ಬಿಜೆಪಿ ಪರಿವರ್ತನಾ ಯಾತ್ರೆಗೆ ಸಿದ್ದವಾಗಿದೆ ಐದು ವಿಶೇಷ ವಾಹನ

                   

Last Updated : Nov 2, 2017, 11:26 AM IST
ಬಿಜೆಪಿ ಪರಿವರ್ತನಾ ಯಾತ್ರೆಗೆ ಸಿದ್ದವಾಗಿದೆ ಐದು ವಿಶೇಷ ವಾಹನ title=

ಬಿಜೆಪಿಯ ಪರಿವರ್ತನ ಯಾತ್ರೆಗೆ ಐದು ವಿಶೇಷ ವಾಹನಗಳು ಸಿದ್ಧವಾಗಿದ್ದು, ಇಂದು ಮಾದಾವರ ನೈಸ್ ಮೈದಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದಾರೆ.

ಪರಿವರ್ತನಾ ವಾಹನಗಳ ವಿಶೇಷತೆ:

1) ಈ ಪರಿವರ್ತನಾ ಯಾತ್ರೆಯಲ್ಲಿ ಭಾಷಣಕ್ಕಾಗಿಯೇ ಒಂದು ಬೃಹತ್ ವಾಹನ ಸಿದ್ದವಾಗಿದೆ. ಹತ್ತರಿಂದ-ಹದಿನೈದು ಪ್ರಮುಖ ನಾಯಕರು ಜೊತೆಗೆ 50 ಮಂದಿ ದ್ವಿತೀಯ ಹಂತದ ನಾಯಕರು ನಿಲ್ಲಲು ಇರುವ ವಾಹನ ಸಿದ್ಧವಾಗಿದೆ. ವಾಹನದಲ್ಲಿ ಭಾಷಣಕ್ಕೆ ಮೈಕ್ ಮತ್ತು ಲೈಟ್ ವ್ಯವಸ್ಥೆ ಮಾಡಲಾಗಿದೆ.

2) ಜನಸಂಪರ್ಕ ಅಭಿಯಾನ ಯಾತ್ರೆಗೆ ಬಳಸಿದ್ದ ವಾಹನ ಸಹ ಈ ಯಾತ್ರೆಯಲ್ಲಿ ಬಳಕೆಗೊಳ್ಳಲಿದೆ.

3) ರೈತ ಚೈತನ್ಯ ಯಾತ್ರೆಗೆ ಬಳಸಿದ್ದ ವಿಶೇಷ ವಾಹನ ನೂತನ ಟಚ್ ನೊಂದಿಗೆ ಬಳಕೆಗೊಳ್ಳಲಿದೆ.

4) ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರವಾಸ ಮಾಡಲಿರುವ ವಾಹನ ಆಕರ್ಷಣೆಯ  ಪ್ರಮುಖ ಕೇಂದ್ರಬಿಂದು. ಆ ಬೃಹತ್ ವಾಹನದಲ್ಲಿ ಊಟದ ಹಾಲ್, ಅಡುಗೆ ಮನೆ, ಮಲಗುವ ಕೋಣೆ, ನೀರು ಹಾಗೂ ಶೌಚಾಲಯದ ವ್ಯವಸ್ಥೆ. ತುರ್ತು ಸಭೆ ನಡೆಸಲು ಕೂಡ ವಿಶೇಷ ವಾಹನದಲ್ಲಿ ವ್ಯವಸ್ಥೆ ಮಾಡಲಾಗಿದೆ.

5) ಇದರ ಜೊತೆಗೆ ಬಿಜೆಪಿ ಸೋಷಿಯಲ್ ಮೀಡಿಯಾ, ಧ್ವನಿವರ್ಧಕಗಳಿಗಾಗಿಯೇ ಪ್ರತ್ಯೇಕ ವಾಹನ ವ್ಯವಸ್ಥೆ

Trending News