‘ಡಿ.ಕೆ.ಶಿವಕುಮಾರ್ ಮತ್ತು 40 ಡೀಲುಗಳು!’

ಡಿ.ಕೆ.ಶಿವಕುಮಾರ್ ಅವರೇ ನೀವು ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್‌ನಲ್ಲಿ ಅಡಗಿಕೊಂಡಿವೆ ಎಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : May 6, 2022, 04:30 PM IST
  • ಡಿಕೆಶಿ ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರ ದೊಡ್ಡ ಬ್ಯಾರಲ್‌ನಲ್ಲಿ ಅಡಗಿಕೊಂಡಿವೆ
  • ದೆಹಲಿ ಅಪಾರ್ಟ್‌ಮೆಂಟನ್ನು ಅಕ್ರಮ ಹಣ ಸಂಗ್ರಹದ ಗೋದಾಮು ಮಾಡಿಕೊಂಡದ್ದನ್ನು ರಾಜ್ಯದ ಜನೆ ಮರೆತಿಲ್ಲ
  • ಸಿದ್ದರಾಮಯ್ಯ ಸರ್ಕಾರದಲ್ಲಿ ತಡವಾಗಿ ಸಂಪುಟ ಸೇರಿದ #DealDK ಭ್ರಷ್ಟಾಚಾರ ಎಸಗಬಹುದೆಂಬ ಸೂಚನೆ ಇತ್ತು
‘ಡಿ.ಕೆ.ಶಿವಕುಮಾರ್ ಮತ್ತು 40 ಡೀಲುಗಳು!’ title=
ಡೀಲ್ ಡಿಕೆ ಎಂದು ಬಿಜೆಪಿ ಟೀಕಿಸಿದೆ.

ಬೆಂಗಳೂರು: ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ‘ಡಿಕೆಶಿ ಮತ್ತು 40 ಡೀಲುಗಳು!’ ಎಂದು ಸರಣಿ ಟ್ವೀಟ್ ಮಾಡಿದೆ. ‘ಡೀಲ್ ಡಿಕೆ ಮನೆಮೇಲೆ ಐಟಿ ದಾಳಿ ನಡೆದಾಗ 317 ಬ್ಯಾಂಕ್ ಖಾತೆಗಳು ಪತ್ತೆಯಾದವು. ಇವುಗಳೇನು #DealDK ಕುಟುಂಬದ ಜನ್ ಧನ್ ಖಾತೆಯಾಗಿರಲಿಲ್ಲ, 200 ಕೋಟಿಗೂ ಅಧಿಕ ಬೇನಾಮಿ ಆಸ್ತಿಯ ಕಳ್ಳಗಂಟಿನ ಖಾತೆಯಾಗಿತ್ತು. ಇದೆಲ್ಲವೂ ದೊಡ್ಡಾಲಹಳ್ಳಿ ಕೆಂಪೇಗೌಡರ ಮಗನ ಪಿತ್ರಾರ್ಜಿತ ಆಸ್ತಿ ಆಗಿರಲು ಹೇಗೆ ಸಾಧ್ಯ?’ ಎಂದು ಟೀಕಿಸಿದೆ.

ಡಿ.ಕೆ.ಶಿವಕುಮಾರ್ ಅವರೇ ನೀವು ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್‌ನಲ್ಲಿ ಅಡಗಿಕೊಂಡಿವೆ. ಪೊಲೀಸರ ತನಿಖೆ ಕಾದ ಎಣ್ಣೆ ಸುರಿದಂತೆ ಆಗುತ್ತಿದೆಯೇ? ದೆಹಲಿಯ ಅಪಾರ್ಟ್‌ಮೆಂಟನ್ನು ಅಕ್ರಮ ಹಣ ಸಂಗ್ರಹದ ಗೋದಾಮು ಮಾಡಿಕೊಂಡದ್ದನ್ನು ರಾಜ್ಯದ ಜನೆ ಮರೆತಿಲ್ಲ’ವೆಂದು ಬಿಜೆಪಿ ಕುಟಿಕಿದೆ.

ಇದನ್ನೂ ಓದಿ: ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ: ಬಿಜೆಪಿ

‘ಸಿದ್ದರಾಮಯ್ಯ ಸರ್ಕಾರದಲ್ಲಿ ತಡವಾಗಿ ಸಂಪುಟ ಸೇರಿದ #DealDK ಭ್ರಷ್ಟಾಚಾರ ಎಸಗಬಹುದೆಂಬ ಸೂಚನೆ ಇತ್ತು. ಅದಕ್ಕಾಗಿಯೇ ಶಾಂತಿ ನಗರ ಹೌಸಿಂಗ್ ಸಹಕಾರ ಸಂಘದ ಅವ್ಯವಹಾರದ ಕಡತವನ್ನು ಸಿದ್ದರಾಮಯ್ಯ ಭದ್ರವಾಗಿಟ್ಟುಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಕಲೆ ಕಾಂಗ್ರೆಸ್‌ ನಾಯಕರಿಗೂ ಹಿಡಿಸುತ್ತಿರಲಿಲ್ಲ ಎಂಬುದು ನಿಜವಲ್ವೇ?’ ಎಂದು ಪ್ರಶ್ನಿಸಿದೆ.

‘#DealDK ಇಂಧನ ಸಚಿವರಾಗಿದ್ದಾಗ ಸೋಲಾರ್ ಗೋಲ್ ಮಾಲ್ ನಡೆದಿತ್ತು. ಬೆಳಗಾವಿಯಲ್ಲಿ ಹೊಡೆದ ಒಂದು ಕುಕ್ಕರ್ ವಿಷಲ್‌ಗೆ 50 ಎಕರೆ ಸೋಲಾರ್ ಪ್ಲ್ಯಾಂಟ್ ಮಂಜೂರುಗೊಂಡದ್ದು ಸುಳ್ಳೇ? ಇದರಿಂದ ಯಾರಿಗೆ ʼಲಕ್ಷ್ಮಿ ಕೃಪೆʼಯಾಯಿತು?’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: 'ಸಿದ್ದರಾಮಯ್ಯ ಅವರಿಗೆ ತಲೆ ಕೆಟ್ಟಿದೆ, ಅವರಿಗೆ ಚಿಕಿತ್ಸೆ ಅವಶ್ಯತೆ ಇದೆ'

‘ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ #DealDK ವಿರುದ್ಧ 200 ದೂರುಗಳು ಜಾರಿ ನಿರ್ದೇಶನಾಲಯ ಸಂಸ್ಥೆಯಲ್ಲಿ ದಾಖಲಾಗಿದ್ದವು. ಸತ್ಯ ಹರಿಶ್ಚಂದ್ರನ ಎರಡನೇ ಅವತಾರದಂತೆ ವರ್ತಿಸುವ ಡಿ.ಕೆ.ಶಿವಕುಮಾರ್ ಅವರೇ, ಈ ದೂರುಗಳೆಲ್ಲಾ ಸುಖಾಸುಮ್ಮನೆ ದಾಖಲಾಗಿದ್ದೇ? ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪುತ್ರಿಯ ಖಾತೆಗೂ ಹಣ ವರ್ಗಾವಣೆಯಾಗಿದ್ದು ಸುಳ್ಳೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News