ಇಂದು ಮೂವರು ಬಂಡಾಯ ಕಾಂಗ್ರೆಸ್ ಶಾಸಕರ ಜೊತೆ ಸ್ಪೀಕರ್ ಸಭೆ

ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಐದು ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ ಮೂವರನ್ನು ಶುಕ್ರವಾರ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶಾಸಕರ ಜೊತೆಗೆ  ಸಭೆ ಸಾಯಂಕಾಲ 4 ಗಂಟೆಗೆ ನಡೆಯಲಿದೆ ಎಂದು ಹೇಳಿದ್ದಾರೆ.  

Last Updated : Jul 12, 2019, 03:07 PM IST
ಇಂದು ಮೂವರು ಬಂಡಾಯ ಕಾಂಗ್ರೆಸ್ ಶಾಸಕರ ಜೊತೆ ಸ್ಪೀಕರ್ ಸಭೆ  title=
photo:ANI

ಬೆಂಗಳೂರು: ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು ಐದು ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ ಮೂವರನ್ನು ಶುಕ್ರವಾರ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಶಾಸಕರ ಜೊತೆಗೆ  ಸಭೆ ಸಾಯಂಕಾಲ 4 ಗಂಟೆಗೆ ನಡೆಯಲಿದೆ ಎಂದು ಹೇಳಿದ್ದಾರೆ.  

ಸ್ಪೀಕರ್ ಅವರನ್ನು ಭೇಟಿ ಮಾಡಿ ಮತ್ತು ರಾಜೀನಾಮೆಗಳನ್ನು ವೈಯಕ್ತಿಕವಾಗಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ ನಂತರ ಹತ್ತು ಭಿನ್ನಮತೀಯ ಶಾಸಕರು ಗುರುವಾರ ಸಂಜೆ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು.

ರಾಜೀನಾಮೆ ಪತ್ರ ಸಲ್ಲಿಸಿದ ಶಾಸಕರೊಂದಿಗಿನ ಸಭೆಯ ನಂತರ, ರಾಜೀನಾಮೆಗಳು ನಿರ್ಧಾರ ತೆಗೆದುಕೊಳ್ಳುವ ಮೊದಲು ಅವು ಸ್ವಯಂ ಪ್ರೇರಿತವಾಗಿದೆಯೇ ಎನ್ನುವ ವಿಚಾರವನ್ನು ಪರಿಗಣಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ಸಹಾಯ ಮಾಡಲು ಈ ರಾಜೀನಾಮೆ ವಿಚಾರವಾಗಿ ವಿಳಂಬ ಮಾಡುತ್ತಿರುವ ಆರೋಪ ಬಂದ ಹಿನ್ನಲೆಯಲ್ಲಿ ರಮೇಶ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

"ನಾನು ಈ ರಾಜೀನಾಮೆಗಳನ್ನು ರಾತ್ರಿಯಿಡೀ ಪರಿಶೀಲಿಸಬೇಕು ಮತ್ತು ಅವು ಸಹಜವಾಗಿವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದೆ. ನಾನು ಎಲ್ಲವನ್ನೂ ವಿಡಿಯೋ-ಗ್ರಾಫ್ ಮಾಡಿದ್ದೇನೆ ಮತ್ತು ಅದನ್ನು ಸುಪ್ರೀಂ ಕೋರ್ಟ್‌ಗೆ ಕಳುಹಿಸುತ್ತೇನೆ" ಎಂದು ರಮೇಶ ಕುಮಾರ್ ಹೇಳಿದರು.  

Trending News