ವಿಧಾನಸಭೆ ಚುನಾವಣೆಯಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿ ಆಗಿದ್ದಿದ್ದರೆ ಇಂಥ ಕೆಟ್ಟ ಸರಕಾರ ಬರುತ್ತಿರಲಿಲ್ಲ: ತೇಜಸ್ವಿ ಸೂರ್ಯ

Tejasvi Surya :ಕಳೆದ ವಿಧಾಸಭೆ ಚುನಾವಣೆಯಲ್ಲಿಯೇ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ  ಆಗಬೇಕಿತ್ತು. ಆಗ ಎರಡೂ ಪಕ್ಷಗಳ ನಡುವೆ ಮೈತ್ರಿ ಆಗದ ಕಾರಣದಿಂದ ರಾಜ್ಯಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಹೇಳಿದರು.

Written by - Zee Kannada News Desk | Last Updated : Mar 28, 2024, 12:18 AM IST
  • ಮಂಗಳವಾರ ಬೆಳಗ್ಗೆ ನಾನು ಜೆಡಿಎಸ್‌ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದೆ ಆ ಸಂದರ್ಭದಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಯಿತು ಎಂದರು.
  • ವಿಧಾನಸಭೆ ಚುನಾವಣೆಯಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿ ಆಗಿದ್ದಿದ್ದರೆ ಇಂಥ ಕೆಟ್ಟ ಸರಕಾರ ಬರುತ್ತಿರಲಿಲ್ಲ
  • ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರಕಾರ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು ಹಾಗೂ ನಮ್ಮ ಮೈತ್ರಿಯ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲೇ ಜೆಡಿಎಸ್-ಬಿಜೆಪಿ ಮೈತ್ರಿ ಆಗಿದ್ದಿದ್ದರೆ ಇಂಥ ಕೆಟ್ಟ ಸರಕಾರ ಬರುತ್ತಿರಲಿಲ್ಲ: ತೇಜಸ್ವಿ ಸೂರ್ಯ title=

ಜೆಡಿಎಸ್‌ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬುಧವಾರ ನಡೆದ ಲೋಕಸಭೆ  ಚುನಾವಣೆಯ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದರು;  ಮಂಗಳವಾರ ಬೆಳಗ್ಗೆ ನಾನು ಜೆಡಿಎಸ್‌ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದೆ. ಆ ಸಂದರ್ಭದಲ್ಲಿ ಇದೇ ಅಭಿಪ್ರಾಯ ವ್ಯಕ್ತವಾಯಿತು ಎಂದರು.

ಕಾಂಗ್ರೆಸ್‌ ದುರಾಡಳಿತ ಎಷ್ಟರಮಟ್ಟಿಗೆ ಕರ್ನಾಟಕವನ್ನು ಬಾಧಿಸುತ್ತಿದೆ ಎಂದರೆ; ಕಳೆದ ಹತ್ತು ತಿಂಗಳಲ್ಲಿ ರಾಜ್ಯ ಆರ್ಥಿಕ ದಿವಾಳಿತನದತ್ತ ದಾಪುಗಾಲಿಟ್ಟಿದೆ. ಪ್ರಗತಿಯತ್ತ ದಾಪುಗಾಲು ಇಡಬೇಕಿದ್ದ ಕರ್ನಾಟಕ ಕಾಂಗ್ರೆಸ್ಸಿನ ಕೆಟ್ಟ ಆಡಳಿದಿಂದ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ತೇಜಸ್ವಿಸೂರ್ಯ ಅವರು ಕಟುವಾಗಿ ಟೀಕಿಸಿದರು

ಇದನ್ನು ಓದಿ : .IPL 2024 : ಐಪಿಎಲ್ ಇತಿಹಾಸದಲ್ಲೇ ಮೊದಲು : ಒಂದೇ ಪಂದ್ಯದಲ್ಲೇ 500ಕ್ಕೂ ಅಧಿಕ ರನ್

ಒಂದು ವೇಳೆ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿ ಆಗಿದ್ದಿದ್ದರೆ ನೂರಕ್ಕೆ ನೂರರಷ್ಟು ಈ ಸರಕಾರ ರಾಜ್ಯದಲ್ಲಿ ಬರುತ್ತಲೇ ಇರಲಿಲ್ಲ. ಆದರೆ, ಲೋಕಸಭೆ ಚುನಾವಣೆ ಈ ಮೈತ್ರಿ ಆಗಿರುವುದು ರಾಜ್ಯಕ್ಕೆ ಒಳ್ಳೆಯದೇ ಆಗಲಿದೆ ಎಂದು ಅವರು ಪ್ರತಿಪಾದಿಸಿದರು.

