'ಹಸುವಿಗೆ ಸೀಮಂತ ಕಾರ್ಯ'ಮಾಡಿ ಗಮನ ಸೆಳೆದ ಕುಟುಂಬ..!

ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಕಾರ್ಯ ನಡೆದಿದೆ. ಕುಟುಂಬಸ್ಥರೆಲ್ಲ ಸೇರಿಕೊಂಡು ಮನೆ ಮಗಳಿಗೆ ಸೀಮಂತ ಮಾಡುವ ರೀತಿಯಲ್ಲಿ ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ಕೊಬ್ಬರಿ, ಬೆಲ್ಲ, ಹೂವು, ಹಣ್ಣು, ಕಲ್ಲುಸಕ್ಕರೆ, ಕರ್ಜೂರ, ದ್ರಾಕ್ಷಿ, ಗೋಡಂಬಿ, ಬಳೆ, ಅರಿಶಿಣ-ಕುಂಕುಮ, ಸೀರೆ ಇಟ್ಟು ವಿಶೇಷ ಪೂಜೆ‌ ಮಾಡಿದ್ದಾರೆ.

Written by - Krishna N K | Last Updated : Aug 14, 2023, 09:44 AM IST
  • ಹಸುವಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಕುಟುಂಬವೊಂದು ಗಮನಸೆಳೆದಿದೆ.
  • ಈ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುದ್ದಗೆರೆ ಗ್ರಾಮದಲ್ಲಿ ನಡೆದಿದೆ.
  • ಕುಟುಂಬಸ್ಥರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಹಸುವಿಗೆ ಸೀಮಂತ ಕಾರ್ಯ'ಮಾಡಿ ಗಮನ ಸೆಳೆದ ಕುಟುಂಬ..! title=

ಮಂಡ್ಯ : ಹೆಣ್ಣುಮಕ್ಕಳಿಗೆ ಸೀಮಂತ ಮಾಡುವ ರೀತಿ ಹಸುವಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಕುಟುಂಬವೊಂದು ಗಮನಸೆಳೆದಿದೆ. ಈ ಅಪರೂಪದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುದ್ದಗೆರೆ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ಮುದ್ದಗೆರೆ ಗ್ರಾಮದ ರಾಜಪ್ಪ ಎಂಬುವವರ ಮನೆಯಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಕಾರ್ಯ ನಡೆದಿದೆ. ಕುಟುಂಬಸ್ಥರೆಲ್ಲ ಸೇರಿಕೊಂಡು ಮನೆ ಮಗಳಿಗೆ ಸೀಮಂತ ಮಾಡುವ ರೀತಿಯಲ್ಲಿ ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ಕೊಬ್ಬರಿ, ಬೆಲ್ಲ, ಹೂವು, ಹಣ್ಣು, ಕಲ್ಲುಸಕ್ಕರೆ, ಕರ್ಜೂರ, ದ್ರಾಕ್ಷಿ, ಗೋಡಂಬಿ, ಬಳೆ, ಅರಿಶಿಣ-ಕುಂಕುಮ, ಸೀರೆ ಇಟ್ಟು ವಿಶೇಷ ಪೂಜೆ‌ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದಗಂಗಾ ಮಠದ ಗೋಕಟ್ಟೆಯಲ್ಲಿ ಮತ್ತೊಂದು ಮೃತದೇಹ ಪತ್ತೆ!

ಸಾಂಪ್ರದಾಯಿಕವಾಗಿ ಹಸುವಿಗೆ ಹುಡುಗೆಯನ್ನ ತೊಡಿಸಿ ಸಂಭ್ರಮ ಸಡಗರದಿಂದ ಸೀಮಂತ ಕಾರ್ಯ ಮಾಡಲಾಗಿದೆ. ಬಂಧು ಬಾಂದವರನ್ನ ಕರೆಸಿ ಗ್ರಾಮಸ್ಥರೆಲ್ಲರಿಗೂ ಅಡುಗೆ ಮಾಡಿಸಿ ಕುಟುಂಬ ಉಣಬಡಿಸಿದೆ. ರೈತರಿಗೆ ಸಾಕು ಪ್ರಾಣಿಗಳು ಮನೆಯ ಸದಸ್ಯರಿದ್ದಂತೆ. ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ನಾವು ಸಮೃದ್ಧವಾಗಿರುತ್ತೇವೆ ಎನ್ನುವ ನಂಬಿಕೆ ಹಳ್ಳಿಗರಲ್ಲಿ ತಲ ತಲಾತಂರದಿಂದಲೂ ಇದೆ.

ನಮ್ಮ ಮನೆಯಲ್ಲಿ ಸಾಕುವ ಪ್ರಾಣಿಗಳನ್ನು ನಮ್ಮ ಮನೆಯ ಸದಸ್ಯರಂತೆ ನಾವು ಭಾವಿಸಿದ್ದೇವೆ. ನಮ್ಮ ಮನೆಯಲ್ಲಿ ಸೀಮಂತ ಮಾಡುತ್ತಿರುವುದರಿಂದ ಸಂಭ್ರಮ ಮನೆ ಮಾಡಿದೆ. ಹಸುವಿನ ಸೀಮಂತ ಮಾಡುತ್ತಿರುವುದು ವಿಶೇಷ ಮತ್ತು ವಿಶಿಷ್ಟವಾಗಿದೆ. ಇದೊಂದು ಮಾದರಿ ಕಾರ್ಯವಾಗಿದೆ. ಹೆಣ್ಣುಮಕ್ಕಳಿಗೆ ಮಾಡುವ ಸೀಮಂತ ಕಾರ್ಯದ ರೀತಿ ಮಾಡಿದ್ದೇವೆ. ಸಾಕು ಪ್ರಾಣಿಗಳನ್ನು ನಾವು ಗೌರವ ಮತ್ತು ಭಕ್ತಿಯಿಂದ ಕಾಣಬೇಕಾದದ್ದು ಧರ್ಮನೀಯ ಕಾರ್ಯ ಎಂದು ಸಾಕಮ್ಮ ಎಂಬುವರು ಹೇಳಿದರು. ಅಲ್ಲದೆ, ಕುಟುಂಬಸ್ಥರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News