KCET 2022 Time Table : ಜೂನ್ 16, 17, 18 ರಂದು ಸಿಇಟಿ ಪರೀಕ್ಷೆ : ಸಚಿವ ಅಶ್ವತ್ಥನಾರಾಯಣ 

ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಪರೀಕ್ಷೆಗೆ ಗೊತ್ತುಪಡಿಸಿಕೊಂಡಿರುವ ಸಂಭವನೀಯ ದಿನಾಂಕಗಳ ಬಗ್ಗೆ ತಿಳಿದುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

Written by - Prashobh Devanahalli | Last Updated : Mar 28, 2022, 09:59 PM IST
  • ವೃತ್ತಿಶಿಕ್ಷಣಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ
  • ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ
  • ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ
KCET 2022 Time Table : ಜೂನ್ 16, 17, 18 ರಂದು ಸಿಇಟಿ ಪರೀಕ್ಷೆ : ಸಚಿವ ಅಶ್ವತ್ಥನಾರಾಯಣ  title=

ಬೆಂಗಳೂರು : ವೃತ್ತಿಶಿಕ್ಷಣಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸಾಮಾನ್ಯ ಪ್ರವೇಶ ಪರೀಕ್ಷೆ(KCET 2022)ಯನ್ನು ಈ ಬಾರಿ ಜೂನ್ 16, 17 ಮತ್ತು 18ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಅಶ್ವತ್ಥನಾರಾಯಣ(CN Ashwath Narayan), ಬೇರೆ ಬೇರೆ ರಾಜ್ಯಗಳಲ್ಲಿ ಇಂತಹ ಪರೀಕ್ಷೆಗೆ ಗೊತ್ತುಪಡಿಸಿಕೊಂಡಿರುವ ಸಂಭವನೀಯ ದಿನಾಂಕಗಳ ಬಗ್ಗೆ ತಿಳಿದುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಇದನ್ನೂ ಓದಿ : HD Kumaraswamy : ತಾಯಿಗೆ IT ನೊಟೀಸ್ ನೀಡಿರುವ ಬಗ್ಗೆ ಆತಂಕ ಇಲ್ಲ : ಎಚ್‌ಡಿ ಕುಮಾರಸ್ವಾಮಿ

ಇದರಂತೆ ಜೂನ್ 16ರಂದು ಬೆಳಿಗ್ಗೆ ಜೀವಶಾಸ್ತ್ರ, ಮಧ್ಯಾಹ್ನ ಗಣಿತ, 17ರಂದು ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ(Chemistry exam) ಹಾಗೂ 18ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರಂತೆ, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 5ರಿಂದ 20ರವರೆಗೆ ಸಿಇಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿ, ಆನ್ಲೈನ್ ಮೂಲಕ ಅರ್ಜಿ(Online Application) ಸಲ್ಲಿಸಬಹುದಾಗಿದ್ದು, ಆನ್ಲೈನ್ ಮೂಲಕವೇ ನಿಗದಿತ ಶುಲ್ಕ ಸಲ್ಲಿಸಲು ಏ.22ರವರೆಗೆ ಅವಕಾಶವಿದೆ.

ಶುಲ್ಕ ಪಾವತಿಸಿದ ನಂತರ, ತಮ್ಮ ಅರ್ಜಿಯಲ್ಲೇನಾದರೂ ಮಾಹಿತಿಯನ್ನು ಪರಿಷ್ಕರಿಸುವುದಿದ್ದರೆ ಅಂಥವರಿಗೇ ಮೇ 2 ರಿಂದ 6 ವರೆಗೆ ಕಾಲಾವಕಾಶ ಇರಲಿದೆ. ಇದಾದ ಬಳಿಕ ವಿದ್ಯಾರ್ಥಿಗಳು(Students) ಮೇ 30ರಿಂದ ಪ್ರವೇಶಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವರು ವಿವರಿಸಿದ್ದಾರೆ.

ಇದನ್ನೂ ಓದಿ : ‘ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಿಸಿದರೆ ದೇಶಕ್ಕೆ ಅನ್ಯಾಯ ಮಾಡಿದಂತೆ’

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News