ಬೆಂಗಳೂರು: ಖಾತೆ ಬದಲಾವಣೆಯ ಆಟ ಇನ್ನೂ ಮುಂದುವರೆದಿದೆ. ಕೆಲವರಿಗೆ ತಮಗೆ ಸಚಿವ ಸ್ಥಾನವೇ ಸಿಕ್ಕಿಲ್ಲವೆಂಬ ಕೋಪವಾದರೆ, ಇನ್ನು ಕೆಲವರಿಗೆ ಸಿಕ್ಕ ಖಾತೆ ಸರಿಯಲ್ಲ ಎಂಬ ಅಸಮಾಧಾನ. ಇವರೆಲ್ಲರನ್ನೂ ತೃಪ್ತಿಪಡಿಸುವ ಕೆಲಸ ಮುಖ್ಯಮಂತ್ರಿಗಳಿಗೆ. ಯಾವುದೇ ಸರ್ಕಾರ ಬಂದರೂ ಇದು ಮುಗಿಯದ ಆಟ.
ಈ ಬಾರಿ ಕೂಡ ಅದೇ ರೀತಿಯಾಗಿದ್ದು, ನೂತನ ಸಚಿವರುಗಳಿಗೆ ಖಾತೆ ಹಂಚಿಕೆ ಮಾಡಿದ ನಂತರ ಭುಗಿಲೆದ್ದ ಅಸಮಾಧಾನವನ್ನು ಕೈಲಾದಷ್ಟು ಮಟ್ಟಿಗೆ ಶಾಂತಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(B.S.Yediyurappa) ಪ್ರಯತ್ನಿಸಿದ್ದು, ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ.
ರಣಭೀಕರ ಗಣಿ ಸ್ಫೋಟ : ಜಿಲೆಟಿನ್ ಪೂರೈಕೆದಾರ, ಗಣಿ ಮಾಲೀಕ, ಜಾಮೀನು ಮಾಲೀಕ ಅರೆಸ್ಟ್..!
ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆ, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ, ಸಕ್ಕರೆ ಖಾತೆ, ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆ ಮತ್ತು ಡಾ.ಕೆ.ಸಿ.ನಾರಾಯಣ ಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್ ಜತೆಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ.
SHIMOGA BLAST : ಪ್ರಧಾನಿ ಮೋದಿ ಸಂತಾಪ, ಸಿಎಂ ದಿಗ್ಭ್ರಮೆ, ತನಿಖೆಗೆ ಕುಮಾರಸ್ವಾಮಿ ಪಟ್ಟು
ಎಂಟಿಬಿ ನಾಗರಾಜ್ ಅವರು ವಸತಿ ಖಾತೆಗಾಗಿ ಬೇಡಿಕೆ ಇಟ್ಟಿದ್ದರೂ ಅವರಿಗೆ ಅಬಕಾರಿ ಖಾತೆ ಸಿಕ್ಕಿತ್ತು. ಆದರೆ ತಮಗೆ ಈ ಖಾತೆ ಬೇಡವೇ ಬೇಡ ಎಂದು ಪಟ್ಟುಹಿಡಿದು ಕುಳಿತಿದ್ದರಿಂದ ಸದ್ಯ ಅವರಿಗೆ ಪೌರಾಡಳಿತ, ಸಕ್ಕರೆ ಖಾತೆ ನೀಡಲಾಗಿದೆ. ಅದೇ ರೀತಿ ನಿನ್ನೆಯ ಮಟ್ಟಿಗೆ ತೋಟಗಾರಿಕೆ ಮತ್ತು ಸಕ್ಕರೆ ಸಚಿವರಾಗಿದ್ದ ಕೆ.ಗೋಪಾಲಯ್ಯ ಅವರು ಇಂದು ಅಬಕಾರಿ ಖಾತೆ ಸಚಿವರಾಗಿದ್ದಾರೆ. ಪೌರಾಡಳಿತ ಮತ್ತು ರೇಷ್ಮೆ ಸಚಿವರಾಗಿದ್ದ ಆರ್.ಶಂಕರ್ ಅವರಿಗೆ ತೋಟಗಾರಿಕೆ, ರೇಷ್ಮೆ ಖಾತೆ ಸಿಕ್ಕಿದೆ. ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್ ಸಚಿವರಾಗಿದ್ದ ಡಾ.ಕೆ.ಸಿ.ನಾರಾಯಣ ಗೌಡ ಅವರಿಗೆ ಹೆಚ್ಚುವರಿಯಾಗಿ ಯೋಜನೆ ಸಾಂಖ್ಯಿಕ ಅಂಕಿ ಅಂಶಗಳ ಖಾತೆ ನೀಡಲಾಗಿದೆ.
Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..!
ಸಿಗಲಿಲ್ಲ ಮನ್ನಣೆ: ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದಿರುವುದಕ್ಕೆ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದರೂ ಅದನ್ನು ಅವರಿಗೆ ನೀಡಲಿಲ್ಲ. ಅವರು ನಿನ್ನೆ ನೀಡಿರುವ ಹೊಸ ಖಾತೆಆ ರೋಗ್ಯ ಮತ್ತು ಕುಟುಂಬ ಕಲ್ಯಾಣದ ಸಚಿವರಾಗಿ ಮುಂದುವರೆಯಲಿದ್ದಾರೆ.
Pramod Muthalik: ಬೆಳಗಾವಿ ಲೋಕಸಭಾ ಬೈಎಲೆಕ್ಷನ್: ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದ ಮುತಾಲಿಕ್!
ಖಾತೆ ಹಂಚಿಕೆ ಬದಲಾವಣೆ ನಂತರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಪ್ತ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಕಳೆದ ರಾತ್ರಿ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 7.30 ರಿಂದ ರಾತ್ರಿ 11 ಗಂಟೆಯವರೆಗೆ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತು ಎಸ್. ಟಿ. ಸೋಮಶೇಖರ್ ಜೊತೆ ಸಮಾಲೋಚನೆ ನಡೆಸಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಬದಲಾವಣೆ ಮಾಡಿರುವ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.
R.Ashok: 'ಎಲ್ಲರನ್ನು ತೃಪ್ತಿ ಪಡಿಸಲು ದೇವರಿಂದಲೂ ಸಾಧ್ಯವಿಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.