ಸಿಲಿಕಾನ್ ಸಿಟಿಯಲ್ಲಿ ನಕಲಿ ನಾಟಿ ಮೊಟ್ಟೆ ಮಾರಾಟ ದಂಧೆ : ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ..!

ಫಾರ್ಮ್ ಕೋಳಿ ಮೊಟ್ಟೆಯನ್ನು ಟೀ ಡಿಕಾಷನ್ ನಲ್ಲಿ ಅದ್ದಿ ಕಲರ್ ಚೇಂಜ್ ಮಾಡಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. 

Written by - VISHWANATH HARIHARA | Edited by - Ranjitha R K | Last Updated : Jul 20, 2022, 02:50 PM IST
  • ಸಿಲಿಕಾನ್ ಸಿಟಿಯಲ್ಲಿ ನಕಲಿ ನಾಟಿ ಮೊಟ್ಟೆ ದಂಧೆ
  • ಮೂರು ವರ್ಷಗಳಿಂದ ನಡೆಯುತ್ತಿತ್ತು ದಂಧೆ
  • ಟೀ ಡಿಕಾಕ್ಷನ್ ಬಳಸಿ ಮೊಟ್ಟೆಯ ಬಣ್ಣ ಬದಲು
ಸಿಲಿಕಾನ್ ಸಿಟಿಯಲ್ಲಿ ನಕಲಿ ನಾಟಿ ಮೊಟ್ಟೆ ಮಾರಾಟ ದಂಧೆ : ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ..! title=
fake egg in bengaluru

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಕಲಿ ನಾಟಿ ಮೊಟ್ಟೆ ದಂಧೆ ಭರ್ಜರಿಯಾಗಿಯೇ ನಡೆಯುತ್ತಿದೆ. ಫಾರ್ಮ್ ಕೋಳಿಯ ಮೊಟ್ಟೆಯ ಕಲರ್ ಬದಲಿಸಿ ನಾಟಿ ಕೋಳಿ ಮೊಟ್ಟೆ ಎಂದು ಮಾರಾಟ ಮಾಡಲಾಗುತ್ತಿದೆ. ಹೌದು, 
ಫಾರ್ಮ್ ಕೋಳಿ ಮೊಟ್ಟೆಯನ್ನು ಟೀ ಡಿಕಾಷನ್ ನಲ್ಲಿ ಅದ್ದಿ ಕಲರ್ ಚೇಂಜ್ ಮಾಡಿ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. 

ಮೂರು ವರ್ಷಗಳಿಂದ ನಡೆಯುತ್ತಿತ್ತು ದಂಧೆ : 
ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ಕಾಲೇಜಿನ ಹಿಂಭಾಗ ನಕಲಿ ನಾಟಿ ಮೊಟ್ಟೆಯ ಈ ದಂಧೆಯನ್ನು ನಡೆಸಲಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಕರಿಯಪ್ಪ ಎಂಬಾತ ಈ ನಕಲಿ ಮೊಟ್ಟೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. 

ಇದನ್ನೂ ಓದಿ : KPSC Recruitment 2022 : KPSC ಯಿಂದ 'ಅಸಿಸ್ಟೆಂಟ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್' 30 ಹುದ್ದೆಗಳಿಗೆ ಅರ್ಜಿ!

ಟೀ ಡಿಕಾಕ್ಷನ್ ಬಳಸಿ ಮೊಟ್ಟೆಯ ಬಣ್ಣ ಬದಲು : 
ಕೋಳಿ ಫಾರ್ಮ್ ನಿಂದ ಒಂದು ರೂಪಾಯಿ, ಎರಡು ರೂಪಾಯಿಗೆ ಮೊಟ್ಟೆ ಖರೀದಿಸಿ ತಂದು ಅದನ್ನು ಡಿಕಾಷನ್ ನಲ್ಲಿ ಅದ್ದಲಾಗುತ್ತೆ. ಹೀಗೆ ಮಾಡಿದ ಕೆಲ ಗಂಟೆಗಳ ನಂತರ ಫಾರ್ಮ್ ಮೊಟ್ಟೆಯ ಬಣ್ಣ ನಾಟಿ ಕೋಳಿ ಮೊಟ್ಟೆಯ ಬಣ್ಣದಂತೆ ಬದಲಾಗುತ್ತದೆ. ಹೀಗೆ ಬಣ್ಣ ಬದಲಾದ ಮೊಟ್ಟೆಯನ್ನು ಆರೋಪಿಗಳು ರಸ್ತೆ ಬದಿಗಳಲ್ಲಿ, ನಗರದ ಅಲ್ಲಲ್ಲಿ  ಮಾರಾಟ ಮಾಡುತ್ತಿದ್ದಾರೆ. 

ಇನ್ನು ಈ ದಂಧೆ ಬಗ್ಗೆ ಸ್ಥಳೀಯರು ಬಗಲಗುಂಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸರು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಇದರಿಂದ ಸ್ಥಳೀಯರೇ ಈ ದಂಧೆ ವಿರುದ್ಧ ಸಮರ ಸಾರಿದ್ದಾರೆ. ನಿನ್ನೆ ರಾತ್ರಿ ಈ ನಕಲಿ ಮೊಟ್ಟೆ ಅಡ್ಡೆ ಮೇಲೆ ದಾಳಿ‌ ನಡೆಸಿದ್ದಾರೆ. ಈ ವೇಳೆ ಕೆಲ ಖಾಸಗಿ ಸುದ್ದಿ ವಾಹಿನಿಗಳ ವರದಿಗಾರರು ನಮಗೆ ಗೊತ್ತು ಎಂದು ದಂಧೆಯಲ್ಲಿ ತೊಡಗಿದ್ದವರು ಸ್ಥಳೀಯರಿಗೆ ಧಮ್ಕಿ ಹಾಕುವ ಕೆಲಸ ಕೂಡಾ ಮಾಡಿದ್ದಾರೆ. ಇಷೆಲ್ಲಾ ನಡೆಯುತ್ತಿದ್ದ ವೇಳೆ ಸ್ಥಳೀಯರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ : ಸಿಸಿಬಿ ಅಧಿಕಾರಿಗಳ ಬಿಗ್ ಹಂಟ್.. ಮೊಬೈಲ್ ಬಿಡಿಭಾಗ ಕೊಳ್ಳುವ ಮುನ್ನ ಎಚ್ಚರ..!

ಅನೇಕ ವರ್ಷಗಳಿಂದ ಈ ನಕಲಿ ಮೊಟ್ಟೆ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತುಕೊಂಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News