ಬೆಂಗಳೂರು : ಎಂಇಎಸ್ (MES) ಹಾಗೂ ಶಿವಸೇನೆ (Shivasena) ಕಾರ್ಯಕರ್ತರ ವರ್ತನೆ ಖಂಡಿಸಿ ಡಿಸೆಂಬರ್ 31 ಕ್ಕೆ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದೆ. ಆದರೆ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಬಂದ್ ಗೆ (Bundh) ಜನ ಬೆಂಬಲ ಪಡೆಯಲು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಗುಲಾಬಿ ಹೂ ನೀಡಿ, ಕೈಮುಗಿದು ಬಂದ್ ಗೆ ಬೆಂಬಲ ನೀಡುವಂತೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಬೆಂಗಳೂರಿನ (Bengaluru) ಟೌನ್ ಹಾಲ್ ಬಳಿ ಜನರಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬಂದ್ ಬೆಂಬಲಿಸಲು ವಿನಂತಿಸಿಕೊಂಡ ದೃಶ್ಯ ಕಂಡು ಬಂತು. ಈ ವೇಳೆ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೂಡಾ ಅಭಿಯಾನಕ್ಕೆ ಸಾಥ್ ನೀಡಿದರು.
ಇದನ್ನೂ ಓದಿ : Gold Smuggling: ಜ್ಯೂಸರ್ ಒಳಗೆ ಚಿನ್ನದ ರಾಡ್..! ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಖದೀಮ
ಒಂದು ಕಡೆ ಕರ್ನಾಟಕ ಬಂದ್ ಗೆ (Karnataka Bundh) ಕನ್ನಡಪರ ಸಂಘಟನೆಗಳು ಕರೆ ನೀಡಿದ್ದರೆ, ಮತ್ತೊಂದು ಕಡೆ ಹಲವು ಸಂಘಟನೆಗಳು ಬಂದ್ ಬೇಡ ಎನ್ನುತ್ತಿವೆ. ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್ ಬಂದ್ ನಿರ್ಧಾರ ಸೂಕ್ತವಲ್ಲ ಎಂದಿದ್ದಾರೆ.
ಎಂಇಎಸ್ (MES) ಮತ್ತು ಶಿವಸೇನೆ (Shivasena) ವರ್ತನೆ ಖಂಡನಿಯವಾಗಿದೆ. ಎಂಇಎಸ್ ಮತ್ತು ಶಿವಸೇನೆ ವರ್ತನೆ ಖಂಡಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿವೆ. ಆದರೆ ಈ ಬಂದ್ ರೈತರಿಗೆ ಅನ್ವಯವಾಗುವುದಿಲ್ಲ ಎಂದಿದ್ದಾರೆ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಲೋಕೇಶ್.
2 ವರ್ಷಗಳಿಂದ ಕೊರೊನಾ (Coronavirus) ಹಾಗೂ ಅತಿವೃಷ್ಟಿಯಿಂದ ಬೆಳೆ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬಂದ್ ನಿರ್ಧಾರ ಸೂಕ್ತವಲ್ಲ. ಹೋರಾಟಕ್ಕೆ ನಮ್ಮ ಬೆಂಬಲ ಇದೆ, ಆದರೆ ಬಂದ್ ಗೆ ಬೆಂಬಲ ಇಲ್ಲವೆಂದು ಲೋಕೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ: ಹಗ್ಗದಿಂದ ಕಟ್ಟಿಹಾಕಿ, ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ, ಐವರ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.