ಮುಖ್ಯಮಂತ್ರಿ ಕುಮಾರಸ್ವಾಮಿ ಬಬ್ಬ ನಕ್ಸಲ್: ಯತ್ನಾಳ್

ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಜನತೆಗೆ ದಂಗೆ ಏಳುವಂತೆ ಕರೆ ನೀಡುತ್ತಾರೆಂದರೆ ಅವರು ನಕ್ಸಲರೇ ಹೌದು ಎಂದು ಯತ್ನಾಳ್ ವ್ಯಂಗ್ಯ ಮಾಡಿದರು.

Last Updated : Sep 21, 2018, 07:21 PM IST
ಮುಖ್ಯಮಂತ್ರಿ ಕುಮಾರಸ್ವಾಮಿ ಬಬ್ಬ ನಕ್ಸಲ್: ಯತ್ನಾಳ್ title=

ಬೆಂಗಳೂರು: ರಾಜ್ಯದ ಜನತೆಗೆ ದಂಗೆ ಏಳುವಂತೆ ಕರೆ ನೀಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಓರ್ವ ನಕ್ಸಲ್ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಯಾವ ಮುಖ್ಯಮಂತ್ರಿಯೂ ಈ ರೀತಿಯ ಹೇಳಿಕೆ ನೀಡಿರಲಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ಜನತೆಗೆ ದಂಗೆ ಏಳುವಂತೆ ಕರೆ ನೀಡುತ್ತಾರೆಂದರೆ ಅವರು ನಕ್ಸಲರೇ ಹೌದು ಎಂದು ಯತ್ನಾಳ್ ವ್ಯಂಗ್ಯ ಮಾಡಿದರು.

ಮುಂದುವರೆದು ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ಬ್ಲಾಕ್ ಮೇಲ್ ಮಾಡುವುದು ಒಂದು ಚಟ. ಈ ಹಿಂದೆ ಕೂಡ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬ್ಲಾಕ್ ಮೇಲ್ ಮಾಡಿಯೇ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಕುಮಾರಸ್ವಾಮಿ ವಿರುದ್ಧ ಜಂತಕಲ್​ ಮೈನಿಂಗ್​ ಹಗರಣ ಸುಪ್ರೀಂ ಕೊರ್ಟ್​​ನಲ್ಲಿದೆ. ಹಾಗಾಗಿ ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿ ಅವರು ಆದಷ್ಟು ಬೇಗ ಜೈಲಿಗೆ ಹೋಗುತ್ತಾರೆ ಎಂದು ಯತ್ನಾಳ್ ಕಿಡಿ ಕಾರಿದರು.

Trending News