ಗುಪ್ತಚರ ವಿಭಾಗ ಯಾವುದೇ ವರದಿ ನೀಡಿಲ್ಲ: ಮುಖ್ಯಮಂತ್ರಿ ಸಚಿವಾಲಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸುರಕ್ಷಿತವಲ್ಲ ಎಂದು ಗುಪ್ತಚರ ವಿಭಾಗ ವರದಿ ನೀಡಿದೆ ಎಂಬುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ.   

Last Updated : Apr 7, 2018, 03:12 PM IST
ಗುಪ್ತಚರ ವಿಭಾಗ ಯಾವುದೇ ವರದಿ ನೀಡಿಲ್ಲ: ಮುಖ್ಯಮಂತ್ರಿ ಸಚಿವಾಲಯ title=

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸುರಕ್ಷಿತವಲ್ಲ ಎಂದು ಗುಪ್ತಚರ ವಿಭಾಗ ವರದಿ ನೀಡಿದೆ ಎಂಬುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟನೆ ನೀಡಿದೆ. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಜೆಡಿಎಸ್‌'ಗೆ ಒಲಿಯುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವುದು ಒಳ್ಳೆಯದಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಬದಲಿಗೆ ಕೊಪ್ಪಳದ ಗಂಗಾವತಿ, ಮೈಸೂರಿನ ವರುಣಾ, ಬೀದರ್‌ನ ಬಸವಕಲ್ಯಾಣ ಅಥವಾ ಬೆಂಗಳೂರಿನ ಶಾಂತಿನಗರದಿಂದ ಸ್ಪರ್ಧಿಸುವುದು ಒಳ್ಳೆಯದು ಎಂದೂ ಗುಪ್ತಚರ ಇಲಾಖೆ ‘ಸಲಹೆ’ ನೀಡಿದೆ ಎಂಬ ವದಂತಿ ನಿನ್ನೆ ರಾತ್ರಿಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಆದರೆ, ಗುಪ್ತಚರ ವಿಭಾಗದಿಂದ ಇಂತಹ ಯಾವುದೇ ವರದಿ ಬಿಡುಗಡೆ ಮಾಡಿಲ್ಲ ಎಂದು ಸಚಿವಾಲಯ ಪ್ರಕಟಣೆ ಹೊರಡಿಸಿದೆ. 

ಅಲ್ಲದೆ, ಗುಪ್ತಚರ ವಿಭಾಗದಲ್ಲಿ ಈಗ ಎಡಿಜಿಪಿ ಇಲ್ಲ. ಜೊತೆಗೆ, ಗುಪ್ತದಳದ ವರದಿ ಕನ್ನಡದಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಗುಪ್ತಚರ ವಿಭಾಗದ ಡಿಐಜಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

(ಗುಪ್ತಚರ ವಿಭಾಗ ನೀಡಿದೆ ಎನ್ನಲಾದ ವರದಿ)

Trending News