ಕನ್ನಡ ಉಳಿಯಬೇಕೆಂದರೇ ಕನ್ನಡ ಶಾಲೆ ಉಳಿಯಬೇಕು....!

ಕನ್ನಡ ಉಳಿಸಿ ಅಂತ ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲಿ ಹೇಳುವುದಕ್ಕಿಂತ ಕನ್ನಡ ಉಳಿಸುವ ಕೆಲಸವನ್ನು ಮಾಡಬೇಕು ಎಂದು ಎಲ್ಲರಿಗೂ ಉದಾಹರಣೆಯಾಗಿದ್ದಾಳೆ ಈ ಯುವತಿ. ಕನ್ನಡ ಬೆಳೆಯಬೇಕಾದರೆ ಕನ್ನಡ ಶಾಲೆಗಳು ಉಳಿಯಬೇಕು ಹಾಗೂ ಬೆಳೆಯಬೇಕು, ಅಂದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ.   

Written by - Zee Kannada News Desk | Last Updated : Feb 7, 2023, 04:04 PM IST
  • ಈ ಯುವತಿಯ ಹೆಸರು ಅಕ್ಕಾ ಅನು ಸೋಷಿಯಲ್‌ ವರ್ಕರ್‌ ಅಂತಾನೇ ಜನ ಇವರನ್ನು ಗುರುತಿಸುತ್ತಿದ್ದಾರೆ.
  • ಜೀವನವನ್ನು ಬಂದಂತೆ ಬದುಕುವುದು ದೊಡ್ಡದಲ್ಲ ಆದರೇ ಅಂದುಕೊಂಡಂತೆ ಬದುಕುವುದು ನಿಜವಾದ ಜೀವನ ಅನ್ನೋ ಮಾತಿಗೆ ಈ ಯುವತಿ ಸಾಕ್ಷಿಯಾಗಿದ್ದಾರೆ.
  • ಕನ್ನಡ ಉಳಿಯಬೇಕಾದರೇ ಕನ್ನಡ ಶಾಲೆಗಳು ಅವಶ್ಯವಾಗಿ ಉಳಿಯಲೇಬೇಕು ಎಂದು ಅಕ್ಕಾ ಅನು ಪ್ರತಿ ಹಂತದಲ್ಲಿಯೂ ಕನ್ನಡ ಬೆಳವಣಿಗೆ ಹಾಗೂ ಉಳಿವಿನಲ್ಲಿ ಕನ್ನಡ ಶಾಲೆಗಳ ಪಾತ್ರವನ್ನು ತಿಳಿಸುತ್ತಿದ್ದಾರೆ.
ಕನ್ನಡ ಉಳಿಯಬೇಕೆಂದರೇ ಕನ್ನಡ ಶಾಲೆ ಉಳಿಯಬೇಕು....! title=
Photo Credits : Twitter @akka_anu_

ಅಕ್ಕ ಅನು : ಸಾಮಾನ್ಯವಾಗಿ ಹೆಣ್ಣುಮಕ್ಕಳು ಮನೆಕೆಲಸ ಮುಂತಾದ ಜೀವನೋಪಾಯಕ್ಕಾಗಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಈ ಯುವತಿ ಸರ್ಕಾರಿ ಶಾಲೆಯ ಒಳಿತಿಗಾಗಿ ಶ್ರವಮಿಸುತ್ತಿರುವ ದಿಟ್ಟ ಯುವತಿ ಎಂದರೇ ತಪ್ಪಾಗುವುದಿಲ್ಲ. ಈ ಯುವತಿಯ ಹೆಸರು ಅಕ್ಕಾ ಅನು ಸೋಷಿಯಲ್‌ ವರ್ಕರ್‌ ಅಂತಾನೇ ಜನ ಇವರನ್ನು ಗುರುತಿಸುತ್ತಿದ್ದಾರೆ.  ಇವರು ಕನ್ನಡ ಶಾಲೆಗಳಿಗೆ ಬೇಟಿ ನೀಡಿ ಮಾಸಿಹೋಗಿರುವ ಗೋಡೆಗಳ ಬಣ್ಣಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಸದ್ಯದ ಸ್ಥಿತಿ ಹೇಳಿಕೊಳ್ಳುವ ರೀತಿಯಲ್ಲಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಕ್ಕಾ ಅನು ಇವರು ಯುವತಿಯಾದರೂ ತಾವೇ ಶಾಲೆಗಳ ಗೋಡೆಗಳಿಗೆ ಬಣ್ಣ ನೀಡುತ್ತಾರೆ. ಇವರನ್ನು ನೋಡಿ ಅದೇಷ್ಟೋ ಹೆಣ್ಣು ಮಕ್ಕಳು ಕಲಿಯುವ ರೀತಿಯಲ್ಲಿದೆ ಇವರ ಜೀವನ ಶೈಲಿ. 

