ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿ ಖಾತಾ ಆಸ್ತಿ ಮಾಲಿಕರಿಗೆ ಪಾಲಿಕೆ ವತಿಯಿಂದ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಸರ್ಕಾರದ ಗ್ರೀನ್ ಸಿಗ್ನಲ್ ಗೆ ಕಾಯುತ್ತಿರುವ ಪಾಲಿಕೆ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಬಿ ಖಾತಾ ಇರುವವರಿಗೆ ಎ ಖಾತಾ ನೀಡಲು ನಿರ್ಧರಿಸಿದೆ.
ಹೌದು.. ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 6.16 ಲಕ್ಷ ಸ್ವತ್ತುಗಳು ಬಿ ಖಾತದಲ್ಲಿವೆ. ಬಿ ಯಿಂದ ಎ ಖಾತಾಗೆ ಸ್ವತ್ತುಗಳು ವರ್ಗಾವಣೆಗೊಂಡರೆ ಪಾಲಿಕೆಗೆ ಆದಾಯ ಕೂಡ ಹೆಚ್ಚಾಗಲಿದ್ದು ಇದರಿಂದ 2,500 ಕೋಟಿಗೂ ಅಧಿಕ ಆದಾಯದ ನಿರೀಕ್ಷಿಸಲಾಗಿದೆ. ಈ ಸಂಬಂಧ ಶೀಘ್ರವೇ ಸರ್ಕಾರದಿಂದ ಮಾನದಂಡ ಪಟ್ಟಿ ಬಿಡುಗಡೆಯಾಗಲಿದ್ದು, ಬಿಬಿಎಂಪಿ ಚುನಾವಣೆಗೂ ಮೊದಲೇ ಖಾತಾ ವರ್ಗಾವಣೆ ಆರಂಭವಾಗಲಿದೆ. ಪಾಲಿಕೆಯ ಕೇಂದ್ರ ಭಾಗದಲ್ಲಿ ಚದರ ಮೀಟರ್ ಗೆ 200 ಹಾಗೂ ಹೊರ ವಲಯದಲ್ಲಿ 250 ರೂಪಾಯಿ ನಿಗಧಿ ಸಾಧ್ಯತೆ ಇದೆ. ಈ ದರ ನಿಗದಿಯಾದರೆ ನಗರದ ಒಳಗೆ 30/40 ಸೈಟ್ ಗೆ 22 ಸಾವಿರ ಹಾಗೂ ಹೊರ ಭಾಗದಲ್ಲಿ 27 ಸಾವಿರ ಶುಲ್ಕ ನಿಗದಿಯಾಗಲಿದೆ.
ಇದನ್ನೂ ಓದಿ : ಖರೀದಿ ಮಾಡಿದ್ದು 90 ಎಲೆಕ್ಟ್ರಿಕ್ ಬಸ್- ಆದ್ರೆ ರಸ್ತೆಗಿಳಿದಿರೋದು ಕೇವಲ 28 ಬಸ್
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಸರ್ಕಾರದಿಂದ ಸ್ಪಷ್ಟ ಆದೇಶ ಬಂದ ನಂತರ ನಮ್ಮ ಅಧಿಕಾರಿಗಳಿಗೆ ನಿರ್ದೇಶನ ಕೊಡುತತ್ತೇವೆ. ಬಿ ಖಾತಾ ಇರುವ ಒಟ್ಟು ಆಸ್ತಿಗಳು 6 ಲಕ್ಷಕ್ಕೂ ಅಧಿಕ ಇದ್ದು ಅವುಗಳನ್ನ ಪರಿವರ್ತನೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಆಸ್ತಿ ಮಾಲೀಕರ ಬಳಿ ದಾಖಲೆ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದಿದ್ದಾರೆ.
ನಗರದಲ್ಲಿ ಅಕ್ರಮ ಕಟ್ಟಡಗಳ ಕಡಿವಾಣಕ್ಕೆ ಇದು ಸಹಾಯ :
ಪಾಲಿಕೆಯ ಈ ನಿರ್ಧಾರದಿಂದ ಸಾಕಷ್ಟು ಸಹಾಕವಾಗಲಿದೆ. ಬಿ ಖಾತದಿಂದ ಎ ಖಾತ ಮಾಡುವುದರಿಂದ ಅಕ್ರಮ ಕಟ್ಟಡ ಕಡಿವಾಣಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಬಿ ಖಾತ ಸ್ವತ್ತಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕಡ್ಡಾಯವಲ್ಲ. ಅಲ್ಲದೇ
ಎ ಖಾತಾ ಮಾಡಿದರೆ ನಿಗದಿ ಮಾಡಿದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಾಣಕ್ಕೂ ಕಡಿವಾಣ ಬೀಳಲಿದೆ. 30/40 ಸ್ವತ್ತಿನಲ್ಲಿ ಗ್ರೌಂಡ್ ಫ್ಲೋರ್ ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶ ಇರುತ್ತದೆ. ಆದರೆ ನಗರದಲ್ಲಿ 30/40 ಸೈಟ್ ನಲ್ಲಿ ಅದಕ್ಕೂ ಮೀರಿದ ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಬಿ ಖಾತ ಸ್ವತ್ತು ಎ ಖಾತ ವ್ಯಾಪ್ತಿಗೆ ಒಳಪಟ್ಟರೆ ಸ್ವತ್ತಿನ ಮಾಲೀಕರಿಗೂ ಅನುಕೂಲವಾಗಲಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಪಾಲಿಕೆ ಅಧಿಕಾರಿಗಳು ಬಿಬಿಎಂಪಿಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.
ಇದನ್ನೂ ಓದಿ : ಪಿಎಸ್‌ಐ ಅಕ್ರಮ ಬೆನ್ನಲ್ಲೇ ರೈಲ್ವೇ ಇಲಾಖೆಯಲ್ಲಿ ನೇಮಕಾತಿ ಪ್ರಕರಣ ಬೆಳಕಿಗೆ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.