ವಿಧಾನಸಭೆಗೆ ಅನಾಮಿಕನ ಪ್ರವೇಶ -ದ್ವಿಗುಣ ಭದ್ರತೆ: ಸ್ಪೀಕರ್ ಖಾದರ್ ಪರಿಶೀಲನೆ

Karnataka Assembly 2023: ಅಧಿವೇಶನದ ಆರನೇ ದಿನವಾದ ಇಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ವಿಧಾನಸೌಧದ ಭದ್ರತೆ ಪರಿಶೀಲನೆ ನಡೆಸಿದರು. ಪೊಲೀಸ್ ಆಯುಕ್ತ ದಯಾನಂದ್, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಸಾಥ್ ನೀಡಿದರು.

Written by - Prashobh Devanahalli | Edited by - Bhavishya Shetty | Last Updated : Jul 10, 2023, 10:59 AM IST
    • ರಾಜ್ಯ ಬಜೆಟ್ ದಿನ ಅನಾಮಿಕ ವ್ಯಕ್ತಿ ವಿಧಾನಸಭೆಗೆ ಪ್ರವೇಶ ಮಾಡಿದ ಹಿನ್ನೆಲೆ
    • ಬಜೆಟ್ ದಿನದ ಭದ್ರತಾ ಲೋಪದ ಬಗ್ಗೆ ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಸಭೆ ನಡೆಸಿದರು
    • ಪೊಲೀಸ್ ಆಯುಕ್ತ ದಯಾನಂದ್, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಸಾಥ್
ವಿಧಾನಸಭೆಗೆ ಅನಾಮಿಕನ ಪ್ರವೇಶ -ದ್ವಿಗುಣ ಭದ್ರತೆ: ಸ್ಪೀಕರ್ ಖಾದರ್ ಪರಿಶೀಲನೆ title=
Karnataka Assembly

ಬೆಂಗಳೂರು: ರಾಜ್ಯ ಬಜೆಟ್ ದಿನ ಅನಾಮಿಕ ವ್ಯಕ್ತಿ ವಿಧಾನಸಭೆಗೆ ಪ್ರವೇಶ ಮಾಡಿದ ಹಿನ್ನೆಲೆ ವಿಧಾನಸೌಧ ಪೊಲೀಸರು ಎಚ್ಚೆತ್ತುಕೊಂಡಿದ್ದು, ಭದ್ರತೆ ಹೆಚ್ಚಳ ಮಾಡಿದ್ದಾರೆ. ಜೊತೆಗೆ ಇಂದು ಅಧಿವೇಶನ ಪ್ರಾರಂಭ ಆಗುವ ಮುನ್ನ ಸ್ಪೀಕರ್ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ತೆಂಡೂಲ್ಕರ್ ಶತಕಗಳ ದಾಖಲೆಯನ್ನು ಮುರಿಯಬಲ್ಲ ಧಮ್ ಇರೋದು ಈ ಕ್ರಿಕೆಟಿಗನಿಗೆ!

ಅಧಿವೇಶನದ ಆರನೇ ದಿನವಾದ ಇಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ವಿಧಾನಸೌಧದ ಭದ್ರತೆ ಪರಿಶೀಲನೆ ನಡೆಸಿದರು. ಕೆಂಗಲ್ ಗೇಟ್ ಬಳಿ ಭದ್ರತೆ ಪರಿಶೀಲನೆ ನಡೆಸಿದ ಸ್ಪೀಕರ್ ಯು.ಟಿ. ಖಾದರ್ ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಸಾಥ್ ನೀಡಿದರು.

ಸೂಕ್ತ ಐಡಿ ಕಾರ್ಡ್ ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕೊಡಲು ಸಿಬ್ಬಂದಿಗೆ ಸೂಚನೆ ನೀಡಿದರು.

ಇದನ್ನೂ ಓದಿ: ವಿಂಡೀಸ್ ವಿರುದ್ಧದ ಟೆಸ್ಟ್’ಗೆ ಆಯ್ಕೆಯಾದ್ರೂ ಈ 3 ಆಟಗಾರರಿಗೆ ಆಡುವ ಚ್ಯಾನ್ಸ್ ಸಿಗೋದು ಡೌಟ್!

ಬಳಿಕ ಬಜೆಟ್ ದಿನದ ಭದ್ರತಾ ಲೋಪದ ಬಗ್ಗೆ ವಿಧಾನಸೌಧದ ಸ್ಪೀಕರ್ ಕೊಠಡಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರು ‌ಪೊಲೀಸ್ ಆಯುಕ್ತ ದಯಾನಂದ, ಸಿಸಿಬಿ ಜಂಟಿ ಆಯುಕ್ತ ಶರಣಪ್ಪ, ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಭಾಗಿಯಾಗಿದ್ದರು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಭದ್ರತೆ ಲೋಪವಾಗಬಾರದು ಎಂದು ಸೂಚನೆ ನೀಡಿ, ವಿಧಾನಸಭೆಗೆ ಪ್ರವೇಶಿದ್ದ ವ್ಯಕ್ತಿಯ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Trending News