ನಮ್ಮ ಮೆಟ್ರೋಗೆ ಬರಲಿವೆ ಚೀನಾ ಮೇಡ್ ಬೋಗಿಗಳು

Namma Metro News : ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗಕ್ಕೆ ಸ್ವದೇಶಿ ನಿರ್ಮಾಣದ ಬೋಗಿ ಕೊನೆಯಾಗುತ್ತಾ ಅನ್ನೋದು ಸಾಬೀತಾಗಿದೆ. ಇನ್ನು ಅಂದುಕೊಂಡತೆ ಆದ್ರೆ ಚೀನಾದಿಂದ ಬರುವ 216 ಮೆಟ್ರೋ ಕಾರ್ ಗಳಲ್ಲಿ 126 ಕಾರ್ ನೇರಳೆ ಮಾರ್ಗಕ್ಕೆ ಬಳಕೆ ಮಾಡಲಾಗುತ್ತೆ ಎನ್ನಲಾಗ್ತಿದೆ. 

Written by - Manjunath Hosahalli | Last Updated : Nov 3, 2023, 05:01 PM IST
  • ಟ್ರಾಫಿಕ್ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಕ್ರಮ
  • ನಮ್ಮ ಮೆಟ್ರೋಗೆ ಚೀನಾ ಮೇಡ್ ಬೋಗಿಗಳು
  • ಸ್ವದೇಶಿ ನಿರ್ಮಾಣದ ಬೋಗಿಗೆ ಕೊನೆ
ನಮ್ಮ ಮೆಟ್ರೋಗೆ ಬರಲಿವೆ ಚೀನಾ ಮೇಡ್ ಬೋಗಿಗಳು  title=

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತಕ್ಕೆ ನಾಂದಿ ಹಾಡಲು ಮುಂದಾಗಿರುವ ನಮ್ಮ ಮೆಟ್ರೋ ಇಡೀ ದೇಶದಲ್ಲಿ ಎರಡನೇ ಸ್ಥಾನವನ್ನ ಅಲಕಂರಿಸಿದೆ. ಈಗಾಗಲೇ ನಗರದ ನಾಲ್ಕೂ ದಿಕ್ಕಿನಲ್ಲಿ ಪ್ರಯಾಣಿಕರನ್ನ ಹೊತ್ತು ಸಾಗುತ್ತಿರುವ BMRCL ಗೆ ಪ್ರಶಂಸೆಗೂ ಪಾತ್ರವಾಗ್ತಿದೆ. ಇದೀಗ ಅದೇ ಪ್ರಶಂಸೆ ಮಾಯವಾಗುತ್ತೋ ಅನ್ನೋ ಅನುಮಾನ ವ್ಯಕ್ತವಾಗ್ತಿದೆ.

ಹೌದು ಯಾಕಂದ್ರೆ ನಮ್ಮ ಮೆಟ್ರೋದ ಫೇಸ್ 2 ಕಾಮಗಾರಿಗಳು ಕೆಲವು ಕಡೆ ಕಂಪ್ಲೀಟ್ ಆಗ್ತಾ ಬರ್ತಿದೆ. ಕಾಮಗಾರಿ ಪೂರ್ಣ ಆಗ್ತಿರುವ ಲೈನ್ ಗಳಿಗೆ ಚೀನಾ ಮೇಡದ ರೈಲು ಬೋಗಿ (ಕಾರ್) ಗಳನ್ನ ತರೆಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ.

ಇದನ್ನೂ ಓದಿ : ಪಕ್ಷದ ಸೂಚನೆ ಮೀರಿ ಮಾತನಾಡಿದವರಿಗೆ ನೋಟಿಸ್ ನೀಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್ 

216 ಮೆಟ್ರೋ ಬೊಗಿಗಳಿಗೆ ಕಳೆದ 2020 ರ ಅವದಿಯಲ್ಲಿ ಟೆಂಡರ್ ಕರೆದಿದ್ದ ಬಿಎಂಆರ್ ಸಿಎಲ್ ಗೆ ಚೀನಾ ಮೂಲದ CRRC ಕಂಪನಿಯ ಇದೀಗ ಅಸ್ತು ಎಂದಿದೆ ಎನ್ನಲಾಗ್ತಿದೆ. ಟೆಂಡರ್ ಕರೆದಿದ್ದ ಮೆಟ್ರೋ ಬೋಗಿ ನಿರ್ಮಾಣಕ್ಕೆ ವಿದೇಶಿ ಕಂಪನಿ ಮೊರೆ ಹೋಗಿತ್ತು.  ನಮ್ಮ‌ ಮೆಟ್ರೋಗೆ ಇದೀಗ ಅದೇ ವಿದೇಶ ಕಂನಿಯ ಮೆಟ್ರೋ ರೈಲು ನೀಡಲು ಅಸ್ತು ಎಂದಿದೆ. ಹೀಗಾಗಿ  ಸಧ್ಯದಲ್ಲೆ 216 ಮೆಟ್ರೋ ಕೋಚ್ ಗಳು ಭಾರತಕ್ಕೆ ಬರಲಿದೆ.

ರಾಜಧಾನಿಯಲ್ಲಿ ಈಗಾಗಲೆ ಕಾರ್ಯಾಚರಣೆ ಮಾಡುತ್ತಿರುವ ನೂರಾರು ಮೆಟ್ರೋ ಬೋಗಿಗಳು ನಮ್ಮ ಭಾರತದ ಮೂಲ ಕಂಪನಿಯದ್ದೆ ಆಗಿತ್ತು.  ಅದ್ರಲ್ಲೂ ನಮ್ಮ ಬೆಂಗಳೂರಿನಲ್ಲೇ ಇರುವ  ಬೆಮಲ್ ಕಂಪನಿಯಲ್ಲಿ  ಬೋಗಿಗಳನ್ನ ನಿರ್ವಹಣೆ ಮಾಡುತ್ತಿತ್ತು. ಆದ್ರೆ ಇದೀಗ ಬೆಮಲ್ ಬಿಟ್ಟು ಚೀನಾ ಕಂಪನಿ ಕಡೆ ಬಿಎಂಆರ್ ಸಿಎಲ್ ವಾಲಿದೆ.

ಈ ಮೂಲಕ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗಕ್ಕೆ ಸ್ವದೇಶಿ ನಿರ್ಮಾಣದ ಬೋಗಿ ಕೊನೆಯಾಗುತ್ತಾ ಅನ್ನೋದು ಸಾಬೀತಾಗಿದೆ. ಇನ್ನು ಅಂದುಕೊಂಡತೆ ಆದ್ರೆ ಚೀನಾದಿಂದ ಬರುವ 216 ಮೆಟ್ರೋ ಕಾರ್ ಗಳಲ್ಲಿ 126 ಕಾರ್ ನೇರಳೆ ಮಾರ್ಗಕ್ಕೆ ಬಳಕೆ ಮಾಡಲಾಗುತ್ತೆ ಎನ್ನಲಾಗ್ತಿದೆ. ಇನ್ನುಳಿದ 90 ಕಾರ್ ಗಳು ಹಸಿರು ಮಾರ್ಗಕ್ಕೆ ಬಳಕೆ ಮಾಡಲಾಗುತ್ತೆ ಎಂದು BMRCL ಅಧಿಕಾರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಒಂದೇ ದಾರಿಯಲ್ಲಿ ಕೆಟ್ಟು ನಿಂತ ಎರಡು 'ಚಿಗರಿ'!: ಅವ್ಯವಸ್ಥೆಗೆ ಮತ್ತೊಂದು ಹೆಸರೇ BRTS 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News