RL Jalappa : ಕೇಂದ್ರ ಮಾಜಿ ಸಚಿವ ಆರ್.ಎಲ್ ಜಾಲಪ್ಪ ಇನ್ನಿಲ್ಲ!

ಕೋಲಾರದ ಟಮಕದಲ್ಲಿನ ದೇವರಾಜ ಅರಸು ಮೆಡಿಕಲ್ ಕಾಲೇಜು(D Devaraj Arasu Medical College) ಕ್ಯಾಂಪಸ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು,

Written by - Channabasava A Kashinakunti | Last Updated : Dec 17, 2021, 08:37 PM IST
  • ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ
  • ಆರ್.ಎಲ್.ಜಾಲಪ್ಪ ಇಂದು ಸಂಜೆ 7.35 ಕ್ಕೆ ಅಸುನೀಗಿದ್ದಾರೆ.
  • ಇವರು 4 ಬಾರಿ ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸರಕಾರದ ಮಾಜಿ ಮಂತ್ರಿಗಳು
RL Jalappa : ಕೇಂದ್ರ ಮಾಜಿ ಸಚಿವ ಆರ್.ಎಲ್ ಜಾಲಪ್ಪ ಇನ್ನಿಲ್ಲ! title=

ಕೋಲಾರ : ಕಾಂಗ್ರೆಸ್  ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳುತ್ತಿದ್ದ ಅವರು ಇಂದು ಸಂಜೆ 7.35 ಕ್ಕೆ ಅಸುನೀಗಿದ್ದಾರೆ.

ಕೋಲಾರದ ಟಮಕದಲ್ಲಿನ ದೇವರಾಜ ಅರಸು ಮೆಡಿಕಲ್ ಕಾಲೇಜು(D Devaraj Arasu Medical College) ಕ್ಯಾಂಪಸ್ ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ರಾತ್ರಿ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ಸಂಬಂಧಿಕರು ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಿದ್ದಾರೆ. ನಾಳೆ ಸಂಜೆ ನಾಲ್ಕು ಗಂಟೆಗೆ ತೂಬುಗೆರೆ ಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಏರ್ಪಾಡು ಮಾಡಲಾಗಿದೆ. ನಂತರ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಕ್ಯಾಂಪಸ್ ನಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ.

ಇದನ್ನೂ ಓದಿ : ಅತ್ಯಾಚಾರದ ಹೇಳಿಕೆ: ಕ್ಷಮೆಯಾಚಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಆರ್.ಎಲ್. ಜಾಲಪ್ಪ(96)(RL Jalappa) ರವರು ಕರ್ನಾಟಕದ ರಾಜಕಾರಣಿ, ಇವರು 4 ಬಾರಿ ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸರಕಾರದ ಮಾಜಿ ಮಂತ್ರಿಗಳು ಆಗಿದ್ದಾರೆ. ಇವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇವರು ಕರ್ನಾಟಕ ವಿಧಾನಸಭೆಯ ಸದಸ್ಯರು ಕೂಡಾ ಆಗಿದ್ದರು. 19 ಅಕ್ಟೋಬರ್ 1925 ರಲ್ಲಿ ಬೆಂಗಳುರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಜನಿಸಿದವರು, ಪತ್ನಿ ವಿಜಯಲಕ್ಷ್ಮಿ ಹಾಗೂ 3 ಗಂಡು ಹಾಗು ೪ ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ.

ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(Indian National Congress) ನ ಸದಸ್ಯರಾಗಿದ್ದು, ಬಿ.ಎ.ಪದವಿಯನ್ನು ಮಹಾರಾಜ ಕಾಲೇಜು ಮೈಸೂರಿನಲ್ಲಿ ಪಡೆದಿದ್ದಾರೆ. ಅವರ ಪೂರ್ಣ ಹೆಸರು ಅರ್.ಲಕ್ಷ್ಮಿ ನಾರಾಯಣಪ್ಪ ಜಾಲಪ್ಪ.  1996 ರಿಂದ 2009 ರ ವರೆಗೆ ಚಿಕ್ಕಬಳ್ಳಾಪುರ ಲೋಕಸಭೆ ಸದಸ್ಯರಾಗಿ ಆಯ್ಕೆ, ನಾಲ್ಕು ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಆಯ್ಕೆ. ದೇವೆಗೌಡ ಅವರ ಸಚಿವ ಸಂಪುಟದಲ್ಲಿ ಕೇಂದ್ರದ ಸಚಿವರಾಗಿ ಸೇವೆ. 1996 ರಿಂದ 98 ರ ವರೆಗೆ ಕೇಂದ್ರ ಜವಳಿ(ಟೆಕ್ಸ್ ಟೈಲ್) ಖಾತೆ ರಾಜ್ಯ ಸಚಿವರಾಗಿ ಸೇವೆ. ದೇವರಾಜ ಅರಸು ಅವರೊಂದಿಗೆ ಬೆಳೆದು ಬಂದ ನಾಯಕ, 1979 ರಲ್ಲಿ ಕರ್ನಾಟಕ ಕ್ರಾಂತಿ ರಂಗ. ಅರಸು ಅವರೊಂದಿಗೆ 1980 ರಲ್ಲಿ ಜನತಾ ಪಾರ್ಟಿಗೆ ಸೇರ್ಪಡೆ. 1989 ರಲ್ಲಿ ಜನತಾ ದಳಕ್ಕೆ ಸೇರ್ಪಡೆ, ಈಡಿಗ ಸಮುದಾಯದವರಾಗಿರುವ ಜಾಲಪ್ಪ, ಮೊದಲಿಗೆ ದೊಡ್ಡ ಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ರಾಜ್ಯದಲ್ಲೂ ಸಹಕಾರ ಹಾಗೂ ಕಂದಾಯ ಸಚಿವರಾಗಿ ಸೇವೆ. ರಾಜಕಾರಣಿ, ಕೃಷಿಕ, ಶಿಕ್ಷಣ ಕ್ಷೇತ್ರದಲ್ಲೂ ಅವರು ಆಸಕ್ತಿ ಹೊಂದಿದ್ದರು. ಸಧ್ಯ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು ಹಾಗೂ ಅರ್.ಎಲ್ ಜಾಲಪ್ಪ ಅಸ್ಪತ್ರೆ ಸಂಶೋಧನಾ ಕೇಂದ್ರದ ಅಧ್ಯಕ್ಷರು.

ಇದನ್ನೂ ಓದಿ : Bangalore Crime : ಹಣಕ್ಕಾಗಿ ಪ್ರೇಯಸಿಯನ್ನೇ ಕೊಂದ ಪ್ರಿಯಕರ‌‌‌‌!

1980-83 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
1983-96  ಸದಸ್ಯರು, ಕರ್ನಾಟಕ ವಿಧಾನಸಭೆ
1983-84 ಮತ್ತು 1985-86 ಮಂತ್ರಿ, ಸಹಕಾರ, ಕರ್ನಾಟಕ ಸರ್ಕಾರ
1986-87 ಮಂತ್ರಿ, ಗೃಹ ವ್ಯವಹಾರಗಳ, ಕರ್ನಾಟಕ ಸರ್ಕಾರ
1995-96 ಸಚಿವ, ಕಂದಾಯ, ಕರ್ನಾಟಕ ಸರ್ಕಾರ
1996 11 ನೇ ಲೋಕಸಭೆಗೆ ಚುನಾಯಿತ ಜವಳಿ
1996-98 ಕೇಂದ್ರ ಜವಳಿ ಸಚಿವ
1998 12 ನೇ ಲೋಕಸಭೆ ಮರುಚುನಾಯಿತರಾದವರು(2 ನೇ ಪದ)
1998-99 ಸದಸ್ಯರು, ಹಣಕಾಸು ಸಮಿತಿ ಸದಸ್ಯ, ಸಂಸತ್ತಿನ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸದಸ್ಯರು ಸಮಿತಿ , ಸಲಹಾ ಸಮಿತಿಯ ಸದಸ್ಯರು ಕೃಷಿ ಸಚಿವಾಲಯ.
1999 ಮರುಚುನಾಯಿತರಾದವರು 13 ನೇ ಲೋಕಸಭೆ (3 ನೇ ಪದ)
1999-2000 ಸದಸ್ಯರು, ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಮಿತಿ ಸದಸ್ಯರು.
2004 ಮರುಚುನಾಯಿತರಾದವರು 14 ಲೋಕಸಭೆ (4ನೇ ಅವಧಿಗೆ),
2006 ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿಯ ಸದಸ್ಯರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News