ಧಾರವಾಡ: "ಉತ್ತರ ಕರ್ನಾಟಕದ ಜನಪದ ಗೀತ ಸಂಪ್ರದಾಯದಲ್ಲಿ ಸುಮಾರು ೬೫ಕ್ಕೂ ಹೆಚ್ಚು ಪ್ರಕಾರಗಳಿವೆ. ವಿಶಿಷ್ಠವಾದ ವಾದ್ಯಗಳ ಮೂಲಕ ಅವುಗಳನ್ನು ಹಾಡುತ್ತಾ ಮನರಂಜನೆಯ ಮಾಧ್ಯಮವಾಗಿ ಜನಪದವು ಆಗಿನ ಪ್ರಬಲ ಮಾಧ್ಯಮವಾಗಿತ್ತು. ಆದರೆ ಜಾಗತೀಕರಣದ ನೆಲೆಯಲ್ಲಿ ಜನಪದ ಸಾಹಿತ್ಯ, ಕಲೆ, ಸಂಪ್ರದಾಯಗಳು ಅವನತಿಯ ಹಾದಿಯನ್ನು ಹಿಡಿದಿವೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಜನಪದ ಪರಂಪರೆಯನ್ನು ನಾವೆಲ್ಲರೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಜನಪದರು ಸಮೂಹ ಸಹಭಾಗಿತ್ವದಲ್ಲಿ ಇಂತಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಬೇಕು.
ಉತ್ತರ ಕರ್ನಾಟಕದ ಎಲ್ಲ ರೀತಿಯ ಜನಪದ ಪ್ರಕಾರಗಳಿಗೆ ವಿಶೇಷವಾದ ಪ್ರೋತ್ಸಾಹ ಸಿಗಬೇಕು" ಎಂದು ನಿವೃತ್ತ ಆಕಾಶವಾಣಿ ಚನ್ನಪ್ಪ ಬೆಂಗೇರಿ ಅಭಿಪ್ರಾಯಪಟ್ಟರು. ಧಾರವಾಡ ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್ ಹಾಗೂ ಜೀವಿ ಕಲಾ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ 'ಮನೆಮನೆಯಲ್ಲಿ ಶ್ರಾವಣ ಜಾನಪದ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದು ಶ್ರಾವಣ ಮಾಸದಲ್ಲಿ ನಿರಂತರವಾಗಿ ೩೦ ದಿನಗಳವರೆಗೆ ಹುಬ್ಬಳ್ಳಿ-ಧಾರವಾಡದ ಮನೆಮನೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಕರ್ನಾಟಕದ ಬಿಜೆಪಿ ಮೇಲೆ ಹೈಕಮಾಂಡ್ ನಾಯಕರು ಎಳ್ಳಷ್ಟೂ ಭರವಸೆ ಇಟ್ಟುಕೊಂಡಿಲ್ಲವೇ?: ಕಾಂಗ್ರೆಸ್ ವ್ಯಂಗ್ಯ
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ವಾಂಸರಾದ ಡಾ. ಶ್ರೀಶೈಲ ಹುದ್ದಾರ ಅವರು "ಜನಪದದ ದಾಟಿಯಿಂದ ಮೂಲ ಸಾಹಿತ್ಯವನ್ನು ಬದಲಿಸಿ ಟಿವಿ ಮಾಧ್ಯಮಗಳು ಟಿಆರ್ ಪಿ ಸರಕನ್ನಾಗಿಸುವ ಅದರಿಂದ ಲಾಭ ಗಳಿಸುವ ಮಾರ್ಗವನ್ನು ಅನುಸರಿಸುತ್ತಿವೆ. ಇದರಿಂದ ಮೂಲ ಜನಪದ ಕಲಾವಿದರಿಗೆ ಸಲ್ಲುವ ಗೌರವವನ್ನು ಕಸಿದುಕೊಳ್ಳುತ್ತಿವೆ. ಊಟಕ್ಕೆ ಉಪ್ಪಿನಕಾಯಿ ಇದ್ದಂತೆ ಜನರ ಜೀವನದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದ ಜಾನಪದವು ಇಂದು ಆಧುನಿಕ ಕರ್ಕಶ ಸಂಗೀತವನ್ನು ಸೇರಿಸಿ ವ್ಯಾಪಾರದ ಸರಕನ್ನಾಗಿಸಿಕೊಂಡಿರುವುದು ಖೇದಕರ ಸಂಗತಿ." ಎಂದು ಅಭಿಪ್ರಾಯಪಟ್ಟರು.
