ಬೆಂಗಳೂರು : ಹಿರೇನಂದಿ ಗ್ರಾಮದಲ್ಲಿ ಸಾಹುಕಾರ್ ರಮೇಶ್ ಜಾರಕಿಹೊಳಿ 15 ಜಿಲ್ಲಾ ಬ್ಯಾಂಕ್ ಗಳಿಂದ 366 ಕೋಟಿ ರೂ. ಸಾಲ ಮಾಡಿದ್ದಾರೆ. ಯೂನಿಯನ್ ಬ್ಯಾಂಕ್, 200 ಕೋಟಿ ರೂ. ಕಮಿಷನ್ ಮೋಸ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಂದು ಹೇಳಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಅಭಿನಂದನ್ ಪಾಟೀಲ್..ಅರಿಯನ್ ಕೋಆಪರೇಟಿವ್ ಬ್ಯಾಂಕ್ ನಿಂದ 20 ಕೋಟಿ ರೂ. ಪಡೆದಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಫ್ಯಾಕ್ಟರಿ ಪ್ರೈ ಲಿಮಿಟೆಡ್ ಎನ್ ಪಿಎ ಆಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : 'ಎಲ್ಲ ಹಗರಣಗಳಿಗೂ ಯತ್ನಾಳ್ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ'
2021 ರಲ್ಲಿ ನೊಟೀಸ್ ಜಿಲ್ಲಾಧಿಕಾರಿಗಳು ಪತ್ರ ಬರೆದರು ಜಿಲ್ಲಾಧಿಕಾರಿ ಪತ್ರ ಸೂಚನೆ ಮಾಡ್ತಾರೆ. ಸೌಭಾಗ್ಯ ಲಕ್ಷ್ನೀ ಶುಗರ್ಸ್ ಫ್ಯಾಕ್ಟರಿ ಆಸ್ತಿಯನ್ನು ಮಾರಿ ಹಣ ವಸೂಲಾತಿ ಮಾಡುವಂತೆ ಸೂಚನೆ ಕೊಡ್ತಾರೆ. ಈ ಮಧ್ಯೆ ಹರಿಯಂತ್ ಕೋ ಆಪರೇಟಿವ್ ಬ್ಯಾಂಕ್ ಎನ್ ಸಿಎಲ್ ಟಿ ಕೇಂದ್ರದ ಟ್ರಿಬ್ಯುನಲ್ 20+30 ಕೋಟಿ ಹಣ ಬಾಕಿ ಕೊಡಬೇಕು ಎಂದು ಮನವಿ ಮಾಡ್ತಾರೆ. ಇನಾಲ್ವೆನ್ಸಿ ರಿಸರ್ವೇಷನ್ ಮೂಲಕ ಆಬಿಟ್ರೇಟ್ ನೇಮಕ ಮಾಡಲು ಸೂಚನೆ ನೀಡ್ತಾರೆ ಎಂದರು.
ಹಗಲು ದರೋಡೆ ಮಾಡ್ತಿದ್ದೀರಿ ಸಿಟಿ ರವಿ ಸತ್ಯ ಹರಿಶ್ಚಂದ್ರರಾ ನೀವು? ಐಟಿ ಇಲಾಖೆ ಏನು ಮಾಡ್ತಿದೆ? ಕಾನೂನು ಬಿಜೆಪಿಗೆ ಬೇರೆಯದಿದೆಯಾ? ಪ್ರಕಟಣೆಯನ್ನು ತಿಳಿಸಬೇಕು. ಕಂಪನಿ ರಿಜಿಸ್ಟ್ರೆಷನ್ ಅಡ್ರೆಸ್ ಬಿಟ್ಟು ಬೆಂಗಳೂರು ವಿಳಾಸಕ್ಕೆ ನೋಟೀಸ್ ಜಾರಿ ಮಾಡಿದ್ದಾರೆ.
1000 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. 900 ಕೋಟಿ ರೂ. ಬೆಲೆಬಾಳುವ ಕಂಪನಿಗೆ 60 ಕೋಟಿ ರೂ. ಮೌಲ್ಯ ಮಾಪನ ಮಾಡಿದ್ದಾರೆ.ನಿನ್ನೆ 5 ಗಂಟೆಗೆ ಕಾಲಾವಕಾಶ ಮುಗಿದಿದೆ.
ಅರಿಯಂತ್ 650 ಕೋಟಿ ರೂ. ರಮೇಶ್ ಜಾರಕಿಹೊಳಿ ಬೇನಾಮಿ ಕಂಪನಿ ಆಗಿದೆ. ಸರ್ಕಾರ ಒಂದೇ ಒಂದೇ ಆಕ್ಷೇಪ, ತಕಾರರು ತೆಗೆಯುವ ಪ್ರಯತ್ನ ಮಾಡಲಿಲ್ಲ ಸರ್ಕಾರದ ವಿರುದ್ಧ ಆರೋಪ ಮಾಡಿದರು.
ಇದನ್ನೂ ಓದಿ : Pramodh Madhwaraj : ಪ್ರಮೋದ್ ಮಧ್ವರಾಜ್ ರಾಜೀನಾಮೆ : ಶೀಘ್ರ ಬಿಜೆಪಿಗೆ
10 ತಿಂಗಳಲ್ಲಿ ಅಮಿತ್ ಷಾ ಅವರನ್ನು 10 ಭಾರಿ ಭೇಟಿ ಮಾಡಿದ್ದಾರೆ. 2022 ಮಾರ್ಚ ಆಡಿಟೆಟ್ 60 ಕೋಟಿ ರೂ. ಲಾಭ ಸಂಪಾದನೆ ಮಾಡಿರುವ ಕಂಪನಿ ದಿವಾಳಿ ಎಂದು ಘೋಷಿಸಿದ್ದಾರೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.