ಬೆಂಗಳೂರು: ಹತಾಶೆ ಎಂಬುದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರನ್ನು ಕಿತ್ತು ತಿನ್ನುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರರ ವಿರುದ್ಧದ ಕಾಸಿಗಾಗಿ ಹುದ್ದೆಯ ವಿಡಿಯೋ ಲೀಕ್ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಕುಮಾರಸ್ವಾಮಿಗೆ ಹೀನಾಯ ಸೋಲಿನ ಹತಾಶೆ, ಅಧಿಕಾರ ಸಿಗದಿರುವ ಹತಾಶೆ, ಪಕ್ಷ ಖಾಲಿಯಾಗುತ್ತಿರುವ ಹತಾಶೆ ಮತ್ತು ಕಾರ್ಯಕರ್ತರ ಅಸಹಕಾರದ ಹತಾಶೆ. ಈ ಎಲ್ಲಾ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ತನ್ನೂ ಬಿಡದೆ ಕಳ್ಳತನ ಮಾಡಿದವರೊಬ್ಬರು ಸಮಾಜಕ್ಕೆ ಬುದ್ದಿ ಹೇಳುತ್ತೇನೆ ಎಂದು ಹೊರಡುವುದು ಪರಮಹಾಸ್ಯ’ವೆಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಹತಾಶೆ ಎಂಬುದು ಕುಮಾರಸ್ವಾಮಿಯವರನ್ನು ಕಿತ್ತು ತಿನ್ನುತ್ತಿದೆ,
ಹೀನಾಯ ಸೋಲಿನ ಹತಾಶೆ,
ಅಧಿಕಾರ ಸಿಗದಿರುವ ಹತಾಶೆ,
ಪಕ್ಷ ಖಾಲಿಯಾಗುತ್ತಿರುವ ಹತಾಶೆ,
ಕಾರ್ಯಕರ್ತರ ಅಸಹಕಾರದ ಹತಾಶೆ.ಈ ಎಲ್ಲಾ ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ.
ವಿದ್ಯುತ್ತನ್ನೂ ಬಿಡದೆ ಕಳ್ಳತನ ಮಾಡಿದವರೊಬ್ಬರು ಸಮಾಜಕ್ಕೆ ಬುದ್ದಿ…
— Karnataka Congress (@INCKarnataka) November 16, 2023
ಇದನ್ನೂ ಓದಿ: ಬೆಂಗಳೂರಿನ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಆರಂಭ
‘ಡಾ.ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು, ಕೆಡಿಪಿ ಸಮಿತಿಯ ಸದಸ್ಯರು. ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದು ಸಹಜ. ಕ್ಷೇತ್ರದ ಜನರ ಅಹವಾಲುಗಳನ್ನು ಕೇಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದು ಪೆನ್ ಡ್ರೈವ್ ಸ್ವಾಮಿಗಳಿಗೆ ಹಾಗೂ ಬಿಜೆಪಿಯ ಮತಿಹೀನರಿಗೆ ಅಪರಾಧವಾಗಿ ಕಂಡಿದ್ದು ಹೇಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
,@Dr_Yathindra_S ಅವರು ಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು, ಕೆಡಿಪಿ ಸಮಿತಿಯ ಸದಸ್ಯರು.
ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದು ಸಹಜ.
