ಅನ್ಯಕೋಮಿನ ಯುವಕನೊಂದಿಗೆ ಬುರ್ಖಾ ಧರಿಸಿ ತೆರಳುತ್ತಿದ್ದ ಯುವತಿಯ ಅವಹೇಳನ: ಮೆಡಿಕಲ್ ವಿದ್ಯಾರ್ಥಿಯ ಬಂಧನ

Bangalore Crime News: 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ಜಾಕೀರ್ ಅಹಮದ್ ಎಂಬಾತನನ್ನ ಬಂಧಿಸಲಾಗಿದೆ.

Written by - VISHWANATH HARIHARA | Edited by - Bhavishya Shetty | Last Updated : Aug 28, 2023, 01:25 PM IST
    • ಯುವತಿಯನ್ನ ನಿಂದಿಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪಿ
    • ನೊಂದ ಯುವತಿಯಿಂದ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು
    • ಜಿಲ್ಲೆಯ ಬಂಗಾರಪೇಟೆ ಮೂಲದ ಜಾಕೀರ್ ಅಹಮದ್ ಎಂಬಾತನ ಬಂಧನ
ಅನ್ಯಕೋಮಿನ ಯುವಕನೊಂದಿಗೆ ಬುರ್ಖಾ ಧರಿಸಿ ತೆರಳುತ್ತಿದ್ದ ಯುವತಿಯ ಅವಹೇಳನ: ಮೆಡಿಕಲ್ ವಿದ್ಯಾರ್ಥಿಯ ಬಂಧನ title=
Crime News

ಬೆಂಗಳೂರು : ಅನ್ಯಕೋಮಿನ ಯುವಕ‌ನೊಂದಿಗೆ ಬುರ್ಖಾ ಧರಿಸಿ ತೆರಳುತ್ತಿದ್ದ ಯುವತಿಯನ್ನ ನಿಂದಿಸಿ, ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೋಪಿಯನ್ನ ಪೂರ್ವ ವಿಭಾಗದ ಸೈಬರ್ ಕ್ರೈಂ  ಪೊಲೀಸರು ಬಂಧಿಸಿದ್ದಾರೆ.

21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ಜಾಕೀರ್ ಅಹಮದ್ ಎಂಬಾತನನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ಲೊಕ್ಯಾಂಟೋ ಆ್ಯಪ್‌ನಲ್ಲಿ ಹುಡುಗಿ ಹೆಸರಲ್ಲಿ ಚಾಟ್: ಸೆಕ್ಸ್‌ಗೆ ಕರೆದು ಹಣ ದೋಚುತ್ತಿದ್ದವರ ಬಂಧನ!

ರಷ್ಯಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಆರೋಪಿ, ಎರಡು ತಿಂಗಳ ರಜೆಗಾಗಿ ಬೆಂಗಳೂರಿನ ಗೋವಿಂದಪುರದಲ್ಲಿರುವ ಅಕ್ಕನ ಮನೆಗೆ ಬಂದಿದ್ದ. ಆಗಸ್ಟ್ 24ರಂದು ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಇಂಟರ್ವ್ಯೂಗೆ ಹೋಗುತ್ತಿದ್ದ ಯುವತಿಯನ್ನ ಕಾರಿನಲ್ಲಿ ಬಂದ ಜಾಕೀರ್ ಮತ್ತವನ ಸ್ನೇಹಿತ ಅಡ್ಡಗಟ್ಟಿದ್ದರು. ಬಳಿಕ ಆಕೆಯನ್ನು ಯಾಕೆ ಈತನ ಜೊತೆ ಹೋಗುತ್ತಿರುವೆ ಎಂದು ಪ್ರಶ್ನಿಸಿ ನಿಂದಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು. ಅದೇ ವಿಡಿಯೋವನ್ನು ಫೇಸ್‌ಬುಕ್‌, ಇನ್ಸ್ಟಾಗ್ರಾಂ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ್ದರು.

ಇದನ್ನೂ ಓದಿ: BJP ನಾಯಕರೇ ಇನ್ನೆಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ: ದಿನೇಶ್ ಗುಂಡೂರಾವ್

ಆರೋಪಿಗಳ ಕೃತ್ಯದಿಂದ ನೊಂದ ಯುವತಿ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಳು. ಯುವತಿ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಸದ್ಯ ಆರೋಪಿ ಜಾಕೀರ್ ಅಹಮದ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News