'ಪಂಚಮಸಾಲಿಗೆ 2ಎ ಮೀಸಲಾತಿ : ಆಗಸ್ಟ್ 23 ರಂದೇ ಹೋರಾಟ ಮಾಡ್ತೀವಿ'

6 ತಿಂಗಳು ಅವಕಾಶ ಮಾಡಿಕೊಡಿ, ಆಯೋಗದವರು  ಹಾವೇರಿ ಜಿಲ್ಲೆಯಲ್ಲಿ ಅದ್ಯಯನ ಮಾಡ್ತಿದ್ದಾರೆ ಎಂದು ಸಿಎಂ ಕೇಳಿಕೊಂಡರು. ಆದರೆ 6 ತಿಂಗಳು ಆಗಲ್ಲ, 2 ತಿಂಗಳು ಕಾಲಾವಕಾಶ ಕೊಡ್ತೀವಿ ಎಂದು ಒಪ್ಪಿಕೊಂಡೆವು. ಸಿಎಂ ಮನವಿ ಮೇರೆಗೆ ನಾವು ಸತ್ಯಾಗ್ರಹ 2 ತಿಂಗಳು ಮುಂದೂಡಿದೆವು.

Written by - Zee Kannada News Desk | Last Updated : Aug 19, 2022, 04:19 PM IST
  • ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರ
  • ಕಳೆದ ಜೂನ್ 27 ರಂದು ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನ
  • ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ
'ಪಂಚಮಸಾಲಿಗೆ 2ಎ ಮೀಸಲಾತಿ : ಆಗಸ್ಟ್ 23 ರಂದೇ ಹೋರಾಟ ಮಾಡ್ತೀವಿ' title=

ಹಾವೇರಿ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಜೂನ್ 27 ರಂದು ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಮೂರು ಸಲ ಮಾತುಕತೆ ಕರೆದರೂ ನಾವು ಹೋಗಿರಲಿಲ್ಲ. ಆದರೆ ಸಚಿವ ಸಿ.ಸಿ ಪಾಟೀಲ್ ಮನವಿ ಮೇರೆಗೆ ಯತ್ನಾಳ್ ಸೇರಿದಂತೆ ನಾವೆಲ್ಲಾ ಸಿಎಂ ಜೊತೆ ಮಾತುಕತೆ ನಡೆಸಿದ್ದೆವು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ, 6 ತಿಂಗಳು ಅವಕಾಶ ಮಾಡಿಕೊಡಿ, ಆಯೋಗದವರು 
ಹಾವೇರಿ ಜಿಲ್ಲೆಯಲ್ಲಿ ಅದ್ಯಯನ ಮಾಡ್ತಿದ್ದಾರೆ ಎಂದು ಸಿಎಂ ಕೇಳಿಕೊಂಡರು. ಆದರೆ 6 ತಿಂಗಳು ಆಗಲ್ಲ, 2 ತಿಂಗಳು ಕಾಲಾವಕಾಶ ಕೊಡ್ತೀವಿ ಎಂದು ಒಪ್ಪಿಕೊಂಡೆವು. ಸಿಎಂ ಮನವಿ ಮೇರೆಗೆ ನಾವು ಸತ್ಯಾಗ್ರಹ 2 ತಿಂಗಳು ಮುಂದೂಡಿದೆವು. ನಾಳೆ ಆಗಸ್ಟ್ 22 ಕ್ಕೆ ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗೀತು. 2 ತಿಂಗಳಲ್ಲಿ ಮೀಸಲಾತಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ. ಯತ್ನಾಳ್ ಅವರು ನಾನೇ ಬಂದು ಸಿಎಂ ಮನೆ ಮುಂದೆ ಹೋರಾಟ ಮಾಡ್ತೀನಿ ಅಂತ ಹೇಳಿದ್ರು. ಸಿಎಂ ನಾಲ್ಕನೇ ಬಾರಿ ಮಾತು ಕೊಟ್ಟ ಹಾಗೆ ನಡೆದುಕೊಳ್ಳಬೇಕು. ನಾವು 2 ತಿಂಗಳು ಸುಮ್ಮನೆ ಕುಳಿತಿಲ್ಲ, ಶ್ರಾವಣ ಅಂತ ಮೈ ಮರೆತಿಲ್ಲ. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ನಲ್ಲಿ ಸತ್ಯಾಗ್ರಹ ಮಾಡಿದ್ದೆವು. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ ಜೋಷಿಯವರ ಮೇಲೂ ಒತ್ತಡ ಹಾಕಿದ್ದೇವೆ. 

