ಮೋದಿ ತಮ್ಮ ಸಾಧನೆ ಆಧಾರದಲ್ಲಿ ಮತ ಕೇಳುವ ಬದಲು ಭದ್ರತೆ ಹೆಸರಿನಲ್ಲಿ ಕೇಳುತ್ತಿದ್ದಾರೆ- ಕುಮಾರಸ್ವಾಮಿ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಐದು ವರ್ಷಗಳಲ್ಲಿ ಮೋದಿ ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ. 

Updated: Apr 17, 2019 , 07:12 PM IST
ಮೋದಿ ತಮ್ಮ ಸಾಧನೆ ಆಧಾರದಲ್ಲಿ ಮತ ಕೇಳುವ ಬದಲು ಭದ್ರತೆ ಹೆಸರಿನಲ್ಲಿ ಕೇಳುತ್ತಿದ್ದಾರೆ- ಕುಮಾರಸ್ವಾಮಿ
file photo

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಐದು ವರ್ಷಗಳಲ್ಲಿ ಮೋದಿ ಮಾಡಿರುವ ಸಾಧನೆಯಾದರೂ ಏನು ಎಂದು ಪ್ರಶ್ನಿಸಿದ್ದಾರೆ. 

ಶಿವಮೊಗ್ಗದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಿದ ಕುಮಾರಸ್ವಾಮಿ "  ಪ್ರಧಾನಿ ಎಲ್ಲ ವಲಯಗಳಲ್ಲೂ ವಿಫಲರಾಗಿದ್ದಾರೆ.ಇಂದು ಮೋದಿ ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿ ಭದ್ರತೆ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ.ಅಭಿವೃದ್ದಿ ಹೆಸರಿನಲ್ಲಿ ಮತ ಕೇಳುವುದು ಬಿಟ್ಟು ರಾಷ್ಟ್ರದ ರಕ್ಷಣೆ ಕುರಿತಾಗಿ ಮತ ಕೇಳುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ತಮ್ಮ ಭಾಷಣ ಕಲೆಯಿಂದ ಮತದಾರರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿದ್ದಾರೆ.ಆದರೆ ಅವರು ಭರವಸೆ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.ಮೋದಿ ಈ ದೇಶಕ್ಕೆ ಏನು ಮಾಡಿದ್ದಾರೆ ಹೇಳಿ,ಅವರೆಂದಾದರೂ ರೈತರಿಗೆ ಪರಿಹಾರ ನೀಡಿದ್ದಾರೆಯೇ? ಮಹಿಳೆಯರಿಗೆ ರಕ್ಷಣೆ ದೊರೆತಿದೆಯೇ ? ಎಂದು ಪ್ರಶ್ನಿಸಿದರು.