ಬೆಂಗಳೂರು : ಸಚಿವ ಸಂಪುಟ ಪುನಾರಚನೆ, ವಿಸ್ತರಣೆ, ನಾಯಕತ್ವ ಬದಲಾವಣೆ ಗೊಂದಲದ ನಡುವೆ ಸಾರ್ವತ್ರಿಕ (ಸಾಮಾನ್ಯ)ವರ್ಗಾವಣೆಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
2022-23 ನೇ ಸಾಲಿಗೆ ಎ,ಬಿ,ಸಿ,ಡಿ ಗ್ರೂಫ್ ಅಧಿಕಾರಿಗಳು/ನೌಕರರು, ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲು ಇಲಾಖೆ ಸಚಿವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಿದೆ.ಇಲಾಖೆಯ ಶೇ.6 ರಷ್ಟು ಮೀರದಂತೆ ವರ್ಗಾವಣೆ ಮಾಡಲು ಸೂಚನೆ ನೀಡಿದೆ.
ಇದನ್ನೂ ಓದಿ : 'ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ'
01.05.2022 ರಿಂದ 15.06.2022 ವರೆಗೆ ಒಂದೂವರೆ ತಿಂಗಳು ವರ್ಗಾವಣೆಗೆ ಕಾಲಾವಕಾಶ ನಿಗದಿ ಮಾಡಿದೆ. ಸಾಮಾನ್ಯ ವರ್ಗಾವಣೆಗೆ ಸಚಿವ ಸಂಪುಟದ ಅನುಮೋದನೆ ಇಲ್ಲದಿದ್ದರೂ ವರ್ಗಾವಣೆಗೆ ಒಪ್ಪಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ, ಸಚಿವರುಗಳು ವರ್ಗಾವಣೆ ಆದೇಶವಿಲ್ಲದಿದ್ದರೂ ನಿರಂತರವಾಗಿ ವರ್ಗಾವಣೆ ಮಾಡಿದ್ದಾರೆ.
ಸಭೆಯೇ ನಡೆದಿಲ್ಲ, ಇವರ ಆದೇಶದಲ್ಲಿ ಸಮಿತಿಯ ತೀರ್ಮಾನ ಎಂದು ಹಾಕಿದ್ದಾರೆ ಎಂಬ ಮತ್ತೊಂದು ಗೊಂದಲ ಮೂಡಿದೆ.
ಇದನ್ನೂ ಓದಿ : Siddaramaiah : ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮ : ಸಿಟಿ ರವಿ ಹೇಳಿಕೆಗೆ ಮಾಜಿ ಸಿಎಂ ತಿರುಗೇಟು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.