ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ವಾನರ ನಡುವೆ ಗ್ಯಾಂಗ್ ವಾರ್...!

ಏರಿಯಾ ಬಾರ್ಡರ್ ಕ್ರಾಸ್ ಮಾಡಿದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ.

Last Updated : Jul 14, 2022, 08:53 PM IST
  • ಹನುಮನು ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ.
ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ವಾನರ ನಡುವೆ ಗ್ಯಾಂಗ್ ವಾರ್...! title=
screengrab

ಚಾಮರಾಜನಗರ : ಏರಿಯಾ ಬಾರ್ಡರ್ ಕ್ರಾಸ್ ಮಾಡಿದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರಿನ ಸಂತೇಪೇಟೆ ಬೀದಿಯಲ್ಲಿ ಈ ಘಟನೆ ನಡೆದಿದೆ.ಹನುಮನು ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ.

ಒಂದು ಬಡಾವಣೆಯಲ್ಲಿರುವ ಕೋತಿಗಳು ಇನ್ನೊಂದು ಬೀದಿಗೆ ಲಗ್ಗೆ ಹಾಕಲು ಮೂಲ‌ ನಿವಾಸಿ ಕೋತಿಗಳ ಸೈನ್ಯ ಬಿಡುವುದಿಲ್ಲ.ಆದರೆ ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕೋತಿಗಳ ಹಿಂಡು ಸಂತೆಪೇಟೆ ಬೀದಿಗೆ ಲಗ್ಗೆ ಇಟ್ಟಿದ್ದವು.ಇದರಿಂದ ರೊಚ್ಚಿಗೆದ್ದ ವಿರೋಧಿ ಕೋತಿಗಳ ಗುಂಪುಗಳು ಜಗಳಕ್ಕಿಳಿದವು.ಸಾರ್ವಜನಿಕರು ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News