ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯವನ್ನು ಮಾರಾಟಕ್ಕೆ ಇಟ್ಟಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಹಗರಣಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘40% ಕಮಿಷನ್, ಪಿಎಸ್ಐ ಉದ್ಯೋಗ ಹಗರಣ, ₹2500 ಕೋಟಿಗೆ ಮುಖ್ಯಮಂತ್ರಿ ಹುದ್ದೆ, ಬೀಳುವ ಕ್ರೀಡಾಂಗಣಗಳು, ಕುಸಿಯುತ್ತಿರುವ ಸೇತುವೆಗಳು & ನಕಲಿ SC/ST ಪ್ರಮಾಣಪತ್ರಗಳು. ಒಟ್ಟಾರೆ ಬೊಮ್ಮಾಯಿ ಸರ್ಕಾರ "ರಾಜ್ಯವನ್ನು ಮಾರಾಟಕ್ಕೆ" ಇಟ್ಟಿದೆ!’ ಅಂತಾ ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: 'ಜನರೊಂದಿಗೆ ನಿಕಟವಾದ ಸಂಬಂಧವಿಟ್ಟು ಕೆಲಸ ಮಾಡಿ'
2 ವರ್ಷಗಳಲ್ಲ 8 ವರ್ಷಗಳೇ ಕಳೆದವು, ಆದರೆ ರೂಪಾಯಿ ಮೌಲ್ಯ 15 ರೂ. ಆಗುವ ಬದಲು 77 ರೂ.ಗಳಿಗೂ ಹೆಚ್ಚು ಕುಸಿತ ಕಾಣುವ ಮೂಲಕ ಇತಿಹಾಸ ನಿರ್ಮಿಸಿದೆ! ಸುಳ್ಳುಗಳ ಸರದಾರ, ಕಾಮಿಡಿ ಕಿಲಾಡಿ ನಳೀನ್ ಕುಮಾರ್ ಕಟೀಲ್ ಅವರೇ ಈಗ ಏಕೆ ಡಾಲರ್ ಬಗ್ಗೆ ಮಾತೇ ಇಲ್ಲವಲ್ಲ ತಮ್ಮದು? ಇನ್ನೆಷ್ಟು ದಿನ ಹೀಗೆ ಲಜ್ಜೆಗೆಟ್ಟ ಮಾತುಗಳನ್ನು ಆಡುತ್ತಿರುವಿರಿ?’ ಎಂದು ಬಿಜೆಪಿ ರಾಜಾಧ್ಯಕ್ಷ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
40% ಕಮಿಷನ್,
ಪಿಎಸ್ಐ ಉದ್ಯೋಗ ಹಗರಣ,
₹2500 ಕೋಟಿಗೆ ಮುಖ್ಯಮಂತ್ರಿ ಹುದ್ದೆ,
ಬೀಳುವ ಕ್ರೀಡಾಂಗಣಗಳು,
ಕುಸಿಯುತ್ತಿರುವ ಸೇತುವೆಗಳು &
ನಕಲಿ SC/ST ಪ್ರಮಾಣಪತ್ರಗಳು.ಬೊಮ್ಮಾಯಿ ಸರ್ಕಾರ "ರಾಜ್ಯವನ್ನು ಮಾರಾಟಕ್ಕೆ" ಇಟ್ಟಿದೆ!
— Karnataka Congress (@INCKarnataka) May 10, 2022
ಅಕ್ರಮಗಳ ಗೂಡಾಗಿರುವ ಬಿಜೆಪಿ PSI ಅಕ್ರಮದ ಬಗ್ಗೆ ಉತ್ತರವಿಲ್ಲದೆ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಪ್ರಿಯಾಂಕ್ ಖರ್ಗೆ ಅವರ ಮೇಲೆ ಮುಗಿಬಿದ್ದು ಹಗರಣ ಮುಚ್ಚಿಕೊಳ್ಳುವ ತಂತ್ರ ಅನುಸರಿಸುತ್ತಿದೆ. ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಬೆನ್ನಿಗೆ ಬಿಜೆಪಿ ನಿಂತಿರುವುದೇಕೆ? ಆಕೆಯನ್ನು ಹುದ್ದೆಗಳಲ್ಲಿ ಮುಂದುವರೆಸಿದ್ದೇಕೆ ಉತ್ತರಿಸಲಿ’ ಎಂದು ಕುಟುಕಿದೆ.
ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ ಸಾಧ್ಯತೆ
ಇನ್ನೆಷ್ಟು ಬಲಿ ಬೇಕು ಬಿಜೆಪಿ?
‘ಬೆಂಗಳೂರಿನ ರಸ್ತೆಗಳ ಗುಂಡಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಹಲವು ಜೀವಗಳು ಬಲಿಯಾಗಿವೆ, ಅದರೂ ದಪ್ಪ ಚರ್ಮದ ಸರ್ಕಾರ ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳಲಿಲ್ಲ. ಬಿಜೆಪಿಯ 40% ಕಮಿಷನ್ ಲೂಟಿಯ ಪರಿಣಾಮ ಜನ ಎದುರಿಸುವ ಸಂಕಷ್ಟಗಳು ಮತ್ತೊಮ್ಮೆ ಬಸ್ ಅಪಘಾತದ ಮೂಲಕ ಅನಾವರಣಗೊಂಡಿದೆ. ಇನ್ನೆಷ್ಟು ಬಲಿ ಬೇಕು ಬಿಜೆಪಿ?’ ಎಂದು ಮತ್ತೊಂದು ಟ್ವೀಟ್‍ನಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.