ನಾಗೇಂದ್ರರ ವಜಾ ಯಾಕಿಲ್ಲ? ಹಗರಣ ಸಿಬಿಐ ತನಿಖೆಗೇಕೆ ಕೊಟ್ಟಿಲ್ಲ? ಸಿಟಿ ರವಿ ಪ್ರಶ್ನೆ

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸಚಿವ ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ?

Written by - Prashobh Devanahalli | Last Updated : Jun 1, 2024, 09:51 PM IST
    • ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ?
    • ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ? ಈ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು
    • ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರಶ್ನೆ
ನಾಗೇಂದ್ರರ ವಜಾ ಯಾಕಿಲ್ಲ? ಹಗರಣ ಸಿಬಿಐ ತನಿಖೆಗೇಕೆ ಕೊಟ್ಟಿಲ್ಲ? ಸಿಟಿ ರವಿ ಪ್ರಶ್ನೆ title=
CT Ravi

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರಶ್ನಿಸಿದರು.

ಇದನ್ನೂ ಓದಿ: “ಇದು ಕೇವಲ ಪ್ರಾರಂಭ”- ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸಚಿವ ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ? ಈ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇಷ್ಟೆಲ್ಲ ಆದರೂ ಸರ್ಕಾರಕ್ಕೆ ಇದೊಂದು ಗಂಭೀರ ಪ್ರಕರಣ ಅನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಬುಡಕ್ಕೆ ಬರುವ ಕಾರಣಕ್ಕೆ ಇದು ಗಂಭೀರವಲ್ಲ ಎಂದು ತೇಲಿಸುವ ರೀತಿಯಲ್ಲಿ ಸರಕಾರ ವ್ಯವಹರಿಸುತ್ತಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿದ್ದಾರೆ. ಜೊತೆಗೆ 3 ಅಧಿಕಾರಿಗಳ ಹೆಸರು, ಎನ್ ನಾಗರಾಜ್ ಎಂಬ ಹೆಸರು ಬರೆದಿದ್ದಾರೆ. ಎನ್. ನಾಗರಾಜ್ ಯಾರು ಎಂದು ಪ್ರಶ್ನಿಸಿದರು.

ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆ ಶಾಖೆಗೆ ಖಾತೆ ಬದಲಿಸುವ ಮೂಲಕ ಈ ಹಗರಣ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದೇ ವಸಂತನಗರದಲ್ಲಿ. ಕಾಲ್ನಡಿಗೆ ದೂರದಲ್ಲಿ ಶಾಖೆ ಇದೆ. ಯಾಕೆ ನೀವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‍ಗೆ ಖಾತೆ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸಿದರು.

ಉಳಿದ ನಿಗಮಗಳಲ್ಲೂ ಇಂಥ ಹಗರಣ...

ಈಗ ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದಿದೆ. ಉಳಿದ ನಿಗಮಗಳಲ್ಲೂ ಇಂಥ ಹಗರಣ ಆಗಿರುವ ಸಾಧ್ಯತೆ ಇದೆ ಎಂದು ಸಿಟಿ ರವಿ ಅವರು ಸಂಶಯ ವ್ಯಕ್ತಪಡಿಸಿದರು.

ಎಲ್ಲ ಅಭಿವೃದ್ಧಿ ನಿಗಮಗಳ ಲೆಕ್ಕಪತ್ರ ಪರಿಶೀಲನೆ ನಡೆಸಬೇಕು. ಎಷ್ಟೋ ನಿಗಮಗಳಿಂದ 2-3 ವರ್ಷವಾದರೂ ಫಲಾನುಭವಿಗಳಿಗೆ ಬೋರ್‍ವೆಲ್ ಕೊರೆದಿಲ್ಲ. ಸಬ್ಸಿಡಿ ಹಣ ಬಂದಿಲ್ಲ. ವೈಯಕ್ತಿಕ ಸಾಲ ಸೌಲಭ್ಯಕ್ಕೆ ಆಯ್ಕೆ ಆಗಿದ್ದರೂ ಸಾಲ ಸಿಕ್ಕಿಲ್ಲ. ಇಂಥ ಹಣ ನಕಲಿ ಖಾತೆಗಳ ಪಾಲಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಈ ಕಪ್ಪು ಬಣ್ಣದ ಕಾಳನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗೋದು ಪಕ್ಕಾ

ನಿಗಮದ ಬೇರೆ ಬೇರೆ ಖಾತೆಯಲ್ಲಿದ್ದ ಹಣವನ್ನು ಯೂನಿಯನ್ ಬ್ಯಾಂಕ್ ಖಾತೆಗೆ ಯಾಕೆ ವರ್ಗಾಯಿಸಲಾಯಿತು? ಯೂನಿಯನ್ ಬ್ಯಾಂಕಿನಿಂದ ಹೈದರಾಬಾದ್‍’ನ ರತ್ನಾಕರ ಬ್ಯಾಂಕಿಗೆ ಹಣ ಹೋಗಿದೆ. ಅಲ್ಲಿಂದ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಖಾತೆಗಳನ್ನು ತೆರೆದು ಹಣ ಹಿಂಪಡೆದಿದ್ದಾರೆ ಎಂದು ಆಕ್ಷೇಪಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News