ಶಿವಮೊಗ್ಗ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ತಾಲ್ಲೂಕಿನ 04 ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಗ್ರಾಮೀಣ ಹಾಗೂ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೇಲೆ ದಾಳಿ ಮಾಡಿರುವುದು ಕರ್ನಾಟಕದ ಮೇಲಿನ ದಾಳಿಗೆ ಸಮ-ಎಚ್ ಡಿ.ಕುಮಾರಸ್ವಾಮಿ
ತಾಲ್ಲೂಕು ಪಂಚಾಯ್ತಿಯಲ್ಲಿ ಒಬ್ಬರು ಯಾವುದೇ ಪದವಿ ಹೊಂದಿರುವ ವಿಕಲಚೇತನರನ್ನು ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನಾಗಿ(ಎಂ.ಆರ್.ಡಬ್ಲ್ಯು) ಮತ್ತು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ನೇ ತರಗತಿ ಉತ್ತೀರ್ಣರಾದ ವಿಕಲಚೇತನ ಕಾರ್ಯಕರ್ತರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರೆಂದು(ವಿ.ಆರ್.ಡಬ್ಲ್ಯು) ಗೌರವ ಧನ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಿ ಅವರಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅರ್ಹ ವಿಕಲಚೇತನರಿಗೆ ಪುನರ್ವಸತಿ ಕಾರ್ಯಕ್ರಮಗಲನ್ನು ಕಲ್ಪಿಸುವುದು ಗ್ರಾಮೀರ್ಣ ಪುನರ್ವಸತಿ ಕಾರ್ಯಕ್ರಮದ ಉದ್ದೇಶವಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಪುಂಡಾಟಿಕೆ ಖಂಡನೀಯ: ಪುಂಡರನ್ನು ಸದೆಬಡಿಯುತ್ತೇವೆ ಎಂದ ಸಿಎಂ ಬೊಮ್ಮಾಯಿ
ಅದರಂತೆ ಭದ್ರಾವತಿ ತಾಲ್ಲೂಕು ಪಂಚಾಯಿತಿಯಲ್ಲಿ ಖಾಲಿ ಇರುವ ಎಂ.ಆರ್.ಡಬ್ಲ್ಯು ಹಾಗೂ ಭದ್ರಾವತಿ ತಾಲ್ಲೂಕಿನ ಅರಳಿಕೊಪ್ಪ, ಎರೇಹಳ್ಳಿ, ಹನುಮಂತಾಪುರ, ಸನ್ಯಾಸಿಕೊಡಮಗ್ಗಿ ಗ್ರಾ.ಪಂ ಗಳಲ್ಲಿ ಖಾಲಿ ಇರುವ ವಿ.ಆರ್.ಡಬ್ಲು ಹುದ್ದೆಗಳನ್ನು ತುಂಬಲು ಅರ್ಜಿ ಆಹ್ವಾನಿಸಿದ್ದು 18 ರಿಂದ 45 ವಯೋಮಿತಿಯೊಳಗಿನ ಗ್ರಾಮ ಪಂಚಾಯ್ತಿ/ಹತ್ತಿರದ ಗ್ರಾ.ಪಂ ಗಳಲ್ಲಿ ವಾಸವಿರುವ ಅರ್ಹ ವಿಕಲಚೇತನ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭದ್ರಾವತಿ ತಾ.ಪಂ ಕಚೇರಿಯಲ್ಲಿರುವ ದಿನೇಶ್, ಮೊ.ಸಂ: 7899137243 ಇವರಿಂದ ಪಡೆದು ಅರ್ಜಿಯೊಂದಿಗೆ ಎಂ.ಆರ್.ಡಬ್ಲ್ಯು ಹುದ್ದೆಗೆ ಪದವಿ ಅಂಕಪಟ್ಟಿ ಮತ್ತು ವಿ.ಆರ್.ಡಬ್ಲ್ಯು ಹುದ್ದೆಗೆ 10 ನೇ ತರಗತಿ ಉತ್ತೀರ್ಣರಾಗಿರುವ ಬಗ್ಗೆ ಅಂಕಪಟ್ಟಿ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಯುಡಿಐಡಿ ಕಾರ್ಡ್ ದಾಖಲೆಗಳೊಂದಿಗೆ 2022 ರ ಜನವರಿ 03 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಸಿಎಂ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆ ಸೌಲಭ್ಯ : ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.