ಇದನ್ನೂ ಓದಿ : ಭೂಮಿ ನಡುಗಿತು, ಮೇಘ ಅಬ್ಬರಿಸಿತು, ಧರ್ಮ ಸಂಘರ್ಷ ಹೆಚ್ಚಾದೀತು : ಕೋಡಿಮಠದ ಶ್ರೀ

ಈ ತಿಂಗಳು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಹೋರಾಟ ಶುರು ಮಾಡಿಕೊಂಡಿದ್ದೇವೆ. ಯಡಿಯೂರಪ್ಪನವರ ಮೂಲಕ ಸಿಎಂ ಮೇಲೆ ಒತ್ತಡ ಹಾಕಲು ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟ ಮಾಡಲಾಗ್ತಿದೆ. ಸಿಎಂ ಬೊಮ್ಮಾಯಿಯವರ ಮೇಲೆ ಬಹಳ‌ ನಂಬಿಕೆ ಇಟ್ಟಿದ್ದೇವೆ. ಪದೇ ಪದೇ ಮಾತು ಕೊಟ್ಟು ಹೋರಾಟದ ಕಾವು ಕಡಿಮೆ ಮಾಡಲು ಸರ್ಕಾರ ಪ್ರಯತ್ನ ಮಾಡಬಾರದು. ಮೀಸಲಾತಿ ಕೊಡೋಕಾದರೆ ಕೊಟ್ಟು ಬಿಡಿ. ಇಲ್ಲದಿದ್ದರೆ ಕೊಡೋಕೆ ಆಗಲ್ಲ ಅಂತ ಹೇಳಿಬಿಡಿ. ಆಗಸ್ಟ್ 22 ನೇ ತಾರೀಖು ಮದ್ಯರಾತ್ರಿವರೆಗೂ ಕಾಯುತ್ತೇವೆ. ನಿಮ್ಮ ಸಿಹಿ ಸುದ್ದಿಗಾಗಿ ಕಾಯುತ್ತೇವೆ. ವಿನಾಕಾರಣ ವಿಳಂಬ ಮಾಡದೇ ಮೀಸಲಾತಿ ಘೋಷಣೆ ಮಾಡಿ. ವಿಜಯಪುರ , ಧಾರವಾಡ, ಭಾಗಲಕೋಟೆ ಜಿಲ್ಲೆಗಳಲ್ಲಿ ಇನ್ನೂ ಆಯೋಗದ ಸಮೀಕ್ಷೆ ನಡೆದಿಲ್ಲ. ಆಗಸ್ಟ್ 22 ಕ್ಕೆ ಮೀಸಲಾತಿ  ಘೋಷಣೆ ಮಾಡಿದರೆ. ಮಾರನೇ ದಿನ ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ  ಸನ್ಮಾನ ಮಾಡ್ತೀವಿ. ಶಿಗ್ಗಾವಿ ಚೆನ್ನಮ್ಮ ಸರ್ಕಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಟೌಟಿಗೆ ಹಾಲಿನ ಅಭಿಷೇಕ ಮಾಡ್ತೀವಿ. ಮೀಸಲಾತಿ ಘೋಷಣೆ ಮಾಡದೇ ಇದ್ದರೆ ಆಗಸ್ಟ್ 23 ರಂದೇ ಹೋರಾಟ ಮಾಡ್ತೀವಿ. ಸನ್ಮಾನ ಇಲ್ಲದಿದ್ದರೆ ಮುಂದಿನ ಹೋರಾಟ ಅಲ್ಲಿಂದಲೇ ಶುರು ಮಾಡ್ತವೆ. ಸಿಎಂ ತಮ್ಮ ಇಚ್ಚಾಶಕ್ತಿಯ ಮೂಲಕ ಘೋಷಣೆ ಮಾಡಲಿ. ಸಿಸಿ ಪಾಟೀಲ್ ಹಾಗೂ ಯತ್ನಾಳ್ ಅವರ ಮೇಲೆ ನಾವು ಒತ್ತಡ ಹಾಕ್ತಿದ್ದೇವೆ ಎಂದರು.

