ಹೆಲ್ತ್ ಕಾರ್ಡ್’ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಸಜ್ಜು

Health department of Karnataka: ತಮಿಳುನಾಡು, ರಾಜಸ್ತಾನ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಮಾದರಿಯನ್ನ ಅಧ್ಯಯನ ಮಾಡಿ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಸಿಎಂ ಸೂಚನೆ  ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಇದೀಗ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ನಾಲ್ವರು ಅಧಿಕಾರಿಗಳನ್ನು ಅಧ್ಯಯನಕ್ಕೆ ನೇಮಿಸಿದ್ದಾರೆ.

Written by - Zee Kannada News Desk | Edited by - Bhavishya Shetty | Last Updated : Jun 23, 2023, 09:38 AM IST
    • ಆರೋಗ್ಯ ಕರ್ನಾಟಕ ವಿಮಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ಒದಗಿಸುವ ಚಿಂತನೆ
    • ಆರೋಗ್ಯ ಇಲಾಖೆಯು ಆರೋಗ್ಯ ವಿಮೆ ಅಧ್ಯಯನಕ್ಕೆ ನಾಲ್ವರ ತಂಡ ರಚಿಸಿದೆ
    • ರಾಜಸ್ತಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿರುವ ಮಾದರಿಯನ್ನ ಅಧ್ಯಯನ ಮಾಡಲು ಸೂಚನೆ
ಹೆಲ್ತ್ ಕಾರ್ಡ್’ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಸಜ್ಜು title=
health card

Health department of Karnataka: ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ವಿಮಾ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಆರೋಗ್ಯ ವಿಮೆ ಅಧ್ಯಯನಕ್ಕೆ ನಾಲ್ವರ ತಂಡ ರಚಿಸಿದೆ. ಈ ತಂಡದಲ್ಲಿರುವ ಅಧಿಕಾರಿಗಳು ರಾಜಸ್ತಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿರುವ ಮಾದರಿಯನ್ನ ಅಧ್ಯಯನ ಮಾಡಿ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: Pink WhatsApp: ಬಳಕೆದಾರರಲ್ಲಿ ಭೀತಿ ಸೃಷ್ಟಿಸಿದ ಪಿಂಕ್ ವಾಟ್ಸಾಪ್!

ಈ ಹಿಂದೆ ತಮಿಳುನಾಡು, ರಾಜಸ್ತಾನ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಮಾದರಿಯನ್ನ ಅಧ್ಯಯನ ಮಾಡಿ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಸಿಎಂ ಸೂಚನೆ  ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಇದೀಗ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ನಾಲ್ವರು ಅಧಿಕಾರಿಗಳನ್ನು ಅಧ್ಯಯನಕ್ಕೆ ನೇಮಿಸಿದ್ದಾರೆ.

ಮೆಡಿಕಲ್ ಜಂಟಿ ನಿರ್ದೇಶಕ ಡಾ. ಭಾನುಮೂರ್ತಿ, ಎಮ್.ಎಮ್ ನಿರ್ದೇಶಕ ಡಾ ಸುರೇಶ್ ಶಾಸ್ತ್ರಿ, ಎಂ.ಎಸ್ ರೂಪಾ, ಹಣಕಾಸು ವಿಭಾಗದ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಟಿ ನೇಮಕವಾದ ಅಧಿಕಾರಿಗಳು.

ಜುಲೈ 10 ರೊಳಗೆ ಅಧ್ಯಯನದ ವರದಿ ಸಲ್ಲಿಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ನಾಲ್ವರು ಅಧಿಕಾರಿಗಳ ತಂಡ ಇದೇ ತಿಂಗಳ 27, 28 ರಂದು ರಾಜಸ್ತಾನಕ್ಕೆ ಭೇಟಿ ನೀಡಲಿದೆ, ಬಳಿಕ ಜುಲೈ 6 ಮತ್ತು 7 ರಂದು ತಮಿಳುನಾಡಿಗೆ ತಲುಪಲಿದೆ. ಈ ಎರಡು ರಾಜ್ಯಗಳ‌ ಆರೋಗ್ಯ ವಿಮಾ ಮಾದರಿಯ ಕುರಿತು ಅಧ್ಯಯನ ನಡೆಸಿ. ಜುಲೈ 10 ರಂದು ರಾಜ್ಯ ಸರ್ಕಾರಕ್ಕೆ ಅಧ್ಯಯನದ ವರದಿ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಕೈಕೊಟ್ಟು ವಿದೇಶಿ ತಂಡ ಸೇರಿದ್ದ ಈ ಕ್ರಿಕೆಟಿಗನಿಂದ ಅಲ್ಲಿಯೂ ಫ್ಲಾಪ್ ಶೋ!

ಆರೋಗ್ಯ ವಿಮೆ ಯೋಜನೆಯ ಫಲಾನುಭವಿ ಆದ ಬಳಿಕ ಖಾಸಗಿ ಆಸ್ಪತ್ರೆಗಳಿಗೆ 2 ವಾರದೊಳಗೆ ಚಿಕಿತ್ಸಾ ವೆಚ್ಚ ತಲುಪುವಂತೆ ವಿಧಾನ ಜಾರಿಗೆ ತರಲು ಈ ಚಿಂತನೆ ಕೈಗೊಳ್ಳಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News