಬಣ್ಣದ ನಡುವೆ ರಾಜ್ಯ ಸರ್ಕಾರದ ಮುದ್ರೆ ಇರುವ ಈ ನಾಡಧ್ವಜವನ್ನು ಸರ್ಕಾರ ಅಂಗೀಕರಿಸಿದ್ದು, ಈ ಮೂಲಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಇರಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯ ಇಂದು ನೆರವೇರಿದಂತಾಗಿದೆ. 

"ರಾಜ್ಯಕ್ಕೆ ಒಂದು ಪ್ರತ್ಯೇಕ ನಾಡ ಧ್ವಜ ಬೇಕು ಎಂಬ ಅಪೇಕ್ಷೆ ಇತ್ತು. ಇದೇ ವಿಚಾರವಾಗಿ ಪಾಟೀಲ್ ‌ಪುಟ್ಟಪ್ಪ ಕೂಡ ಪತ್ರ ಕೊಟ್ಟಿದ್ದರು. ಇದಕ್ಕಾಗಿ ಎಸ್ ಜಿ ಸಿದ್ದರಾಮಯ್ಯ ‌ನೇತೃತ್ವದಲ್ಲಿ ಒಂದು ಸಮಿತಿ ಕೂಡ ರಚನೆ ಮಾಡಲಾಗಿದ್ದು, ಇದನ್ನು ಕೂಲಂಕುಷವಾಗಿ ಚರ್ಚಿಸಿ, ನಮಗೆ ವರದಿ ಕೊಟ್ಟಿದೆ. ಕನ್ನಡದ ಇತಿಹಾಸ, ಬಾವುಟ, ಸಂವಿಧಾನದಲ್ಲಿ ತೊಡಕಿನ ಬಗ್ಗೆ ಅಧ್ಯಯನ ಮಾಡಿದ ಬಳಿಕ ಬಾವುಟವನ್ನು ತಯಾರಿಸಲಾಗಿದ್ದು, ನಾಡಧ್ವಜ ವಿನ್ಯಾಸದಲ್ಲಿ ಹಳದಿ ಮತ್ತು ಕೆಂಪು ಎರಡು ಬಣ್ಣಗಳನ್ನು ಉಳಿಕೊಳ್ಳಲಾಗಿದೆ" ಎಂದು ಸಿದ್ದರಾಮಯ್ಯ ಹೇಳಿದರು.

"ಎರಡು ಬಣ್ಣದ ಜೊತೆ ಬಿಳಿ ಬಣ್ಣವನ್ನೂ ಬಳಸಿಕೊಳ್ಳಲು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳ ಜತೆ ಚರ್ಚೆ ನಡೆಸಿ, ನಾಡಧ್ವಜ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ದೇಶದಲ್ಲೇ ಇದೊಂದು ಐತಿಹಾಸಿಕವಾದ ನಿರ್ಧಾರವಾಗಿದ್ದು, ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ನಂತರ ಕೇಂದ್ರ ಸರ್ಕಾರವೇ ಈ ಧ್ವಜವನ್ನು ನಾಡಧ್ವಜವೆಂದು ಘೋಷಿಸಲಿದೆ" ಎಂದರು.

Trending News