Government JOBS: ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443 ಹುದ್ದೆಗಳನ್ನು ತುಂಬಲು ಆನ್‍ಲೈನ್ ಪ್ರಕಟಣೆ/ ಜಾಹಿರಾತು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Last Updated : Dec 30, 2020, 12:03 AM IST
  • ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443 ಹುದ್ದೆಗಳನ್ನು ತುಂಬಲು ಆನ್‍ಲೈನ್ ಪ್ರಕಟಣೆ/ ಜಾಹಿರಾತು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
  • ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪಾಸಾಗಿರಬೇಕು, ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷಗಳಾಗಿದ್ದು
Government JOBS: ಗ್ರಾಮೀಣ ಅಂಚೆ ನೌಕರರ ಹುದ್ದೆಗೆ ಅರ್ಜಿ ಆಹ್ವಾನ title=
Photo Courtesy: Twitter

ಬೆಂಗಳೂರು: ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443 ಹುದ್ದೆಗಳನ್ನು ತುಂಬಲು ಆನ್‍ಲೈನ್ ಪ್ರಕಟಣೆ/ ಜಾಹಿರಾತು ಪ್ರಕಟಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ, ಪಾಸಾಗಿರಬೇಕು, ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷಗಳಾಗಿದ್ದು, ಅನುಸೂಚಿತ ಜಾತಿ, ಬುಡಕಟ್ಟು, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ತಮ್ಮ ಹೆಸರನ್ನು http://appost.in/gdsonline ವೆಬ್‍ಸೈಟ್‍ನಲ್ಲಿ ಅಂತರ್ಜಾಲದ ಮೂಲಕ ನೊಂದಾಯಿಸಬಹುದಾಗಿದೆ.

ಇದನ್ನೂ ಓದಿ: Post Officeನಲ್ಲಿ 10, 12ನೇ ತರಗತಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗಾವಕಾಶ

ಹಿಂದುಳಿದ ವರ್ಗಗಳ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ.100/- ಅರ್ಜಿ ಶುಲ್ಕವನ್ನು ರಾಜ್ಯದ ಯಾವುದೇ ಮುಖ್ಯ ಅಂಚೆ ಕಚೇರಿಯಲ್ಲಿ ಅಥವಾ ಆಯ್ದ ಅಂಚೆ ಕಚೇರಿಗಳ ಕೌಂಟರ್‍ನಲ್ಲಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು 2020 ರ ಜ. 20 ಕೊನೆಯ ದಿನವಾಗಿರುತ್ತದೆ.

ಮೇಲೆ ತಿಳಿಸಿರುವ ವೆಬ್‍ಸೈಟ್ ನ ಹೋಮ್ ಪೇಜ್‍ನಲ್ಲಿ ಲಭ್ಯವಿರುವ ಯುಆರ್‍ಎಲ್ ನ ಮೂಲಕ ಶುಲ್ಕವನ್ನು ಕಟ್ಟಬಹುದಾಗಿದೆ. ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ, ತೃತಿಯ ಲಿಂಗಿಗಳಿಗೆ ಮತ್ತು ಅನುಸೂಚಿತ ಜಾತಿ/ಬುಡಕಟ್ಟು ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಅರ್ಜಿಯನ್ನು ಆನ್‍ಲೈನ್ ನಲ್ಲಿ ಮೂಲಕ ಮಾತ್ರ ಸಲ್ಲಿಸಬೇಕು.

ಇದನ್ನೂ ಓದಿ: ಅಂಚೆ ಕಚೇರಿಯಲ್ಲಿ ಡಿಎಲ್‌ನಿಂದ ಪ್ಯಾನ್ ಕಾರ್ಡ್‌ವರೆಗೆ ಅರ್ಜಿ ಸಲ್ಲಿಸಲು ಇದು ಸುಲಭ ವಿಧಾನ

ಹೆಚ್ಚಿನ ಮಾಹಿತಿಗಾಗಿ ಪೋಸ್ಟ್ ಮಾಸ್ಟರ್ ಜನರಲ್ ಬೆಂಗಳೂರು ಮುಖ್ಯ ಕಾರ್ಯಾಲಯ ದೂ.ಸಂ: 080-22392599, ಪೋಸ್ಟ್ ಮಾಸ್ಟರ್ ಜನರಲ್ ದಕ್ಷಿಣ ಕರ್ನಾಟಕ ವಲಯ ದೂ.ಸಂ: 9481455606, ಪೋಸ್ಟ್ ಮಾಸ್ಟರ್ ಜನರಲ್ ಉತ್ತರ ಕರ್ನಾಟಕ ವಲಯ ದೂ.ಸಂ: 0836-2740454, ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕರ್ನಾಟಕ ವೃತ್ತ ದೂ.ಸಂ: 080-22392544 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Trending News