ರಂಗಾಯಣದ ಭಾರತೀಯ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರವು ನಡೆಸುವ ಒಂದು ವರ್ಷದ ರಂಗ ತರಬೇತಿ ಡಿಪ್ಲೊಮಾ ಕೋರ್ಸ್ ಅರ್ಜಿ ಪ್ರಕ್ರೀಯೆಯನ್ನು ಅಭ್ಯೆರ್ಥಿಗಳ ಕೋರಿಕೆ ಮೇರಿಗೆ ಕೊನೆಯ ದಿನಾಂಕವನ್ನು 2020 ರ ಜುಲೈ 20 ರವರೆಗೆ ವಿಸ್ತರಿಸಲಾಗಿದೆ.

Updated: Jul 15, 2020 , 07:29 PM IST
 ರಂಗಾಯಣದ ಭಾರತೀಯ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Photo Courtsey : Facebook (Rangayana)

ಬೆಂಗಳೂರು: ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರವು ನಡೆಸುವ ಒಂದು ವರ್ಷದ ರಂಗ ತರಬೇತಿ ಡಿಪ್ಲೊಮಾ ಕೋರ್ಸ್ ಅರ್ಜಿ ಪ್ರಕ್ರೀಯೆಯನ್ನು ಅಭ್ಯೆರ್ಥಿಗಳ ಕೋರಿಕೆ ಮೇರಿಗೆ ಕೊನೆಯ ದಿನಾಂಕವನ್ನು 2020 ರ ಜುಲೈ 20 ರವರೆಗೆ ವಿಸ್ತರಿಸಲಾಗಿದೆ.

ಕೋವಿಡ್-19ರ ಸಂದರ್ಭದಲ್ಲಿ ಉಂಟಾಗಿರುವ ಅಂಚೆ ಅನಾನುಕೂಲತೆ ಹಿನ್ನಲೆಯಲ್ಲಿ ಈಗ ರಂಗಾಯಣ ಈ ಅವಧಿ ವಿಸ್ತರಣೆ ನಿರ್ಧಾರವನ್ನು ತೆಗೆದುಕೊಂಡಿದೆ.

ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ರಂಗಾಯಣದ ವೆಬ್‍ಸೈಟ್ (www.rangayana.org) ನಿಂದ ಎಂದಿನಂತೆ ಪಡೆಯಬಹುದಾಗಿದೆ.ಹೆಚ್ಚಿನ ವಿವರಗಳಿಗೆ 0821-2512639,2512629 ದೂರವಾಣಿ ಸಂಪಕಿಸಬಹುದು ಎಂದು ಮೈಸೂರು ರಂಗಾಯಣ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.