ಬೆಂಗಳೂರು : ಕಳ್ಳದಂಧೆ ನಡೆಸೋ ಕಿರಾತಕರು ಸದಾ ಚಾಪೆ ಕೆಳಗೆ ತೂರೋ ಕೆಲಸ ಮಾಡ್ತಾರೆ. ಆದರೆ ಅಧಿಕಾರಿಗಳು ರಂಗೋಲಿ ಕೆಳಗೆ ನುಗ್ಗಿ ಕಿರಾತಕರನ್ನ ಬಲೆಗೆ ಬೀಳಿಸುತ್ತಾರೆ. ಹೀಗೆ ಆಟಿಕೆ ಬಾಕ್ಸ್ ಗಳಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯನ್ನ ಬಂಧಿಸುವಲ್ಲಿ ಎನ್ ಸಿಬಿ (NCB) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಎನ್ ಸಿ ಬಿ ಕಾರ್ಯಾಚರಣೆ :
ಸೌತ್ ಆಫ್ರಿಕಾದ ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿ ಆಟಿಕೆ ಬಾಕ್ಸ್ ಗಳಲ್ಲಿ ಮಾದಕ ವಸ್ತು (Drugs) ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್ ಸಿಬಿ (NCB) ಅಧಿಕಾರಿಗಳು ಬೆಂಜಮೀನ್ ನ ಬಲೆಗೆ ಬೀಳಿಸಿದ್ದಾರೆ. ಆರೋಪಿಯಿಂದ 1.5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ಫುಡ್ ಡೆಲಿವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ದಬ್ಬಾಳಿಕೆ, ಡೆಲಿವರಿ ಬಾಯ್ ನೆರವಿಗೆ ನಿಂತ ಕನ್ನಡ ಪರ ಸಂಘಟನೆಗಳು
ಹೆಂಡತಿ ಮೂಲಕವೂ ದಂಧೆ..!
ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿ ಚೆನ್ನೈನಲ್ಲಿ 2 ಪ್ರಕರಣಗಳಲ್ಲಿ ಬೇಕಾಗಿದ್ದ. ಈತನಿಗಾಗಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದರು. ತಮಿಳುನಾಡು (Tamilnadu) ಮೂಲದ ಮಹಿಳೆಯನ್ನ ಮದುವೆಯಾಗಿದ್ದ ಈತ, ತನ್ನ ಹೆಂಡತಿ ಮೂಲಕವೂ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಗಂಡನ ತಾಳಕ್ಕೆ ತಕ್ಕಂತೆ ಹೆಂಡತಿಯೂ ಕುಣಿಯುತ್ತಿದ್ದಳು. ಗಂಡನ ಈ ಕಳ್ಳ ದಂಧೆಗೆ ಆಕೆಯೂ ಸಾಥ್ ನೀಡಿದ್ದಳು ಎಂದು ಆರೋಪಿಸಲಾಗಿದೆ.
ಬಂಧಿತ ಬೆಂಜಮೀನ್ ಸಂಡೆಯಿಂದ 968 ಗ್ರಾಂ ಅಂಪೆಟಮೈನ್, 2 ಕೆ.ಜಿ. 900 ಗ್ರಾಂ ಎಪಿಡ್ರೇನ್ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ಕೂಡ 130 ಗ್ರಾಂ ಕೊಕೇನ್ ಮಾರಲು ಹೋಗಿ ಬೆಂಜಮೀನ್ ಸಿಕ್ಕಿಬಿದ್ದಿದ್ದ. ಆದರೆ ಜಾಮೀನು ಪಡೆದ ಬಳಿಕ ಎಸ್ಕೇಪ್ ಆಗಿದ್ದ. ಹೀಗಾಗಿ ಡ್ರಗ್ಸ್ (drugs) ದಂಧೆಕೋರನ ಬಂಧನಕ್ಕೆ ಎನ್ ಸಿಬಿ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಕಡೆಗೂ ಬೆಂಗಳೂರಿನಲ್ಲಿ ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿ ಪೋಲಿಸರ (Police) ಬಲೆಗೆ ಬಿದಿದ್ದಾನೆ.
ಇದನ್ನೂ ಓದಿ : Car Accident: ಕಗ್ಗತ್ತಲಿನಲ್ಲಿ ದಾರಿ ಕಾಣದೆ ಕೆರೆಗೆ ಬಿದ್ದ ಕಾರು, ಉಸಿರುಗಟ್ಟಿ ವ್ಯಕ್ತಿ ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.