H.D.Kumaraswamy: 'ಪ್ರತಿ ತಾಲ್ಲೂಕಿನಲ್ಲೂ 20 ಸಾವಿರ ಜೆಡಿಎಸ್ ಸದಸ್ಯತ್ವ ಮಾಡಿಸುತ್ತೇವೆ'

ಪ್ರತಿ ತಾಲ್ಲೂಕಿನಲ್ಲೂ 15 ರಿಂದ 20 ಸಾವಿರ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಹೊಸದಾಗಿ ಮಾಡುವ ಮೂಲಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

Last Updated : Jan 7, 2021, 08:21 PM IST
  • ಪ್ರತಿ ತಾಲ್ಲೂಕಿನಲ್ಲೂ 15 ರಿಂದ 20 ಸಾವಿರ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಹೊಸದಾಗಿ ಮಾಡುವ ಮೂಲಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
  • ಸಂಕ್ರಾಂತಿಯ ನಂತರ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು. ಕೇವಲ ಪ್ರಧಾನ ಕಾರ್ಯದರ್ಶಿಗಳನ್ನು ಮಾಡಿದರೆ ಉಪಯೋಗವಿಲ್ಲ. ಪಕ್ಷದ ಇಡೀ ವ್ಯವಸ್ಥೆಯನ್ನು ಬದಲಾಯಿಸಲಾಗುವುದು ಎಂದರು.
  • ಸದ್ಯದಲ್ಲೇ ಪಕ್ಷದ ಕೋರ್ ಕಮಿಟಿಯನ್ನು ಮಾಡಲಿದ್ದು, ಆ ಕಮಿಟಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಬೇಕು. ಒಮ್ಮೆ ಸಭೆಗೆ ಬಾರದಿದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುವುದು.
H.D.Kumaraswamy: 'ಪ್ರತಿ ತಾಲ್ಲೂಕಿನಲ್ಲೂ 20 ಸಾವಿರ ಜೆಡಿಎಸ್ ಸದಸ್ಯತ್ವ ಮಾಡಿಸುತ್ತೇವೆ' title=

ಬೆಂಗಳೂರು: ಪ್ರತಿ ತಾಲ್ಲೂಕಿನಲ್ಲೂ 15 ರಿಂದ 20 ಸಾವಿರ ಜೆಡಿಎಸ್ ಪಕ್ಷದ ಸದಸ್ಯತ್ವವನ್ನು ಹೊಸದಾಗಿ ಮಾಡುವ ಮೂಲಕ ಹೊಸ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಪಿ ಭವನದಲ್ಲಿ ನಡೆದ ಶಾಸಕರು, ಸಂಸದರು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಒಳಗೊಂಡ ಸಂಘಟನಾ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ(H.D.Kumaraswam), ಸಂಕ್ರಾಂತಿಯ ನಂತರ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು. ಕೇವಲ ಪ್ರಧಾನ ಕಾರ್ಯದರ್ಶಿಗಳನ್ನು ಮಾಡಿದರೆ ಉಪಯೋಗವಿಲ್ಲ. ಪಕ್ಷದ ಇಡೀ ವ್ಯವಸ್ಥೆಯನ್ನು ಬದಲಾಯಿಸಲಾಗುವುದು ಎಂದರು.

J.C.Madhuswamy: ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್​..! ನಾಲಿಗೆ ಹರಿಯಬಿಟ್ಟ ಮಾಧುಸ್ವಾಮಿ!

ಸದ್ಯದಲ್ಲೇ ಪಕ್ಷದ ಕೋರ್ ಕಮಿಟಿಯನ್ನು ಮಾಡಲಿದ್ದು, ಆ ಕಮಿಟಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಬೇಕು. ಒಮ್ಮೆ ಸಭೆಗೆ ಬಾರದಿದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುವುದು. ಪದಾಧಿಕಾರಿಗಳ ನೇಮಕವನ್ನು ಕಡಿಮೆ ಮಾಡುತ್ತೇವೆ. ಒಂದೊಂದು ವಿಭಾಗಕ್ಕೆ ಒಂದೊಂದು ಟೀಂ ಮಾಡುವ ಮೂಲಕ ಜಾತಿವಾರು ಪ್ರಾತಿನಿಧ್ಯ ನೀಡುತ್ತೇವೆ. ನಾಯಕರ ಸುತ್ತ ಸುತ್ತುವವರಿಗೆ ಅವಕಾಶವಿಲ್ಲ. ಜನರ ಮಧ್ಯೆ ಇರುವವರನ್ನು ಗುರುತಿಸಿ ಪಕ್ಷದಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು.

Govind Karjol: 'ಸಿಎಂ ಹುದ್ದೆ ಖಾಲಿ ಇಲ್ಲ, ಮುಂದಿನ ಎರಡುವರೆ ವರ್ಷ ಬಿಎಸ್ ವೈನವ್ರೇ ಮುಖ್ಯಮಂತ್ರಿ'

ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಜನತಾ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಪಕ್ಷ ಬಿಟ್ಟು ಹೋಗುವವರಿಗೆ ನಾವು ಕಾರಣಕರ್ತರಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ಬಿಡಲು ನಾವು ಕಾರಣರೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ಬಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಒಪ್ಪಿಸಿ ಮೈತ್ರಿ ಸರ್ಕಾರ ರಚನೆ ಮಾಡಲಾಯಿತು.

B.C.Patil: ರೈತರಲ್ಲಿ ಮನವಿ ಮಾಡಿಕೊಂಡ ಸಚಿವ ಬಿ.ಸಿ.ಪಾಟೀಲ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News