ನಾಡಿನಾದ್ಯಂತ ಪವಿತ್ರ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಒಂದು ತಿಂಗಳ ಉಪವಾಸ ಆಚರಿಸಿದ್ದ ಮುಸಲ್ಮಾನರು, ಚಂದ್ರದರ್ಶನದ ಬಳಿಕ ಆಹಾರ ಸ್ವೀಕರಿಸಿ ಉಪವಾಸ ವೃತ ಅಂತ್ಯಗೊಳಿಸಿದರು.

Written by - Manjunath Hosahalli | Edited by - Yashaswini V | Last Updated : May 3, 2022, 02:17 PM IST
  • ಮುಸ್ಲಿಂ ಸಮುದಾಯದವರು ಇಂದು ಮುಂಜಾನೆಯೇ ಹೊಸಬಟ್ಟೆಗಳನ್ನ ಧರಿಸಿ, ಪ್ರಾರ್ಥನೆಗಾಗಿ ಮಸೀದಿಗಳತ್ತ ತೆರಳಿದರು.
  • ಬೆಂಗಳೂರಿನ ಚಾಮರಾಜಪೇಟೆಯ ಪ್ರಸಿದ್ಧಿ ಈದ್ಗಾ ಮೈದಾನ, ಕೆ.ಆರ್ ಮಾರುಕಟ್ಟೆ ಪ್ರದೇಶ, ಕೆಲವು ಮುಖ್ಯ ರಸ್ತೆಗಳಲ್ಲೇ ಸಾಮೂಹಿಕ ಪ್ರಾರ್ಥನೆಗಳು ನಡೆದವು.
  • ಮಸೀದಿಗಳಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಾಡಿನಾದ್ಯಂತ ಪವಿತ್ರ ರಂಜಾನ್ ಆಚರಣೆ: ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ title=
Eid-ul-fitar

ಬೆಂಗಳೂರು: ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನ ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಒಂದು ತಿಂಗಳ ಉಪವಾಸ ಆಚರಿಸಿದ್ದ ಮುಸಲ್ಮಾನರು, ಚಂದ್ರದರ್ಶನದ ಬಳಿಕ ಆಹಾರ ಸ್ವೀಕರಿಸಿ ಉಪವಾಸ ವೃತ ಅಂತ್ಯಗೊಳಿಸಿದರು.

ಮುಸ್ಲಿಂ ಸಮುದಾಯದವರು ಇಂದು ಮುಂಜಾನೆಯೇ ಹೊಸಬಟ್ಟೆಗಳನ್ನ ಧರಿಸಿ, ಪ್ರಾರ್ಥನೆಗಾಗಿ ಮಸೀದಿಗಳತ್ತ ತೆರಳಿದರು. ಬೆಂಗಳೂರಿನ ಚಾಮರಾಜಪೇಟೆಯ ಪ್ರಸಿದ್ಧಿ ಈದ್ಗಾ ಮೈದಾನ, ಕೆ.ಆರ್ ಮಾರುಕಟ್ಟೆ ಪ್ರದೇಶ, ಕೆಲವು ಮುಖ್ಯ ರಸ್ತೆಗಳಲ್ಲೇ ಸಾಮೂಹಿಕ ಪ್ರಾರ್ಥನೆಗಳು ನಡೆದವು.

ಇದನ್ನೂ ಓದಿ- ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್ ಪ್ರಾರ್ಥನೆಯ ನಂತರ ಕಲ್ಲು ತೂರಾಟ

ಅಲ್ಲದೇ ಚಾಮರಾಜಪೇಟೆಯ ಇತರೆಡೆ, ಮೈಸೂರು ರಸ್ತೆ, ಕಂಟೋನ್ಮೆಂಟ್ ರೈಲ್ವೇ ನಿಲ್ದಾಣ, ಕೆ.ಆರ್ ಮಾರ್ಕೆಟ್, ಶಿವಾಜಿನಗರವಾಜಿನಗರ ಮಸೀದಿಗಳಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬಕ್ಕಾಗಿ ಶುಭಕೋರಿದರು. ಈ ವೇಳೆ ಬಡವರಿಗೆ ಹಣ್ಣುಹಂಪಲು, ಕರ್ಜೂರವನ್ನು ವಿತರಿಸಲಾಯಿತು.

ಇದನ್ನೂ ಓದಿ- Eid Special: ಇಲ್ಲಿವೆ ನೋಡಿ ವಿಶ್ವದ 6 ಅತ್ಯಂತ ಸುಂದರ ಮಸೀದಿಗಳು

ಹಬ್ಬ ಹಿನ್ನೆಲೆ ಬೆಂಗಳೂರಿನ ಬಹುತೇಕ ಪ್ರಾರ್ಥನಾ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪೊಲೀಸರನ್ನು ಕಣ್ಗಾವಲಾಗಿ ಇರಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News