ಭಾರತದ ಸಂವಿಧಾನವು ಅತಿ ದೊಡ್ಡ ಸಾರ್ವಜನಿಕ ನೀತಿಯ ದಾಖಲೆ- ನ್ಯಾಯಮೂರ್ತಿ ಚೆಲಮೇಶ್ವರ್

    

Last Updated : Jan 21, 2018, 01:12 PM IST
ಭಾರತದ ಸಂವಿಧಾನವು ಅತಿ ದೊಡ್ಡ ಸಾರ್ವಜನಿಕ ನೀತಿಯ ದಾಖಲೆ- ನ್ಯಾಯಮೂರ್ತಿ ಚೆಲಮೇಶ್ವರ್ title=

ಬೆಂಗಳೂರು: ಭಾರತ ಸಂವಿಧಾನವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಪ್ರತಿಫಲದಿಂದ ಸಿದ್ದಪಡಿಸಲ್ಪಟ್ಟ ಅತಿ ದೊಡ್ಡ ಸಾರ್ವಜನಿಕ ನೀತಿ ದಾಖಲೆಯಾಗಿದೆ ಆದ್ದರಿಂದ ಇಂದಿನ ಯುವಕರು ಅದರ ಮೌಲ್ಯಗಳನ್ನು ಗೌರವಿಸಬೇಕು ಎಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಚಲ್ಮೆಶ್ವರ್ ಕರೆ ನೀಡಿದ್ದಾರೆ .

ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಯೊಂದರ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಸಂವಿಧಾನ ಮಹಾನ್ ಸಾರ್ವಜನಿಕ ನೀತಿ ಮತ್ತು ಮೌಲ್ಯಗಳನ್ನು ಒಳಗೊಂಡಿದೆ  ಅದನ್ನು ರಚಿಸಿದ ಪ್ರಮುಖ ಕೇಂದ್ರವು ಸಂವಿಧಾನ ಸಭೆಯಾಗಿದೆ, ಎಂದು ಜಸ್ಟಿಸ್ ಚೆಲಾಮೇಶ್ವರ್ ಹೇಳಿದ್ದಾರೆ.

ದೇಶದ ರಚನೆ ಮತ್ತು ಅದರ  ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಕಂಡುಕೊಳ್ಳಲು ಸಂವಿಧಾನ ಸಭೆಯ ಸದಸ್ಯರು ಮತ್ತು ಸಂವಿಧಾನ ಸಭೆಯ ಸದಸ್ಯರು ಸಾಂವಿಧಾನಿಕ ದಾಖಲೆಗಳನ್ನು ಪುಷ್ಟೀಕರಿಸಿದರು. ಈ ಸಂದರ್ಭದಲ್ಲಿ ಸಂವಿದಾನದ ದಾಖಲೆಗಳಲ್ಲಿರುವ ಪ್ರತಿಯೊಂದು ಪದಗಳು ಅವರ ಅನುಭವ ಮತ್ತು ಜ್ಞಾನವನ್ನು ಪ್ರತಿಬಿಂಬಿಸುತ್ತವೆ ಎಂದರು .

ನ್ಯಾಯಮೂರ್ತಿ ಚೆಲಮೇಶ್ವರ್ ಮುಖ್ಯ ನ್ಯಾಯಾಧೀಶರ ವಿರುದ್ಧ ಇತ್ತೀಚೆಗೆ ಬಂಡಾಯವೆದ್ದ ನಾಲ್ಕು ಸುಪ್ರೀಂ ಕೋರ್ಟ್ ನ್ಯಾಯಾಧೀಶರಲ್ಲಿ ಒಬ್ಬರು , ಉನ್ನತ ನ್ಯಾಯಾಲಯದಲ್ಲಿ ನಿಯೋಜಿತ ಪ್ರಕರಣಗಳನ್ನು ಮುಖ್ಯ ನ್ಯಾಯಾಧೀಶರು ಪಾರದರ್ಶಕತೆ ತೋರಿಸುತ್ತಿಲ್ಲ ಎಂದು ಆಪಾದಿಸಿದ್ದರು. 

ಕಾಲಕ್ಕೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಒಳಪಡಿಸಿರುವುದು ಗೊತ್ತಿರುವ ಸಂಗತಿ. ಆದರೆ ನಾವು ಸಂವಿಧಾನದಿಂದ ಆಡಳಿತ ನಡೆಸುತ್ತಿದ್ದಂತೆಯೇ, ನಮ್ಮ ನೀತಿಯ ರಚನೆಯು ನಮ್ಮನ್ನು ನಿಯಂತ್ರಿಸುವ ಈ ಸಂವಿಧಾನದ ಘಟಕಗಳಿಗೆ ಒಳಪಟ್ಟಿರಬೇಕು ಎಂದು ಚಲ್ಮೆಶ್ವರ್ ತಿಳಿಸಿದರು.

 

 

Trending News