ಕ್ಷೇತ್ರದ ಜನರ ಅಹವಾಲುಗಳನ್ನು ಕೇಳಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದು ಪೆನ್ ಡ್ರೈವ್ ಸ್ವಾಮಿಗಳಿಗೆ ಹಾಗೂ ಬಿಜೆಪಿಯ ಮತಿಹೀನರಿಗೆ…
— Karnataka Congress (@INCKarnataka) November 16, 2023
‘ಎಚ್.ಡಿ.ಕುಮಾರಸ್ವಾಮಿಯವರೇ, ತಾವು ಸಾಂದರ್ಭಿಕ ಶಿಶುವಿನಂತೆ ಸಿಎಂ ಆಗಿದ್ದಾಗ ಸದಾ ವರ್ಗಾವಣೆ ದಂಧೆಯಲ್ಲೇ ಮುಳುಗಿದ್ದಿರಿ, ಹಾಗಾಗಿ ಸದಾ ವರ್ಗಾವಣೆಯ ಗುಂಗಿನಲ್ಲೇ ಇರುತ್ತೀರಿ. ಡಾ.ಯತೀಂದ್ರ ಅವರು ವರ್ಗಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ಹುಯಿಲೆಬ್ಬಿಸುತ್ತಿರುವುದು ಪೆನ್ ಡ್ರೈವ್ ಕತೆಯಂತೆಯೇ ನಕಲಿಯಲ್ಲವೇ? ಸಿನೆಮಾ ನಿರ್ಮಾಣ ಮಾಡಿದವರು ಸಿನೆಮಾ ಸ್ಕ್ರಿಪ್ಟ್ ಬರೆಯುವುದರಲ್ಲೂ ನಿಸ್ಸೀಮರಾಗಿದ್ದಾರೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
,@hd_kumaraswamy ಅವರೇ, ತಾವು ಸಾಂದರ್ಭಿಕ ಶಿಶುವಿನಂತೆ ಸಿಎಂ ಆಗಿದ್ದಾಗ ಸದಾ ವರ್ಗಾವಣೆ ದಂಧೆಯಲ್ಲೇ ಮುಳುಗಿದ್ದಿರಿ, ಹಾಗಾಗಿ ಸದಾ ವರ್ಗಾವಣೆಯ ಗುಂಗಿನಲ್ಲೇ ಇರುತ್ತೀರಿ.@Dr_Yathindra_S ಅವರು ವರ್ಗಾವಣೆಯ ಬಗ್ಗೆ ಮಾತನಾಡಿದ್ದಾರೆ ಎಂದು ಹುಯಿಲೆಬ್ಬಿಸುತ್ತಿರುವುದು ಪೆನ್ ಡ್ರೈವ್ ಕತೆಯಂತೆಯೇ ನಕಲಿಯಲ್ಲವೇ?
ಸಿನೆಮಾ ನಿರ್ಮಾಣ…
— Karnataka Congress (@INCKarnataka) November 16, 2023
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಕಾಸಿಗಾಗಿ ಹುದ್ದೆ ವಿಡಿಯೋ ಲೀಕ್!
ಪೆನ್ ಡ್ರೈವ್ ನಾಟಕ ಠುಸ್ ಆಯ್ತು,
ಸೋಫಾ ಸೆಟ್ ಸುಳ್ಳು ಬಯಲಾಯ್ತು,
ಈಗ ವರ್ಗಾವಣೆ ವಿಡಿಯೋ ಎನ್ನುವ ಮತ್ತೊಂದು ಸುಳ್ಳಿನ ನಾಟಕ ಶುರು ಮಾಡಿದ್ದಾರೆ @hd_kumaraswamy.ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು.
ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ…
— Karnataka Congress (@INCKarnataka) November 16, 2023
‘ಪೆನ್ ಡ್ರೈವ್ ನಾಟಕ ಠುಸ್ ಆಯ್ತು, ಸೋಫಾ ಸೆಟ್ ಸುಳ್ಳು ಬಯಲಾಯ್ತು, ಈಗ ವರ್ಗಾವಣೆ ವಿಡಿಯೋ ಎನ್ನುವ ಮತ್ತೊಂದು ಸುಳ್ಳಿನ ನಾಟಕ ಶುರು ಮಾಡಿದ್ದಾರೆ ಎಚ್.ಡಿ.ಕುಮಾರಸ್ವಾಮಿ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು. ರಾಜ್ಯದ ಜನತೆ ಈಗಾಗಲೇ ಪೆನ್ ಡ್ರೈವ್ ಸ್ವಾಮಿಯ ಮಾನವನ್ನು ಮೂರು ಕಾಸಿಗೆ ಕಳೆದಿದ್ದಾರೆ, ಆದರೂ ನೌಟಂಕಿ ನಾಟಕ ಮುಂದುವರೆಸಿರುವ ಅವರನ್ನು ಕರ್ನಾಟಕದ ರಾಜಕಾರಣದ “ತಿಪ್ಪೆಗುಂಡಿ“ ಎಂದು ಪರಿಗಣಿಸುವ ಕಾಲ ದೂರವಿಲ್ಲ’ವೆಂದು ಕಾಂಗ್ರೆಸ್ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.