ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಡಾ.ಜಿ. ಪರಮೇಶ್ವರ್

ಅಂಬರೀಶ್ ಅಂತಿಮ‌ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಗಣ್ಯರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ. 

Updated: Nov 26, 2018 , 11:10 AM IST
ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಡಾ.ಜಿ. ಪರಮೇಶ್ವರ್

ಬೆಂಗಳೂರು: ಅಂಬರೀಶ್‌ ಅವರ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋಗೆ ಇಂದು ಬೆಳಿಗ್ಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ಥಳ ಪರಿಶೀಲನೆ ಮಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಂಬರೀಶ್‌ ಅವರ ಅಂತ್ಯಕ್ರಿಯೆ ಇಲ್ಲಿ ನಡೆಯುವುದರಿಂದ ಸ್ಥಳ ವೀಕ್ಷಣೆ ಮಾಡಲು ಆಗಮಿಸಿದ್ದೆ. ಅವರ ಅಂತಿಮ‌ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಗಣ್ಯರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ. 

ಸಾರ್ವಜನಿಕರು ಶಾಂತಿಯಿಂದ ಅವರಿಗೆ ಗೌರವ ಸಲ್ಲಿಸುವಂತೆ ಮನವಿ‌ ಮಾಡುತ್ತೇನೆ. ಅವರನ್ನು ಅತ್ಯಂತ ಶಾಂತಿಯುತವಾಗಿ ಕಳುಹಿಸಿಕೊಡಲು ಸಾರ್ವಜನಿಕರು ಸಹಕರಿಸಬೇಕು‌ ಎಂದರು.

ಒಕ್ಕಲಿಗ ಸಂಪ್ರದಾಯದಂತೆ 'ಅಂಬರೀಷ್‌' ಅಂತ್ಯ ಕ್ರಿಯೆ

ಅಂಬರೀಷ್ ಅಂತ್ಯಕ್ರಿಯೆ ವೀಕ್ಷಣೆಗೆ ಒಟ್ಟಾರೆ 6000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗಾಗಿ ಪ್ರತ್ಯೇಕ 1 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳಿಗಾಗಿ ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ ನಂದಿನಿ ಲೇಔಟ್‌ನ ಹಿಂಬದಿ ಗೇಟ್ ಮೂಲಕ ಪ್ರವೇಶ ಮತ್ತು ರಿಂಗ್ ರಸ್ತೆಯ ಮುಖ್ಯದ್ವಾರದಲ್ಲಿ ವಿಐಪಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.