ಬೆಂಗಳೂರು: ದೀಪಾವಳಿ ಹಬ್ಬದ ದಿನದಂದೆ ಫರ್ನೀಚರ್ ಶೋ ರೂಂಗೆ ಬೆಂಕಿ

Fire Accident In Bengaluru : ಹೊರಮಾವು ಔಟರ್ ರಿಂಗ್ ರೋಡ್ ನಲ್ಲಿನ ಸ್ಟಾನ್ಲಿ ಫರ್ನೀಚರ್ ಶೋರೂಂ ಬೆಂಕಿಗೆ ಆಹುತಿಯಾಗಿದೆ. ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ನಷ್ಟಕ್ಕೆ ಕಾರಣವಾಗಿದೆ.   

Written by - Chetana Devarmani | Last Updated : Nov 13, 2023, 08:45 AM IST
  • ಬೆಂಗಳೂರಿನ ಫರ್ನೀಚರ್ ಶೋರೂಂ ನಲ್ಲಿ ಬೆಂಕಿ
  • ಫರ್ನೀಚರ್ ಶೋರೂಂ ಬೆಂಕಿಗೆ ಆಹುತಿ
  • ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಬೆಂಕಿ
ಬೆಂಗಳೂರು: ದೀಪಾವಳಿ ಹಬ್ಬದ ದಿನದಂದೆ ಫರ್ನೀಚರ್ ಶೋ ರೂಂಗೆ ಬೆಂಕಿ title=

ಬೆಂಗಳೂರು: ದೀಪಾವಳಿ ಹಬ್ಬದ ದಿನವೇ ಫರ್ನೀಚರ್ ಶೋ ರೂಂಗೆ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊರಮಾವು ಔಟರ್ ರಿಂಗ್ ರೋಡ್ ನಲ್ಲಿನ ಸ್ಟಾನ್ಲಿ ಫರ್ನೀಚರ್ ಶೋರೂಂ ಬೆಂಕಿಗೆ ಆಹುತಿಯಾಗಿದೆ. ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ನಷ್ಟಕ್ಕೆ ಕಾರಣವಾಗಿದೆ. 

ಐದು ಅಂತಸ್ತಿನ‌ ಬಿಲ್ಡಿಂಗ್ ನಲ್ಲಿ ಮೂರು ಕಂಪನಿಗಳಿದ್ದವು. ಈ ಪೈಕಿ ಫರ್ನೀಚರ್ ಶೋರೂಂ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ. ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿ ಫರ್ನೀಚರ್ ಶೋರೂಂ ಇತ್ತು. ರಾತ್ರಿ 12 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. 

ಇದನ್ನೂ ಓದಿ : ಮಂಜೂರಾದ ಪೂರ್ತಿ ಸಾಲದ ಹಣ ನೀಡದ ಹಣಕಾಸು ಸಂಸ್ಥೆಗೆ ರೂ.1 ಲಕ್ಷ ದಂಡ 

ಬವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ಕಟ್ಟಡದಲ್ಲಿ ಸಿಲುಕಿದ್ದ ಸೆಕ್ಯೂರಿಟಿ ಗಾರ್ಡ್ ಗಳನ್ನ ರಕ್ಷಿಸಿದ್ದಾರೆ. ಇದರಿಂದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಫರ್ನಿಚರ್ ಶೋರೂಂ ಸಂಪೂರ್ಣ ಸುಟ್ಟು ಭಸ್ಮವಾಗಿ ಹೋಗಿದೆ.

ಉಳಿದಂತೆ ಕೋಚಿಂಗ್ ಸೆಂಟರ್ ಹಾಗೂ ಐಟಿ ಕಂಪನಿ ಸಣ್ಣಪುಟ್ಟ ವಸ್ತುಗಳು ಬೆಂಕಿ ಅನಾಹುತದಿಂದ ಹಾನಿಗೊಂಡಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸಿದ್ದಾರೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. 

ಇದನ್ನೂ ಓದಿ : ಬರಗಾಲದಲ್ಲೂ ಸಿಎಂ ಶೋಕಿ; ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News