Post Officeನಲ್ಲಿ 10, 12ನೇ ತರಗತಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗಾವಕಾಶ

Post Office Jobs 2020: ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಇಂಡಿಯಾ ಪೋಸ್ಟ್‌ನಲ್ಲಿ ಬಂಪರ್ ಉದ್ಯೋಗಾವಕಾಶವಿದೆ.  10 ಮತ್ತು 12 ನೇ ಪಾಸ್ ಆದವರು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು.

Last Updated : Oct 21, 2020, 09:40 AM IST
  • ಅಧಿಕೃತ ಅಧಿಸೂಚನೆಯ ಪ್ರಕಾರ, ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿ 18 ರಿಂದ 27 ವರ್ಷಗಳು
  • ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಗೆ ಅರ್ಜಿ ಸಲ್ಲಿಸುವವರಿಗೆ ಅರ್ಹತಾ ವಯಸ್ಸು 18 ರಿಂದ 25 ವರ್ಷಗಳು ಆಗಿರಬೇಕು.
Post Officeನಲ್ಲಿ 10, 12ನೇ ತರಗತಿ ಪಾಸ್ ಆದವರಿಗೆ ಭರ್ಜರಿ ಉದ್ಯೋಗಾವಕಾಶ title=

ನವದೆಹಲಿ : Post Office Jobs 2020: ಸರ್ಕಾರಿ ಉದ್ಯೋಗ (Government Job)ವನ್ನು ಹುಡುಕುತ್ತಿರುವ ಜನರಿಗೆ ಇಂಡಿಯಾ ಪೋಸ್ಟ್‌ನಲ್ಲಿ (India Post) ಬಂಪರ್ ಉದ್ಯೋಗಾವಕಾಶವಿದೆ.  10 ಮತ್ತು 12 ನೇ ಪಾಸ್ ಆದವರು ಕೂಡ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಭಾರತೀಯ ಅಂಚೆ ಇಲಾಖೆಯ (Post Office) ಮಹಾರಾಷ್ಟ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿಯನ್ನು ಇಲಾಖೆ ಪ್ರಕಟಿಸಿದೆ. ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 3 ಆಗಿದೆ.

ಮಾಸಿಕ ಸಂಬಳ ಎಷ್ಟು?

  • ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್‌ಗೆ ಮಾಸಿಕ ವೇತನ (ವೇತನ ಮಟ್ಟ 3 ರ ಪ್ರಕಾರ) 21,700 ರೂ.ಗಳಿಂದ 69,100 ರೂ.ವರೆಗೆ ಇರುತ್ತದೆ.
  • ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಹುದ್ದೆಗೆ ನೇಮಕಗೊಂಡವರ ವೇತನ ಪ್ರಮಾಣವು  (ವೇತನ ಶ್ರೇಣಿ 1 ರ ಪ್ರಕಾರ) 18,000 ರಿಂದ 56,900 ರೂ.ಗಳವರೆಗೆ ಇರುತ್ತದೆ.

ವಯೋಮಿತಿ:
ಅಧಿಕೃತ ಅಧಿಸೂಚನೆಯ ಪ್ರಕಾರ, ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸಿನ ಮಿತಿ 18 ರಿಂದ 27 ವರ್ಷಗಳು. ಅದೇ ಸಮಯದಲ್ಲಿ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಗೆ ಅರ್ಜಿ ಸಲ್ಲಿಸುವವರಿಗೆ ಅರ್ಹತಾ ವಯಸ್ಸು 18 ರಿಂದ 25 ವರ್ಷಗಳು ಆಗಿರಬೇಕು.

ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು

ವಿದ್ಯಾರ್ಹತೆ: 
ಪೋಸ್ಟ್‌ಮ್ಯಾನ್ / ಮೇಲ್ ಗಾರ್ಡ್‌ಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು. ಮಹಾರಾಷ್ಟ್ರ (Maharashtra) ರಾಜ್ಯದಲ್ಲಿ ಆಯ್ಕೆ ಮಾಡಲು, ಅರ್ಜಿದಾರರು ಮರಾಠಿ ಭಾಷೆಯನ್ನು ಕನಿಷ್ಠ 10ನೇ ತರಗತಿಯವರೆಗೆ ಓದಿರಬೇಕು. ಅದೇ ಸಮಯದಲ್ಲಿ ಗೋವಾ ರಾಜ್ಯದಲ್ಲಿ ಕಾರ್ಯ ನಿರ್ವಹಿಸಲು ಇಚ್ಚಿಸುವ ಅರ್ಜಿದಾರರು ಕನಿಷ್ಠ 10 ನೇ ತರಗತಿಯವರೆಗೆ ಕೊಂಕಣಿ ಅಥವಾ ಮರಾಠಿ ಭಾಷೆಯನ್ನು ಓದಿರಬೇಕು. ಇದರೊಂದಿಗೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ತಿಳುವಳಿಕೆಯೂ ಮುಖ್ಯವಾಗಿದೆ. ಅರ್ಜಿದಾರನು ಕಂಪ್ಯೂಟರ್‌ನಲ್ಲಿ ಡೇಟಾ ಎಂಟ್ರಿ  ಟೆಸ್ಟ್ ನೀಡಬೇಕಾಗುತ್ತದೆ.

ಅಂಚೆ ಕಚೇರಿಯಲ್ಲಿ ಡಿಎಲ್‌ನಿಂದ ಪ್ಯಾನ್ ಕಾರ್ಡ್‌ವರೆಗೆ ಅರ್ಜಿ ಸಲ್ಲಿಸಲು ಇದು ಸುಲಭ ವಿಧಾನ

10ನೇ ತರಗತಿ ಪಾಸ್ ಆದವರಿಗಾಗಿ...
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮಹಾರಾಷ್ಟ್ರ ರಾಜ್ಯದಲ್ಲಿ ಆಯ್ಕೆ ಮಾಡಲು, ಅರ್ಜಿದಾರರು ಮರಾಠಿ ಭಾಷೆಯನ್ನು ಕನಿಷ್ಠ 10ನೇ ತರಗತಿಯವರೆಗೆ ಓದಿರಬೇಕು. ಅದೇ ಸಮಯದಲ್ಲಿ ಗೋವಾ (Goa) ರಾಜ್ಯದಲ್ಲಿ ಕೆಲಸ ಮಾಡಲಿಚ್ಚಿಸುವ ಅರ್ಜಿದಾರರು ಕನಿಷ್ಠ10ನೇ ತರಗತಿಯವರೆಗೆ ಕೊಂಕಣಿ ಅಥವಾ ಮರಾಠಿ ಭಾಷೆಯನ್ನು ಓದಿರಬೇಕು. ಇದರೊಂದಿಗೆ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ತಿಳುವಳಿಕೆಯೂ ಮುಖ್ಯವಾಗಿದೆ. ಅರ್ಜಿದಾರನು ಕಂಪ್ಯೂಟರ್‌ನಲ್ಲಿ ಡೇಟಾ ಎಂಟ್ರಿ  ಟೆಸ್ಟ್ ನೀಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್‌ಗೆ ಹೋಗಿ- https: //dopmah20.onlineapDlicationform.oro/MHPOST/.
 

Trending News