ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ಇಲ್ಲಿದೆ. 2021 ರ ಜನವರಿಯಲ್ಲಿ ನಿರೀಕ್ಷಿಸಲಾಗಿರುವ ಡಿಎ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಶೇಕಡ 4 ರಷ್ಟು ಡಿಎ ಹೆಚ್ಚಳ ನಿರೀಕ್ಷಿಸಲಾಗಿದೆ.
7 ನೇ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿ ಡಿಎ(DA) ಹೆಚ್ಚಳವಾಗಲಿದ್ದು, ಅಂಗೀಕೃತ ಸೂತ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಹೇಳಲಾಗಿದೆ.
Wedding Gift : ಇಷ್ಟವಾದ ಉಡುಗೊರೆ ಸಿಕ್ಕಿಲ್ಲ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 2020 ರ ಮಾರ್ಚ್ ನಲ್ಲಿ ನಡೆದಿದ್ದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ ಕಂತನ್ನು ಪಿಂಚಣಿದಾರರು ಮತ್ತು ನೌಕರರಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿತ್ತು. ಪ್ರಸ್ತುತ 4ರಷ್ಟು ಡಿಎ ಹೆಚ್ಚಳದೊಂದಿಗೆ ಶೇಕಡ 17 ರಷ್ಟು ಏರಿಕೆಯಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
LPG Cylinder: 'ಸಿಲಿಂಡರ್ ಡೆಲಿವರಿ ಬಾಯ್ಗೆ ‘ಡೆಲಿವರಿ ಚಾರ್ಜ್’ ಕೊಡಬೇಕಿಲ್ಲ'
48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು, 65.26 ಲಕ್ಷ ಪಿಂಚಣಿದಾರರಿಗೆ ಡಿಎ ಹೆಚ್ಚಳ ಸೌಲಭ್ಯ ಸಿಗಲಿದೆ. ಇದರಿಂದ 2020 - 21 ನೇ ಆರ್ಥಿಕ ವರ್ಷದಲ್ಲಿ 14,595.04 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ 38 ಜನರಲ್ಲಿ 'ಹೈಸ್ಪೀಡ್ ವೈರಸ್' ಸೋಂಕು ಪತ್ತೆ: ಆರೋಗ್ಯ ಸಚಿವಾಲಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.