ಧಾರವಾಡ: ವಿಜಯಪುರ ಗಣೇಶನಗರ ನಿವಾಸಿ ಶಿವಾನಂದ ಹೊಕ್ಕುಂಡಿ ಎಂಬುವವರು 2012 ರಲ್ಲಿ ತಾನು ಹುಬ್ಬಳ್ಳಿ-ಧಾರವಾಡದಲ್ಲಿ ಸರಕಾರಿ ಕೆಲಸದಲ್ಲಿರುವಾಗ ಸಾಧುನವರ ಎಸ್ಟೇಟ್‍ನ ಸಾಮನ್ ಡೆವಲಪರ್ಸ್‍ನ ವಿನಯ ಸಾಹುಕಾರ ಬಳಿ 1200 ಚದರ ಅಡಿ ವಿಸ್ತೀರ್ಣವುಳ್ಳ 2 ಪ್ಲಾಟುಗಳನ್ನು ಒಟ್ಟು 9 ಲಕ್ಷ ರೂಪಾಯಿಗಳಿಗೆ ಖರೀದಿ ಕರಾರು ಮಾಡಿಕೊಂಡು 6 ಲಕ್ಷ ರೂಪಾಯಿಯನ್ನು ಮುಂಗಡ ಹಣವಾಗಿ ಸಂದಾಯ ಮಾಡಿದ್ದರು.
ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಆಯ್ಕೆ
ಲೆಔಟ್ ಡೆವಲಪ್ ಮಾಡದೇ ಪ್ಲಾಟುಗಳನ್ನು ಅವರು ದೂರುದಾರರಿಗೆ ಕೊಟ್ಟಿರಲಿಲ್ಲ. ಹಲವು ಬಾರಿ ತಾನು ಪ್ಲಾಟು ಕೊಡುವಂತೆ ಅಥವಾ ಹಣ ಹಿಂದಿರುಗಿಸುವಂತೆ ಒತ್ತಾಯಿಸಿದರು ಡೆವಲಪರ್ ಒಂದಿಲ್ಲ ಒಂದು ನೆಪ ಹೇಳುತ್ತಾ ತನ್ನನ್ನು ಸತಾಯಿಸುತ್ತಿದ್ದರು. ಆ ಬಗ್ಗೆ ಅವರು ಕೊಟ್ಟ 2 ಚೆಕ್ಕುಗಳು ಅಮಾನ್ಯವಾದುದರಿಂದ ಡೆವಲಪರ್ ವಿರುದ್ಧ ಧಾರವಾಡ ಜೆ.ಎಮ್.ಎಪ್.ಸಿ.ನ್ಯಾಯಾಲಯದಲ್ಲಿ 2 ಚೆಕ್ ಬೌನ್ಸ್ ಕೇಸು ಹಾಕಿದ್ದು ಅವು ವಿಚಾರಣೆಗೆ ಪೆಂಡಿಂಗ್ ಇರುತ್ತವೆ. ಡೆವಲಪರರ ಇಂತಹ ನಡವಳಿಕೆಯಿಂದ ಅವರು ತನಗೆ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆಂದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಇದನ್ನೂ ಓದಿ: "ಚುನಾವಣೆಯನ್ನು ಎದುರಿಟ್ಟುಕೊಂಡು ಸಂಪುಟ ವಿಸ್ತರಿಸಲಾಗಿದೆ ಹೊರತು, ಜನರ ಕಲ್ಯಾಣಕ್ಕಲ್ಲ"
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟುಗಳನ್ನು ಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ.
ಆ ಬಗ್ಗೆ ಸಾಮನ್ ಡೆವಲಪರ್ಸ್‍ನ ಮಾಲೀಕ ವಿನಯ ಸಾಹುಕಾರರವರು ದೂರುದಾರರಿಂದ ಪಡೆದ 6 ಲಕ್ಷರೂಪಾಯಿಗಳನ್ನು ಅಕ್ಟೋಬರ್ 20, 2012 ರಿಂದ ಹಣ ಹಿಂದಿರುಗಿಸುವವರೆಗೆ ಶೇ.8 ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.1 ಲಕ್ಷ ಪರಿಹಾರ ಹಾಗೂ ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆಯೋಗ ಆದೇಶಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