VIDEO: ಶಾಸಕ ತನ್ವೀರ್​ ಸೇಠ್​ ಹತ್ಯೆಗೆ ಯತ್ನ, ಆರೋಪಿ ಬಂಧನ

ಮೈಸೂರಿನ ಬನ್ನಿಮಂಟಪ ಆವರಣದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಸಂಬಂಧಿಕರೊಬ್ಬರ ಬೀಗರ ಔತಣಕೂಟದಲ್ಲಿ ಶಾಸಕ ತನ್ವೀರ್​ ಸೇಠ್​ ಪಾಲ್ಗೊಂಡಿದ್ದ ವೇಳೆ ಈ ಹಲ್ಲೆ ನಡೆದಿದೆ.

Updated: Nov 18, 2019 , 11:23 AM IST
VIDEO: ಶಾಸಕ ತನ್ವೀರ್​ ಸೇಠ್​ ಹತ್ಯೆಗೆ ಯತ್ನ, ಆರೋಪಿ ಬಂಧನ
File Image

ಮೈಸೂರು:  ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಭಾನುವಾರ ರಾತ್ರಿ (ನವೆಂಬರ್ 17) ಮಾರಣಾಂತಿಕ ದಾಳಿ ನಡೆಸಲಾಗಿದೆ. ಆರೋಪಿ ಫರಾನ್​ ಪಾಷಾ ತೀಕ್ಷ್ಣವಾದ ಆಯುಧದಿಂದ ತನ್ವೀರ್​ ಸೇಠ್ ಅವರ ಕುತ್ತಿಗೆ ಭಾಗಕ್ಕೆ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ತನ್ವೀರ್​ ಸೇಠ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ತನ್ವೀರ್​ ಸೇಠ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಮೈಸೂರಿನ ಬನ್ನಿಮಂಟಪ ಆವರಣದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಸಂಬಂಧಿಕರೊಬ್ಬರ ಬೀಗರ ಔತಣಕೂಟದಲ್ಲಿ ಶಾಸಕ ತನ್ವೀರ್​ ಸೇಠ್​ ಪಾಲ್ಗೊಂಡಿದ್ದ ವೇಳೆ ಈ ಹಲ್ಲೆ ನಡೆದಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಮೈಸೂರಿನ ನರಸಿಂಹರಾಜ ಠಾಣೆ ಪೊಲೀಸರು ಗೌಸಿಯಾನಗರದ ಮುಕ್ಬುಲ್​ ಎಂಬುವರ ಪುತ್ರ ಫರಾನ್​ ಪಾಷಾ ತನ್ವೀರ್​ ಸೇಠ್​ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಎನ್ನಲಾಗಿದೆ. 

ಫರಾನ್ ಎಸ್​ಡಿಪಿಐ ಸಂಘಟನೆ ಪರ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಕಳೆದ 8 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದನು. ಕಳೆದ ಎರಡೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆತ ತನ್ವೀರ್​ ಸೇಠ್​ ಪರ ಕೆಲಸ ಮಾಡಿದ್ದರು ಎಂದು ಮಾಹಿತಿ ಲಭಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.