ಮೊನ್ನೆ ಯತ್ನಾಳ ಅವರನ್ನು ಕರೆ ದು ಸಿಎಂ 2 ಎ ಮೀಸಲಾತಿ ಕುರಿತು ಚರ್ಚೆ ಮಾಡಿದ್ದಾರೆ. ಮೀಸಲಾತಿ ನೀಡುವಂತೆ ಯತ್ನಾಳ ಕೂಡಾ ಮನವಿ ಮಾಡಿದ್ದಾರೆ. ಹೋರಾಟಕ್ಕೆ ಇತಿಶ್ರೀ ಹಾಡುವ ನಿರ್ಧಾರ ಮಾಡುತ್ತೇವೆ. ಕೂತು ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ. ಸತ್ಯಾಗ್ರಹವೋ, ಶಿಗ್ಗಾವಿ ಬಂದ್ ಮಾಡಬೇಕೋ ಅಂದೇ ನಿರ್ಧಾರ ಮಾಡ್ತೀವಿ. ಇನ್ನು ಮೇಲೆ ಹೋರಾಟ ವಾಪಾಸ್ ತೆಗೆದುಕೊಳ್ಳುವ ಮಾತೇ ಇಲ್ಲ. ನಮ್ಮ ಜನರ ನಂಬಿಕೆಗನುಗುಣವಾಗಿ ಬದ್ಧತೆ ಪ್ರದರ್ಶನ ಮಾಡಲೇ ಬೇಕಾಗುತ್ತದೆ. ಹಾಲುಮತ, ವಾಲ್ಮೀಕಿ , ಪಂಚಮಸಾಲಿ ಮೂರೂ ಸಮುದಾಯಕ್ಕೆ ನ್ಯಾಯ ಕೊಟ್ಟರೆ ಮಾತ್ರ ಬಿಜೆಪಿಯವರು ಮಿಷನ್ 150 ಗುರಿ ಮುಟ್ತಾರೆ. ಮೂರು ಸಮುದಾಯಗಳಿಗೆ ಸರ್ಕಾರ ನ್ಯಾಯ ವದಗಿಸಬೇಕು. ಹಿಂದಿನ ಕೆಲವು ಮುಖ್ಯಮಂತ್ರಿಗಳು ಅವರವರ ಸಮುದಾಯಗಳಿಗೆ ಆಯೋಗದ ವರದಿ ಇಲ್ಲದೇ ಮೀಸಲಾತಿ ಕೊಟ್ಟಿದ್ದಿದೆ. ಹಾಲುಮತ ,ಪಂಚಮಸಾಲಿ,ವಾಲ್ಮೀಕಿ ಮೂರು ಪ್ರಬಲ ಸಮುದಾಯ ಇದೆ. ಮೂರೂ ಸಮುದಾಯಕ್ಕೆ ನ್ಯಾಯ ಕೊಡಲಿ ಎಂದು ನಾವು ದನಿ‌ ಗೂಡಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Pralhad Joshi : 'ಮೊಟ್ಟೆ ಎಸೆದಿದ್ದು ಸರಿಯಲ್ಲ : ಈಗ ಇರೋದು ಡುಪ್ಲಿಕೆಟ್, ನಕಲಿ ಕಾಂಗ್ರೆಸ್'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News