ಮೊದಲು ಆಂಬ್ಯುಲೆನ್ಸ್ ಹೋಗಲು ಅವಕಾಶ ನೀಡಿ: ಡಿಸಿಎಂ ಪರಮೇಶ್ವರ್

ಟ್ರಾಫಿಕ್'ನಲ್ಲಿ ಆಂಬುಲೆನ್ಸ್ ಇದ್ದರೆ ಅದರ ಸಂಚಾರಕ್ಕೆ ಮೊದಲು ಅಗತ್ಯ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. 

Updated: Jul 8, 2018 , 03:55 PM IST
ಮೊದಲು ಆಂಬ್ಯುಲೆನ್ಸ್ ಹೋಗಲು ಅವಕಾಶ ನೀಡಿ: ಡಿಸಿಎಂ ಪರಮೇಶ್ವರ್

ಬೆಂಗಳೂರು: ಗಣ್ಯ ವ್ಯಕ್ತಿಗಳ ವಾಹನಗಳಿಗೆ ಶಿಷ್ಟಾಚಾರದಂತೆ ಜೀರೋ ಟ್ರಾಫಿಕ್ ಮಾರ್ಗಕ್ಕೆ ಅವಕಾಶ ಮಾಡಿಕೊಡುವ ಸಂದರ್ಭದಲ್ಲಿ ಟ್ರಾಫಿಕ್'ನಲ್ಲಿ ಆಂಬುಲೆನ್ಸ್ ಇದ್ದರೆ ಅದರ ಸಂಚಾರಕ್ಕೆ ಮೊದಲು ಅಗತ್ಯ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. 

ಈ ಬಗ್ಗೆ ಈಗಾಗಲೇ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದ್ದು, ಈ ನಿಯಮ ಎಲ್ಲಾ ಜಿಲ್ಲೆಗಳಲ್ಲೂ ಜಾರಿಯಾಗುವಂತೆ ಸೂಚನೆ ನೀಡಿದ್ದಾರೆ. 

"ನನಗೆ ಮತ್ತು ಇನ್ನಿತರ ಗಣ್ಯರಿಗೆ ಶಿಷ್ಟಾಚಾರದಂತೆ ದಟ್ಟಣೆಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಂದರ್ಭದಲ್ಲಿ ಇತರ ವಾಹನಗಳ ಮಧ್ಯೆ ಆಂಬ್ಯುಲೆನ್ಸ್'ಗೆ ಅಡ್ಡಿಯಾಗಿದ್ದನ್ನು ನೋಡಿದ್ದೇನೆ. ನಮ್ಮಿಂದ ರೋಗಿಗಳಿಗೆ ತೊಂದರೆಯಾಗಬಾರದು. ಹಾಗಾಗಿ ಮೊದಲು ಆಂಬ್ಯುಲೆನ್ಸ್ ಸಂಚರಿಸಲು ಮುಕ್ತ ಅವಕಾಶ ಮಾಡಿಕೊಡಬೇಕಿದೆ" ಎಂದು‎ ಜಿ.ಪರಮೇಶ್ವರ್ ತಿಳಿಸಿದರು.