ಕಳೆದ 9 ವರ್ಷಗಳಿಂದ ಸತತವಾಗಿ ಜನಪದ ಸಂಸ್ಕೃತಿ ಸಂಪ್ರದಾಯಗಳನ್ನು ಜನರಲ್ಲಿ ನೆನಪಿಸುವ ಕಾರ್ಯ ಮಾಡುತ್ತಿರುವ ಡಾ.ರಾಮು ಮೂಲಗಿಯವರು ಆಶಾಡ ಮಾಸ ಶ್ರಾವಣ ಮಾಸ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ಮಣ್ಣು ಪೂಜೆಗಳ ಹಬ್ಬಗಳ ಕುರಿತು ಹಾಡಿನೊಂದಿಗೆ ನೆರೆದ ಸಭಿಕರಿಗೆ ವಿವರಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಶಂಭು ಹೆಗಡಾಳ ಅವರು ಮಾತನಾಡಿ, "ದಿನನಿತ್ಯವೂ ಒಂದೂವರೆ ಗಂಟೆಯವರೆಗೆ ಉಪನ್ಯಾಸ ಮತ್ತು ಹಾಡುಗಾರಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಪದ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾದರೆ ನಾವು ಶ್ರಮಪಟ್ಟಿದ್ದು ಸಾರ್ಥಕವಾಗುತ್ತದೆ. ಈಗಿನ ಯುವಪೀಳಿಗೆಯಲ್ಲಿ ಜನಪದ ಕಲೆಗಳ ಕುರಿತಾದ ಆಸಕ್ತಿ ಕಡಿಮೆಯಾಗುತ್ತಿದೆ. ಆದ್ದರಿಂದ ಅವರಲ್ಲಿ ಜಾನಪದ ಪ್ರಜ್ಞೆಯನ್ನು ಮೂಡಿಸುವ ಜವಾಬ್ದಾರಿಯನ್ನು ಮುಂಪಕ್ತಿಯಲ್ಲಿರುವ ನಾವು ಹೊರಬೇಕು" ಎಂದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳು ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿವೆ: ಕಾಂಗ್ರೆಸ್
ಕಾರ್ಯಕ್ರಮದ ವಿನ್ಯಾಸದ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿಗಳಾದ ಶಂಕರ ಕುಂಬಿ, ಡಾ. ಜಿ.ಎ.ತಿಗಡಿ, ಡಾ. ಗಿರೀಶ ದೇಸೂರ ಮಾತನಾಡಿದರು.ಶರಣ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಶಿವಶರಣ ಕಲಬಶೆಟ್ಟರ ಅವರ ಮನೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಟವಳಿ, ಶ್ರೀಮತಿ ಶಕುಂತಲಾ ಮನ್ನಂಗಿ, ಶ್ರೀಮತಿ ಶಾರದಾ ಕೌದಿ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರವನ್ನು ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ನಿರೂಪಿಸಿದರೆ ಸ್ವಾಗತಿಸಿದರೆ ವಂದಿಸಿದರು.ಮುತ್ತಣ್ಣ ಕಾರೇರ, ವಿನಯ ಹುಲ್ಲೂರು, ಸುರೇಶ ಹೊರಡಿ, ಸುರೇಶ ಹಿರೆಣ್ಣವರ, ರಾಮಣ್ಣ ಕೊಂಡಕೇರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.