Cabinet Meeting : ಜಿಂದಾಲ್‌ ಗೆ ನೀಡಿದ್ದ 3667 ಎಕರೆ ಜಮೀನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ!

ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ 

Last Updated : May 27, 2021, 03:55 PM IST
  • ಜಿಂದಾಲ್ ಸಂಸ್ಥೆಗೆ ಸರ್ಕಾರ ಸುಮಾರು 3,667 ಎಕರೆ ಭೂಮಿ
  • ವರಿಷ್ಠರ‌ ಸೂಚನೆ ಮೇರೆಗೆ ಇಂದು ನಡೆದ ಸಚಿವ ಸಂಪುಟದಲ್ಲಿ ಚರ್ಚೆ
  • ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ
Cabinet Meeting : ಜಿಂದಾಲ್‌ ಗೆ ನೀಡಿದ್ದ 3667 ಎಕರೆ ಜಮೀನು ವಾಪಸ್ ಪಡೆಯಲು ಸರ್ಕಾರ ನಿರ್ಧಾರ! title=

ಬೆಂಗಳೂರು : ಜಿಂದಾಲ್‌ ಸಂಸ್ಥೆಗೆ ಮಂಜೂರು ಮಾಡಿದ್ದ 3667 ಎಕರೆ ಜಮೀನನ್ನು ವಾಪಸ್ ಪಡೆಯಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ  ನಿರ್ಧರಿಸಲಾಗಿದೆ.

ಭೂ ವಿವಾದ ಬಗ್ಗೆ ಸ್ವಪಕ್ಷೀಯ ಶಾಸಕರು ದೆಹಲಿಗೆ ದೂರು ನೀಡಿದ್ದರು. ವರಿಷ್ಠರ‌ ಸೂಚನೆ ಮೇರೆಗೆ ಇಂದು ನಡೆದ ಸಚಿವ ಸಂಪುಟ(Cabinet Meeting)ದಲ್ಲಿ ಚರ್ಚೆ ನಡೆದು, ಜಿಂದಾಲ್ ಭೂಮಿ ಸ್ಥಿರೀಕರಣ ಮಾಡದೆ ಇರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : Siddaramaiah : '2023 ರ ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತೇನೆ, ಆದ್ರೆ, ಯಾವ ಮತ ಕ್ಷೇತ್ರ ಅಂತ ನಿರ್ಧರಿಸಿಲ್ಲ'

ಜಿಂದಾಲ್ ಸಂಸ್ಥೆಗೆ ಸರ್ಕಾರ ಸುಮಾರು 3,667 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿರುವ ಕ್ರಮದ ವಿರುದ್ಧ ವಕೀಲ ದೊರೆರಾಜು ಅವರು ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಅವರ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ : Covidwar Karnataka : ನಿಮ್ಮ ಊರಿನಲ್ಲಿ ಎಷ್ಟು 'ಕೊರೋನಾ ಪ್ರಕರಣಗಳಿವೆ' ತಿಳಿಯಬೇಕೆ? ಹಾಗಿದ್ದರೇ ಇಲ್ಲಿ ಓದಿ!

ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರ ಸಂಬಂಧ ಸುದೀರ್ಘ ಚರ್ಚೆ ನಡೆಸದೆ ತರಾತುರಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವುದಾಗಿ ಆರೋಪಿಸಲಾಗಿತ್ತು. ಈ ರೀತಿ ಭೂಮಿ ಹಸ್ತಾಂತರಿಸಿರುವುದು ಕಾನೂನು ಬಾಹಿರವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಜಿಂದಾಲ್ ಸಂಸ್ಥೆ(Jindal Compny) ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ.1078 ಕೋಟಿ ರೂಪಾಯಿ ನಷ್ಟವಾಗಿರುವ ಬಗ್ಗೆ ಲೋಕಾಯುಕ್ತ ವರದಿ ನೀಡಿದ್ದರೂ ಪರಭಾರೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಕೂಡ ಏರಿತ್ತು.

ಇದನ್ನೂ ಓದಿ : SR Vishwanath : 'ಮುಂದಿನ 2 ವರ್ಷ ಯಡಿಯೂರಪ್ಪ‌ರೇ ರಾಜ್ಯದ ಸಿಎಂ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News