ದಸರಾ, ದೀಪಾವಳಿಗೆ ಸರ್ಕಾರದಿಂದ ರೈತರಿಗೆ ಸಿಗಲಿದೆ ಬಂಪರ್ ಗಿಫ್ಟ್

ಸಹಕಾರಿ ಬ್ಯಾಂಕುಗಳಲ್ಲಿ ರೈತರು ಎಷ್ಟೇ ಹಣ ಠೇವಣಿ ಇಟ್ಟಿರಲಿ ಅವರಿಗೂ ಸಾಲ ಮನ್ನಾ ಅನ್ವಯವಾಗಲಿದೆ.

Updated: Sep 24, 2018 , 03:56 PM IST
ದಸರಾ, ದೀಪಾವಳಿಗೆ ಸರ್ಕಾರದಿಂದ ರೈತರಿಗೆ ಸಿಗಲಿದೆ ಬಂಪರ್ ಗಿಫ್ಟ್

ಬೆಂಗಳೂರು: ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೊದಲ ಹಂತದಲ್ಲಿ ಸಹಕಾರಿ ಸಂಘದ ರೈತರ ಸಾಲ ಮನ್ನಾ ಮಾಡಿದ್ದರು. ಅದರಂತೆ ಸಹಕಾರಿ ಸಂಘಗಳಲ್ಲಿ ರೈತರ  ಸಂಪೂರ್ಣ ಸಾಲವನ್ನು ಮನ್ನಾ ಮಾಡಿದ್ದರು. ದಸರಾ, ದೀಪಾವಳಿಗೆ ಸರ್ಕಾರದಿಂದ ರೈತರಿಗೆ ಬಂಪರ್ ಗಿಫ್ಟ್ ನೀಡಲು ಸರ್ಕಾರ ನಿರ್ಧರಿಸಿದ್ದು ಶೀಘ್ರದಲ್ಲೇ ಋಣಮುಕ್ತ ಪತ್ರವನ್ನು ರೈತರ ಕೈಗೆ ಸಿಗಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ರಾಜ್ಯದ 22 ಲಕ್ಷ ರೈತರಿಗೆ ಇದರ ಲಾಭ ದೊರೆಯಲಿದ್ದು,ಈ ಹಿಂದೆ ಸಹಕಾರಿ ಬ್ಯಾಂಕುಗಳಲ್ಲಿ ಹಣ ಠೇವಣಿ ಇಟ್ಟಿದ್ದು ಅಂತಹ ರೈತರು ಸಾಲಮನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ. ಹಿಂದಿನ‌ ಜಿಓ ತಿದ್ದುಪಡಿ ಮಾಡಿ, ಹೊಸ ಜಿಓ ಹೊರಡಿಸಲಾಗಿದೆ ಹೀಗಾಗಿ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಎಷ್ಟೇ ಹಣ ಠೇವಣಿ ಇಟ್ಟಿರಲಿ ಅವರಿಗೂ ಸಾಲ ಮನ್ನಾ ಅನ್ವಯವಾಗಲಿದೆ ಎಂದು ತಿಳಿಸಿದರು.

ಅಲ್ಲದೆ ಅಕ್ಟೋಬರ್ 5ರೊಳಗೆ ಸಹಕಾರಿ ಸಂಘಗಳಿಂದ ಸಾಲಗಾರರ ರಿಸಿಟ್ ಬಿಲ್ ಕೇಳಿದ್ದೇವೆ ಎಂದು ತಿಳಿಸಿದ ಸಚಿವರು, ಮುಂದಿನ ಜುಲೈ 20ರೊಳಗೆ ರಿನಿವಲ್​ ದಿನಕ್ಕೆ ತಕ್ಕಂತೆ ಸಾಲ ಮರುಪಾವತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.