ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ: ಬಿಜೆಪಿ

ಕೆಪಿಸಿಸಿ ಅಧ್ಯಕ್ಷರ ಪರ್ಸೆಂಟೇಜ್ ವ್ಯವಹಾರ, ಡೀಲ್, ಲೆಕ್ಕಕ್ಕೆ ಸಿಗದ ಸುಳ್ಳು ಲೆಕ್ಕಾಚಾರಗಳೆಲ್ಲವನ್ನೂ ಕಾಂಗ್ರೆಸ್‌ ನಾಯಕರು ಕೆಪಿಸಿಸಿ ಕಚೇರಿಯಿಂದಲೇ ಬಹಿರಂಗಗೊಳಿಸಿದ್ದರು ಎಂದು ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : May 6, 2022, 03:44 PM IST
  • ಡಿಕೆಶೀ ನೀವು ಹೇಗಿದ್ದಿರಿ, ಹೇಗಾದಿರಿ, ಏನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ತಿಳಿದಿದೆ
  • ಕೆಪಿಸಿಸಿ ಕಚೇರಿಯಿಂದಲೇ ನಿಮ್ಮ ಭ್ರಷ್ಟಾಚಾರದ ಕಹಾನಿ ಜಗದಗಲಕ್ಕೆ ಪಸರಿಸಿದೆ
  • ಡಿ.ಕೆ.ಶಿವಕುಮಾರ್ ನೀವು ಸಚ್ಚಾರಿತ್ರನಂತೆ ವರ್ತಿಸಬೇಡಿ ಎಂದು ಟೀಕಿಸಿದ ಬಿಜೆಪಿ
ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ: ಬಿಜೆಪಿ title=
ಡೀಲ್ ಡಿಕೆಶಿ ಎಂದು ಬಿಜೆಪಿ ಟೀಕಿಸಿದೆ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್‌ ಉಸಿರಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿಕೆಶಿ ರಾಜ್ಯ ಕಂಡ ಕಡುಭ್ರಷ್ಟ ಎನ್ನುವುದರಲ್ಲಿ ಅತಿಶಯವಿಲ್ಲ’ವೆಂದು ಟೀಕಿಸಿದೆ.

‘ಕೆಪಿಸಿಸಿ ಅಧ್ಯಕ್ಷರ ಪರ್ಸೆಂಟೇಜ್ ವ್ಯವಹಾರ, ಡೀಲ್, ಲೆಕ್ಕಕ್ಕೆ ಸಿಗದ ಸುಳ್ಳು ಲೆಕ್ಕಾಚಾರಗಳೆಲ್ಲವನ್ನೂ ಕಾಂಗ್ರೆಸ್‌ ನಾಯಕರು ಕೆಪಿಸಿಸಿ ಕಚೇರಿಯಿಂದಲೇ ಬಹಿರಂಗಗೊಳಿಸಿದ್ದರು. ಡಿಕೆಶಿಯವರೇ ನೀವು ಸಚ್ಚಾರಿತ್ರನಂತೆ ವರ್ತಿಸಬೇಡಿ. ನೀವು ಹೇಗಿದ್ದಿರಿ, ಹೇಗಾದಿರಿ, ಏನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಕೆಪಿಸಿಸಿ ಕಚೇರಿಯಿಂದಲೇ ನಿಮ್ಮ ಭ್ರಷ್ಟಾಚಾರದ ಕಹಾನಿ ಜಗದಗಲಕ್ಕೆ ಪಸರಿಸಿದೆ. ನಿಮ್ಮ ಸಂಪಾದನೆಯ ಮಾರ್ಗ ಸಕ್ರಮವಾಗಿದ್ದರೆ ಜೈಲುಪಾಲಾಗುವ ಪ್ರಸಂಗ ಎದುರಾಗುತ್ತಿತ್ತೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಕರೋನಾದಿಂದ ಸತ್ತವರ ಕುಟುಂಬಕ್ಕೆ ಸರ್ಕಾರ ಶೀಘ್ರವೇ ಪರಿಹಾರ ನೀಡಲಿ: ಡಿ.ಕೆ ಶಿವಕುಮಾರ್

‘ಬೇನಾಮಿ ಡೀಲ್‌ ಮತ್ತು ಬೇನಾಮಿ ಡಿಕೆಶಿ.ಪರಮಭ್ರಷ್ಟ ಡಿಕೆಶಿ ಹೋದಲ್ಲೆಲ್ಲಾ ಭ್ರಷ್ಟಾಚಾರದ ಕೂಪದಲ್ಲಿ ಮಿಂದೆದ್ದು ಬರುವ ಚಾಣಾಕ್ಷ. ಮಂತ್ರಿಯಾಗಿದ್ದಾಗ ಲೆಕ್ಕವಿಲ್ಲದಷ್ಟು ಅಕ್ರಮ ಎಸಗಿದ ಮಹಾ ಭ್ರಷ್ಟಾಚಾರಿ ಈಗ ದಾಖಲೆ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವುದು ವಿಪರ್ಯಾಸ’ ಅಂತಾ ಕುಟುಕಿದೆ.

‘ಕೆಪಿಸಿಸಿಯ ಭ್ರಷ್ಟಾಧ್ಯಕ್ಷ #DealDK ಅವರೇ, ನೀವು ಸಚ್ಚಾರಿತ್ರ್ಯದ ತುಂಡು, ಧರೆಗಿಳಿದು ಬಂದ ದೇವಮಾನವ ಎಂದು ತಿಳಿದುಕೊಂಡಿದ್ದೀರಾ? ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಕರ್ನಾಟಕದ ಸಂಪತ್ತನ್ನು ಲೂಟಿ ಹೊಡೆದ ಬಗೆ ನೆನಪಿಸಬೇಕೇ? ಚೋರರ ಕುಲಗುರು ಡಿ.ಕೆ.ಶಿವಕುಮಾರ್. ಅಕ್ರಮವಾಗಿ ಧನ ದಾಸ್ತಾನು ಮಾಡಿದ ಆರೋಪದಲ್ಲಿ #DealDK ಅವರ ಮೇಲೆ ಐಟಿ ದಾಳಿ ನಡೆದಿತ್ತು.  ಸುಮಾರು 800 ಕೋಟಿಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿಯ ಒಡೆಯ ಎಂದು ಡಿಕೆಶಿಯವರನ್ನು ತನಿಖಾ ಸಂಸ್ಥೆ ತಿಹಾರ್‌ ಜೈಲಿಗೆ ಅಟ್ಟಿತ್ತು ಇಷ್ಟೆಲ್ಲ ಆಸ್ತಿ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ತರಕಾರಿ ಮಾರಿ ಕೋಟಿಗಟ್ಟಲೆ ಗಳಿಸಲು ಹೇಗೆ ಸಾಧ್ಯ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿ ಪಕ್ಷದ ಸಮಾವೇಶ ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News