ರಸ್ತೆ, ಚರಂಡಿ ರಿಪೇರಿ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ನಡೆಸುವುದಕ್ಕೂ ಶಾಸಕರಿಗೆ ಹಣ ನೀಡುತ್ತಿಲ್ಲ ಈ ಸರಕಾರ. ತಮ್ಮ ಕ್ಷೇತ್ರಗಳಲ್ಲಿ ಅವರು ಮುಖ ತೋರಿಸಲೂ ಆಗುತ್ತಿಲ್ಲ. ಹೀಗಾಗಿ ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸರಕಾರ ವೈಫಲ್ಯಗಳನ್ನು ಜನತೆಗೆ ತಿಳಿಸಬೇಕು ಹಾಗೂ ನಮ್ಮ ಮೈತ್ರಿಯ ಬಗ್ಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಹೇಳಿದರು.

ಅಲ್ಲದೆ; ಏಪ್ರಿಲ್‌ 4ರಂದು ತಾವು ಜಯನಗರ ನಾಲ್ಕನೇ ಬ್ಲಾಕ್‌ ನಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಅಂದು ಎರಡೂ ಪಕ್ಷಗಳ ಕಾರ್ಯಕರ್ತರು ಮುಖಂಡರು ಹಾಜರು ಇರಬೇಕು. ಈ ಸಭೆಯ ಮೂಲಕ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ. ಹಾಗೇಯೆ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆಯೂ ಬಿಜೆಪಿ ಕಾರ್ಯಕರ್ತರು ಇರಬೇಕು. 29ರಂದು ಬೆಂಗಳೂರಿನಲ್ಲಿ ನಡೆಯುವ ಎರಡೂ ಪಕ್ಷಗಳ ಸಮನ್ವಯ ಸಭೆಯಲ್ಲಿ ಪ್ರಮುಖರೆಲ್ಲರೂ ಭಾಗವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಂಸದರು ಕೋರಿದರು.

ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಭಾರಿಸಬೇಕು

ಜೆಡಿಎಸ್‌ ಕಚೇರಿಗೆ ಆಗಮಿಸಿದ ತೇಜಸ್ವಿಸೂರ್ಯ ಅವರಿಗೆ ಪಕ್ಷದ ಶಾಲುವನ್ನು ಹಾಕಿ ಸ್ವಾಗತಿಸಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್‌ ಗೌಡ ಅವರು; ಜೆಡಿಎಸ್‌ -ಬಿಜೆಪಿ ಮೈತ್ರಿಕೂಟದ ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಆದೇಶವನ್ನು ನಾವೆಲ್ಲರೂ ಕಾಯಾ ವಾಚಾ ಮನಸಾ ಪಾಲಿಸಬೇಕು. ಬೆಂಗಳೂರು ದಕ್ಷಿಣ, ಉತ್ತರ, ಕೇಂದ್ರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಭಾರಿಸು ಎರಡೂ ಪಕ್ಷಗಳ ಕಾರ್ಯಕರ್ತರು ಒಮ್ಮತವಾಗಿ ಕೆಲಸ ಮಾಡಬೇಕು ಎಂದರು.

ಒಮ್ಮತದಿಂದ ಮಾದರಿಯಾಗಿ ಕೆಲಸ ಮಾಡಬೇಕು

ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶರವಣ ಮಾತನಾಡಿ; ಜೆಡಿಎಸ್-ಬಿಜೆಪಿ ಮೈತ್ರಿಯ ಶಕ್ತಿ ಏನೆಂಬುದನ್ನು ನಾವು ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ತೋರಿಸಬೇಕು. ನಮ್ಮ ಪಕ್ಷದ ವರಿಷ್ಠ ನಾಯಕರು ಕೊಟ್ಟಿರುವ ಆದೇಶವನ್ನು ನಾವೂ ಚಾಚೂ ತಪ್ಪದೇ ಪಾಲಿಸಿ ಮೈತ್ರಿಕೂಟದ ಅಭ್ಯರ್ಥಿಗಳ ಜಯಕ್ಕೆ ಶ್ರಮಿಸಬೇಕು. ಪರಸ್ಪರ ಸಹಕಾರ, ಒಮ್ಮತದಿಂದ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಇದನ್ನು ಓದಿ : IPL 2024 : 31 ರನ್ ಗಳಿಂದ ಜಯಗಳಿಸಿದ SRH: ಐಪಿಎಲ್ ಇತಿಹಾಸದಲ್ಲೆ ದಾಖಲೆ ಸೃಷ್ಟಿಸಿದ ಸನ್ ರೈಸರ್ಸ್ ಹೈದರಾಬಾದ್

ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಅವರೂ ಸೇರಿ ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರುಗಳು ಈ ಸಂದರ್ಭದಲ್ಲಿ ಮಾತನಾಡಿದರು. ಮುಖಂಡರಾದ ಅಂದಾನಪ್ಪ, ಭಾಗೇಗೌಡ, ಗಂಗಾಧರ ಮೂರ್ತಿ ದೇವರಾಜ್‌ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .

Trending News