ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಐಐಎಸ್ ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ ಮತ್ತು ಏಕೈಕ ICMR ಅನುಮೋದಿತ ಮೊಬೈಲ್ ಆರ್ ಟಿ-ಪಿಸಿಆರ್ COVID-19 ಟೆಸ್ಟ್ ಲ್ಯಾಬಿಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಅವರು ಐಐಎಸ್ ಕ್ಯಾಂಪಸ್ ನಲ್ಲಿ ಚಾಲನೆ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದರು.
ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸುತ್ತಿರುವ ಯಡಿಯೂರಪ್ಪ
ಇದು ಬಯೋ ಸುರಕ್ಷತೆ ಪ್ರಮಾಣೀಕರಣ ಹೊಂದಿರುವ ಅತ್ಯಂತ ಸುಸಜ್ಜಿತ ಮೊಬೈಲ್ ಕೋವಿಡ್ -19 (Covid 19) ಟೆಸ್ಟ್ ಲ್ಯಾಬ್ ಆಗಿದ್ದು ಕೇವಲ 4 ಗಂಟೆಗಳಲ್ಲಿ ಟೆಸ್ಟ್ ವರದಿ ಪಡೆಯಬಹುದಾಗಿದೆ. ದಿನಕ್ಕೆ ಸುಮಾರು 400 ಟೆಸ್ಟ್ ನಡೆಸುವ ಸಾಮರ್ಥ್ಯ ಹೊಂದಿರುವ ಈ ಲ್ಯಾಬ್ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಟೆಸ್ಟ್ ನಡೆಸಲು ಬಳಸಬಹುದಾಗಿದೆ.
ಹೆಲ್ತ್ ಬುಲೆಟಿನ್ ರಿಲೀಸ್: ಯಡಿಯೂರಪ್ಪ ಓಕೆ, ಸಿದ್ದರಾಮಯ್ಯಗೆ ಸ್ವಲ್ಪ ಸಮಸ್ಯೆ
ಐಐಎಸ್ ಸಿ ನಿರ್ದೇಶಕರು, ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಡಾ. ಸಚ್ಚಿದಾನಂದ ಅವರು ಉಪಸ್ಥಿತರಿದ್ದರು.