ಜೀವನವನ್ನು ಬಂದಂತೆ ಬದುಕುವುದು ದೊಡ್ಡದಲ್ಲ ಆದರೇ ಅಂದುಕೊಂಡಂತೆ ಬದುಕುವುದು ನಿಜವಾದ ಜೀವನ ಅನ್ನೋ ಮಾತಿಗೆ ಈ ಯುವತಿ ಸಾಕ್ಷಿಯಾಗಿದ್ದಾರೆ. ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ಸುಧಾರಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ಇವರ ಈ ಕೆಲಸಕ್ಕೆ ಎಲ್ಲರೂ ಹೆಮ್ಮೆಪಡಲೆಬೇಕು.  ಕನ್ನಡ ಶಾಲೆಗಳ ಗೋಡೆಗಳು ಬಣ್ಣ ಮಾಸಿ ಪಾಳು ಬಿದ್ದಿರುವ ರೀತಿ ಕಾಣಿಸುತ್ತವೆ. ಆದರೆ ಅವುಗಳಿಗೂ ಆಸೆ ರಂಗು ರಂಗಾಗಿ ಮಿಂಚಲು.... ಕನ್ನಡ ಶಾಲೆಯಲ್ಲಿರುವ ಮಕ್ಕಳಿಗೆ ಕಲಿಯಲು ಪ್ರೋತ್ಸಾಹ ನೀಡುವ ಕೆಲಸವನ್ನು ಈ ಯುವತಿ ಮಾಡುದ್ದಾಳೆ. ಶಾಲೆಗಳು ಮಕ್ಕಳಿಗೆ ಓದಲು ಹುರಿದಂಬಿಸುವಂತಿರಬೇಕು ಆದರೆ ಹಳ್ಳಿಯಲ್ಲಿರುವ ಎಷ್ಟೋ ಶಾಲೆಗಳು ಪಾಳುಬಿದ್ದಿರುವ ರೀತಿಯಲ್ಲಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದಾರೆ.

ಇದನ್ನೂ ಓದಿ - JEE ಫಲಿತಾಂಶ ಪ್ರಕಟ ! ರಿಸಲ್ಟ್ ಮತ್ತು ಸ್ಕೋರ್ ಕಾರ್ಡ್ ವೀಕ್ಷಿಸುವ ಪ್ರಕ್ರಿಯೆ ಹೀಗಿದೆ

ಇದು ದೇಶದಲ್ಲಿ ಅನಕ್ಷರತೆ ಹೆಚ್ಚಾಗಲು ಕಾರಣವಾಗಬಹುದು. ಬಡ ಜನರಿಗೆ ಕನ್ನಡ ಶಾಲೆಗಳೇ ಆಸರೆ ಅವುಗಳು ಅಸ್ವಸ್ಥವಾದರೆ ಮಕ್ಕಳು ಶಾಲೆಗೆ ಹೋಗಲು ಇಚ್ಚಿಸುವುದಿಲ್ಲ ಇದು ದೇಶದ ಅಭಿವೃದ್ದಿಗೆ ಮಾರಕವಾಗಬಹುದು. ಆದ್ದರಿಂದ ಇವುಗಳಿಗೆ ಅವಕಾಶ ಕೊಡಬಾರದೆಂದು ಮನಸ್ಥಿತಿ ಹೊಂದಿರುವ ಈ ಯುವತಿ ಕನ್ನಡ ಶಾಲೆಗಳಿಗೆ ಹೊಸ ರೂಪವನ್ನು ನೀಡಿ ಮಕ್ಕಳಿಗೆ ಇಷ್ಟವಾಗುವ ಚಿತ್ರಗಳನ್ನು ಶಾಲೆಗಳ ಗೋಡೆಗಳ ಮೇಲೆ ಬರೆದು ಮಕ್ಕಳು ಶಾಲೆ ಹೋಗುವಂತೆ ಪ್ರೇರೆಪಿಸುವುದರ ಜೊತೆಗೆ ಕನ್ನಡ ಶಾಲೆಗಳ ಉಳಿವಿಗೆ ಕಾರಣವಾಗಿದ್ದಾಳೆ. ಕನ್ನಡ ಉಳಿಯಬೇಕಾದರೇ ಕನ್ನಡ ಶಾಲೆಗಳು ಅವಶ್ಯವಾಗಿ ಉಳಿಯಲೇಬೇಕು ಎಂದು ಅಕ್ಕಾ ಅನು ಪ್ರತಿ ಹಂತದಲ್ಲಿಯೂ ಕನ್ನಡ ಬೆಳವಣಿಗೆ ಹಾಗೂ ಉಳಿವಿನಲ್ಲಿ ಕನ್ನಡ ಶಾಲೆಗಳ ಪಾತ್ರವನ್ನು ತಿಳಿಸುತ್ತಿದ್ದಾರೆ.

ಇದನ್ನೂ ಓದಿ - Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಬೊಂಬಾಟ್ ಗಿಫ್ಟ್: ಮತ್ತೆ ಬರಲಿದೆ ಈ ವ್ಯವಸ್ಥೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 
 

Trending News